ನವದೆಹಲಿ ; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷದ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2024-2025ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸುವಾಗ ನರೇಂದ್ರ ಮೋದಿ ಸರ್ಕಾರದ 9 ಆದ್ಯತೆಗಳು ಮತ್ತು ದೇಶವನ್ನು ಮುನ್ನಡೆಸಲು 4 ಆಧಾರ ಸ್ತಂಭಗಳನ್ನು ಘೋಷಿಸಿದ್ದಾರೆ.
ಟಿಡಿಎಸ್ ತಡಾಗಿ ಪಾವತಿಸಿದರೆ ಇನ್ನು ಮುಂದೆ ದಂಡವಿಲ್ಲ.
ಪಾವತಿ ವಿಧಾನ ಇನ್ನಷ್ಟು ಸರಳಗೊಳಿಸಿದ ಕೆಂದ್ರ. ಹೀಡಿಕೆದಾರರಿಗೆ ವಿಧಿಸುತ್ತಿದ್ದ ಏಂಜಲ್ ಟ್ಯಾಕ್ಸ್ ರದ್ದು.
ಜಿಎಸ್ಟಿಯು ಬಡವರ ಮೇಲಿನ ತೆರಿಗೆ ಹೊರೆಯನ್ನು ಇಳಿಸಿದೆ. ಜಿಎಸ್ಟಿಯನ್ನು ಇನ್ನಷ್ಟು ಸರಳಗೊಳಿಸಲು ಕೇಂದ್ರ ಸರ್ಕಾರ ತಿಳಿಸಿದೆ. ಕಸ್ಟಮ್ಸ್ ಸುಂಕವನ್ನು ಇದಕ್ಕೂ ಮೊದಲು ಇಳಿಸಲಾಗಿದೆ. ಇನ್ನಷ್ಟು ಕಸ್ಟಮ್ಸ್ ಸುಂಕವನ್ನು
ಪ್ರಸ್ತಾಪ ಇದೆ. ಅದರಂತೆ, ಔಷಧ, ಮೆಡಿಕಲ್ ಉಪಕರಣಗಳು, ಮೂರು ಕ್ಯಾನ್ಸರ್ ಔಷಧಿಗಳನ್ನು ಕಸ್ಟಮ್ಸ್ ಸುಂಕದಿಂದ ಮುಕ್ತಗೊಳಿಸಲಾಗಿದೆ.
ವಾತ್ಸಲ್ಯ ಯೋಜನೆ ಘೋಷಿಸಿದ ಕೇಂದ್ರ. ಈ ಮೂಲಕ ಬಾಲಕಿಯರಿಗೆ ಅನುಕೂಲ. ಈ ಯೋಜನೆ ಮೂಲಕ ಬಾಲಕಿಯರ ಹೆಸರಿನಲ್ಲಿ ಖಾತೆ ತೆರೆದು ಅವರ ಹೆಸರಿನಲ್ಲಿ ಹಣ ಜಮೆ.
ಕಾರ್ಮಿಕರ ಅನುಕೂಲಕ್ಕಾಗಿ ಇ-ಶ್ರಮ ಪೋರ್ಟ್ ಆರಂಭ, ಭೂ ಅಧಾರ್ ಮೂಲಕ ಭೂ ದಾಖಲೆ ಡಿಜಿಟಲೀಕರಣ, ರಾಜ್ಯಗಳಿಗೆ 50 ವರ್ಷಗಳ ಕಾಲ ಬಡ್ಡಿರಹಿತ ಸಾಲ ನೀಡುವುದಾಗಿ ಘೋಷಣೆ.
ಗಯಾ, ಬೋಧ್ಗಯಾ ಅಭಿವೃದ್ಧಿ. ಒಡಿಶಾ ದೇಗುಲಗಳಿಗೆ ಸಹಾಯಹಸ್ತ. ಪ್ರವಾಸಿ ಸ್ಥಳವಾಗಿ ನಳಂದಾ ವಿವಿಯ ಅಭಿವೃದ್ಧಿ. ಬೋಧ್ಗಯಾ, ವಿಷ್ಣುಪಾದ ದೇವಸ್ಥಾನ ಕಾಶಿ ಮಾದರಿಯಲ್ಲಿ ಅಭಿವೃದ್ಧಿ.
