ನವದೆಹಲಿ : ಚುನಾವಣೆಗೂ ಮುನ್ನ ಸರ್ಕಾರಗಳು ಘೋಷಿಸುವ ಉಚಿತ ಕೊಡುಗೆಗಳ ವಿರುದ್ಧ ಸುಪ್ರೀಂ ಕೋರ್ಟ್ ಗರಂ ಆಗಿದೆ. ರಾಜ್ಯಗಳು ಹಾಗೂ ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳ ಸಂಸ್ಕೃತಿಯನ್ನು ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠವು ಖಂಡಿಸಿರುವುದ ಲ್ಲದೆ, ದೇಶದ ಆರ್ಥಿಕ ಅಭಿವೃದ್ಧಿಗೆ ಇದರಿಂದ ತೊಡಕಾಗಲಿದೆ ಎಂದೂ ಹೇಳಿದೆ.
ಬಹು ತೇಕ ರಾಜ್ಯಗಳು ವಿತ್ತೀಯ ಕೊರತೆ ಎದುರಿಸುತ್ತಿವೆ. ಅಭಿವೃದ್ಧಿ ಒಂದು ರೂಪಾ ಯಿಯೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಅಭಿವೃದ್ಧಿ
ಕಾರ್ಯಗಳನ್ನು ಕಡೆಗಣಿಸಿ ಉಚಿತ ಕೊಡುಗೆಗಳನ್ನು ಸರ್ಕಾರಗಳು ನೀಡುತ್ತಿವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ತಮಿಳುನಾಡು ಉಚಿತ ವಿದ್ಯುತ್ ಘೋಷಣೆ ಅರ್ಜಿ ವಿಚಾರಣೆ ಮಾಡಿದ ಕೋರ್ಟ್, ಈ ರೀತಿ ಭಾರೀ ದೊಡ್ಡ ಪ್ರಮಾಣದಲ್ಲಿ ಉಚಿತ ಕೊಡುಗೆಗಳನ್ನು ವಿತರಿಸುವುದರಿಂದ ದೇಶದ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾರೆಲ್ಲಾ ಉಚಿತ ಕೊಡುಗೆಗಳನ್ನು ಪಡೆಯುತ್ತಿದ್ದಾರೆಂಬುದು ಪರಿಶೀಲಿಸಬೇಕಾದ ಸಂಗತಿಯಲ್ಲವೇ ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಉಚಿತ ಕೊಡುಗೆಗಳನ್ನು ತಾವೇ ಭರಿಸುವುದಾಗಿ ರಾಜ್ಯ ಗಳು ಭರವಸೆ ನೀಡುತ್ತಿವೆ. ಆದರೆ ವಾಸ್ತವವಾಗಿ ತೆರಿಗೆದಾರರ ಹಣ ವನ್ನು ಬಳಸಿಕೊಳ್ಳಲಾಗುತ್ತದೆ ಎಂದೂ ಬೊಟ್ಟು ಮಾಡಿದರು.


