ನವದೆಹಲಿ : ಬಹು ನಿರೀಕ್ಷೆಯ ಕೇಂದ್ರ ಬಜೆಟ್ ಫೆ. 1 ರಂದು ಮಂಡನೆಯಾಗಲಿದೆ. ಸಂಸತ್ ನ ಬಜೆಟ್ ಅಧಿವೇಶನ ಜ. ೩೧ ರಿಂದ ಆರಂಭವಾಗಲಿದ್ದು, ಫೆ. 1 ರಂದು ಬಜೆಟ್ ಮಂಡನೆಯಾಗಲಿದೆ.
ಕೇಂದ್ರ ಸರ್ಕಾರದ 2025-26ನೇ ಸಾಲಿನ ಬಜೆಟ್ನ್ನು ಫೆ. 1 ರಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಸತತ ೮ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಕೇಂದ್ರದ ಈ ಸಾಲಿನ ಬಜೆಟ್ನಲ್ಲಿ ಹಲವು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದ್ದು, ರೈತರು, ಕಾರ್ಮಿಕರು ಹಾಗೂ ಮಹಿಳೆಯರ ಸಬಲೀಕರಣಕ್ಕೆ ವಿಶೇಷಯೋಜನೆಗಳನ್ನು ಕೇಂದ್ರ ಸರ್ಕಾರ ಪ್ರಕಟಿಸುವ ಸಾಧ್ಯತೆಗಳಿವೆ.
ನಾಡಿನ ಅನ್ನದಾತ ರೈತನ ಸಬಲೀಕರಣಕ್ಕೆ ಈ ಬಜೆಟ್ನಲ್ಲಿ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದ್ದು, ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡುವ ಹಣವನ್ನು 10 ಸಾವಿರ ರೂ.ಗೆ ಏರಿಕೆ ಮಾಡುವ ಘೋಷಣೆಯೂ ಬಜೆಟ್ನಲ್ಲಿ ಆಗಲಿದೆ ಎಂದು ಹೇಳಲಾಗಿದೆ. ಬಜೆಟ್ನಲ್ಲಿ ರೈತರಿಗೆ ಬಂಪರ್ ನೀಡುವ ಜತೆಗೆ ಕಾರ್ಮಿಕರು, ಮಹಿಳೆಯರು, ಯುವಕರ ಸಬಲೀಕರಣಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಯುವಕರಿಗೆ ಹೆಚ್ಚು ಉದ್ಯೋಗಾವಕಾಶವನ್ನು ಒದಗಿಸಲು ಅನುವಾಗುವಂತೆ ಯೋಜನೆಗಳನ್ನು ಬಜೆಟ್ನಲ್ಲಿ ಪ್ರಕಟಿಸುವ ಸಾಧ್ಯತೆಗಳು ಇವೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.
ಈ ಸಾಲಿನ ಕೇಂದ್ರ ಬಜೆಟ್ ಜನಪರ ಬಜೆಟ್ ಆಗಲಿದ್ದು, ಜನಸಾಮಾನ್ಯರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜನ ಸಾಮಾನ್ಯರ ಬಜೆಟ್ ಮಂಡಿಸುವರು ಎಂದು ಮೂಲಗಳು ವಿವರಿಸಿವೆ.
ಜ. 31 ರಿಂದ ಫೆ. 13ರ ವರೆಗೂ ನಡೆಯಲಿದ್ದು, ಮೊದಲ ದಿನ ಜನವರಿ 31 ರಂದು ರಾಷ್ಟçಪತಿ ದ್ರೌಪದಿಮುರ್ಮು ಅವರು ಲೋಕಸಭೆ ಹಾಗೂ ರಾಜ್ಯಸಭೆಯ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅದೇ ದಿನ ಆರ್ಥಿಕ ಸಮೀಕ್ಷೆ ಮಂಡನೆ ಕೂಡ ಆಗಲಿದೆ. ಸಂಸತ್ತಿನ ಬಜೆಟ್ ಅಧಿವೇಶನದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊAಡಿರುವ ಕೇAದ್ರದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ರಿಜಿಜು ಅವರು ಬಜೆಟ್ ಅಧಿವೇಶನದಮೊದಲ ದಿನ ಜ. ೩೧ ರಂದು ರಾಷ್ಟçಪತಿಗಳು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವರು. ಫೆ. 1 ರಂದು 2025-26ನೇ ಸಾಲಿನ ಕೆಂದ್ರ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗಲಿದೆ ಎಂದು ತಿಳಿಸಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ಭಾಗ ಜ. 31 ರಿಂದ ಫೆ. 13ರ ವರೆಗೂ 9 ದಿನಗಳ ಕಾಲ ನಡೆಯಲಿದ್ದು, ಈ ಸಂದರ್ಭದಲ್ಲಿ ರಾಷ್ಟçಪತಿಗಳ ಭಾಷಣಕ್ಕೆ ವಂದನಾರ್ಪಣೆ ಹಾಗೂ ಸರ್ಕಾರದ ಉತ್ತರ ಕಲಾಪ ನಡೆಯಲಿದೆ. ಬಜೆಟ್ ಅಧಿವೇಶನದ ೨ನೇ ಭಾಗ ಮಾ. 10 ರಿಂದ ಏ. 4 ರವರೆಗೂ ನಡೆಯಲಿದ್ದು, ಈ ವೇಳೆ ಬಜೆಟ್ ಪ್ರಸ್ತಾಪನೆಯ ಪೂರ್ಣಗೊಳಿಸುವಿಕೆ, ನಿಧಿ ಹಂಚಿಕೆ, ಬೇಡಿಕೆ ವಿಚಾರಗಳ ಚರ್ಚೆಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.