ಬಿಹಾರಕ್ಕೆ ಏನೆಲ್ಲಾ ಕೊಡುಗೆಗಳು..?
ಕೇಂದ್ರ ಸರ್ಕಾರದ ಈ ಅವಧಿಯ ಬಜೆಟ್ನಲ್ಲಿ ಬಿಹಾರಕ್ಕೆ ಒಟ್ಟು 4 ಹೊಸ ಎಕ್ಸ್ಪ್ರೆಸ್ ಹೈವೇಗಳು ದಕ್ಕಿವೆ. ಒಟ್ಟು 26 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 4 ಎಕ್ಸ್ಪ್ರೆಸ್ ಹೈವೇಗಳು ಭವಿಷ್ಯದಲ್ಲಿ ಬಿಹಾರದಲ್ಲಿ ನಿರ್ಮಾಣವಾಗಲಿವೆ. ಅದು ಅಲ್ಲದೆ ಬಿಹಾರಕ್ಕಾಗಿ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಅಮೃತಸಹರ -ಗಯಾ ಎಕನಾಮಿಕ್ ಕಾರಿಡಾರ್ ನಿರ್ಮಾಣದ ಯೋಜನೆಗೆ ಈ ಬಾರಿ ಬಜೆಟ್ನಲ್ಲಿ ಅನುದಾನ ಮೀಸಲು ಇಡಲಾಗಿದೆ.
ಇನ್ನು ಚಂದ್ರಬಾಬು ನಾಯ್ಡು ಆಡಳಿತವಿರುವ ಆಂಧ್ರಪ್ರದೇಶಕ್ಕೂ ಕೂಡ ವಿಶೇಷ ಅನುದಾನವನ್ನು ಈ ಬಾರಿಯ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ ಆಂಧ್ರಪ್ರದೇಶದ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆಯನ್ನು ನೀಡುವ ಮೂಲಕ 15 ಸಾವಿರ ಕೋಟಿ ರೂಪಾಯಿ ಅನುದಾನವನ್ನು ನೆರೆ ರಾಜ್ಯಕ್ಕೆ ನೀಡಲಾಗಿದೆ. ವಿಶೇಷ ಅನುದಾನದ ಮೂಲಕ ಅಮರಾವತಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
ಕೃಷಿ ಕ್ಷೇತ್ರ…
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರವರು 2024-25ರ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ನಲ್ಲಿ ರೈತರಿಗೂ ಸಿಹಿ ಸುದ್ದಿ ನೀಡಿದ್ದಾರೆ. ಕೃಷಿಯನ್ನೇ ನಂಬಿದ್ದ ರೈತನಿಗೆ ಈ ಬಾರಿಯ ಬಜೆಟ್ನಲ್ಲಿ ಏನೆಲ್ಲಾ ಸಿಕ್ಕಿದೆ ಎಂದು ನೋಡೋಣ..
ಕೃಷಿ ಸಂಬಂಧಿತ ವಲಯಕ್ಕೆ 1.52 ಲಕ್ಷ ಕೋಟಿ ಮೀಸಲಿಟ್ಟಿದೆ. ಕೃಷಿ ಸಂಶೋಧನೆಯಲ್ಲಿ ಬದಲಾವಣೆಗೆ ಆರ್ಥಿಕ ನೆರವು ನೀಡಿದೆ. ಉತ್ಪಾದನೆಯನ್ನು ಹೆಚ್ಚಿಸಲು ಕೃಷಿ ಸಂಶೋಧನೆಗೆ ಮಹತ್ವ ಕೊಡಲಾಗಿದೆ.
2 ವರ್ಷದಲ್ಲಿ 1 ಕೋಟಿ ರೈತರಿಗೆ ನ್ಯಾಚುರಲ್ ಫಾರ್ಮಿಂಗ್ಗೆ ನೆರವು ನೀಡಲು ಮುಂದಾಗಿದೆ. ತೈಲ ಬೀಜಗಳ ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸುವ ಗುರಿಯನ್ನು ಹೊಂದಿದೆ. ಗ್ರಾಮೀಣ ಭಾಗದಲ್ಲಿ ಆರ್ಥಿಕತೆಗೆ ಹೆಚ್ಚು ಒತ್ತು, ಇದಲ್ಲದೆ ರೈತರಿಗಾಗಿ 10 ಸಾವಿರ ಬಯೋ ರಿಸರ್ಚ್ ಕೇಂದ್ರಗಳ ಸ್ಥಾಪನೆ ಮಾಡುವುದಾಗಿ ಈ ಬಾರಿಯ ಬಜೆಟ್ನಲ್ಲಿ ತಿಳಿಸಲಾಗಿದೆ.
ಖಾರಿಫ್ ಬೆಳೆಗೆ ಡಿಜಿಟಲ್ ಕ್ರಾಪ್ ಸರ್ವೇ ನಡೆಸುವುದು, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಬೆಳೆ ಬೆಳೆಯಲು ಹೊಸ ಮಾದರಿಯ ಬೀಜಗಳು ವಿತರಿಸುವ ಬಗ್ಗೆ ಈ ಬಾರಿಯ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. ಇದಲ್ಲದೆ, ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆ. ತರಕಾರಿ ಬೆಳೆಗಳ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ, ಬೆಳೆಗಳ ಉತ್ತೇಜನಕ್ಕಾಗಿ ರೈತರಿಗೆ ಸಹಾಯ ಮತ್ತು ನೈಸರ್ಗಿಕ ಕೃಷಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್
ಯುವ ಜನರಿಗೆ ಉದ್ಯೋಗಕ್ಕಾಗಿ 5 ಹೊಸ ಸ್ಕೀಮ್ಗಳು
4 ವರ್ಷಗಳ ಪಿಎಫ್ ಬೆಂಬಲದ ಸ್ಕೀಮ್ಗಳು ಘೋಷಣೆ
ಉದ್ಯೋಗದಾತರಿಗೆ ನೆರವು ನೀಡಲು ಪಿಎಫ್ ಬೆಂಬಲ ಸ್ಕೀಮ್
ಎಂಪ್ಲಾಯ್ಮೆಂಟ್ ಲಿಂಕ್ಡ್ ಸ್ಕೀಮ್ಗಳು ಘೋಷಣೆ
1 ಸಾವಿರ ಇಂಡಸ್ಟ್ರಿಯಲ್ ತರಬೇತಿ ಕೇಂದ್ರಗಳ ಉನ್ನತೀಕರಣ
20 ಲಕ್ಷ ಯುವ ಜನರಿಗೆ ಕೌಶಲ್ಯ ತರಬೇತಿ ನೀಡಲು ಯೋಜನೆ
ಮಹಿಳೆಯರಿಗಾಗಿ ವಿಶೇಷ ಕೌಶಲ್ಯ ತರಬೇತಿ ಕಾರ್ಯಕ್ರಮಗಳು
10 ಲಕ್ಷದವರೆಗೆ ಉನ್ನತ ಶಿಕ್ಷಣಕ್ಕೆ ಎಜುಕೇಷನ್ ಲೋನ್
ಸರ್ಕಾರಿ ಸೌಲಭ್ಯವನ್ನು ಪಡೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ
ವಾರ್ಷಿಕ 1 ಲಕ್ಷ ವಿದ್ಯಾರ್ಥಿಗಳಿಗೆ ಶೇ.3ರಷ್ಟು ಬಡ್ಡಿ ದರದಲ್ಲಿ ಸಾಲ
ಇಪಿಎಫ್ ನೋಂದಣಿ ಆಧರಿಸಿ ಎಂಪ್ಲಾಯ್ಮೆಂಟ್ ಲಿಂಕ್ಡ್ ಇನ್ಸೆಂಟಿವ್
ಹೊಸದಾಗಿ ಕೆಲಸಕ್ಕೆ ಸೇರುವ ನೌಕರರಿಗೆ ಒಂದು ತಿಂಗಳ ವೇತನ
1 ತಿಂಗಳ ವೇತನ ಅಥವಾ 15 ಸಾವಿರ ರೂಪಾಯಿವರೆಗೆ ಇನ್ಸೆಂಟಿವ್
1 ಲಕ್ಷದೊಳಗಿನ ಮಾಸಿಕ ವೇತನ ಇರುವವರಿಗೆ ಈ ಇನ್ಸೆಂಟಿವ್ ಲಭ್ಯ
ಇದರಿಂದ ಭಾರತದ 2 ಕೋಟಿ 10 ಲಕ್ಷ ಯುಜನರಿಗೆ ಅನುಕೂಲ


