ನವದೆಹಲಿ : ಜಮ್ಮು -ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಂತರ ಭಾರತ ಉಗ್ರರ ಭೇಟೆ ಆರಂಭಿಸಿರುವ ಬೆನ್ನಲ್ಲೆ ಭಾರತ- ಪಾಕ್ ಗಡಿಯಲ್ಲೂ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ಪಾಕ್ ಭಾರತ ಕೈಗೊಂಡಿರುವ ರಾಜತಾಂತ್ರಿಕ ಕ್ರಮಗಳಿAದ ಹತಾಶವಾಗಿ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ನಿನ್ನೆಯಿಂದ ನಡೆಸಿದ್ದು, ಇಂದೂ ಸಹ ಪಾಕ್‌ನ ಅಪ್ರಚೋದಿತ ಗುಂಡಿನ ದಾಳಿ ಮುಂದುವರೆದಿದ್ದು, ಭಾರತದ ಸೇನಾ ಪಡೆ ಸಹ ಪಾಕ್‌ಗೆ ದಿಟ್ಟ ಎದಿರೇಟು ನೀಡಿದೆ. ಪೆಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೆ ಭಾರತೀಯ ಸೇನೆಯಿಂದ ಬುಲ್ಡೋಜರ್ ಕಾರ್ಯಾಚರಣೆ ನಡೆಸಿದ್ದು ರಾತ್ರೋರಾತ್ರಿ ಮತ್ತೆ ಮೂವರು ಲಷ್ಕರ್ ಉಗ್ರರ ೭ ಮನೆಗಳ ನೆಲಸಮ ಮಾಡಿ ಪ್ರತೀಕಾರಕ್ಕೆ ಮುನ್ನುಡಿ ಬರೆದಿದೆ. ಇದರೊಂದಿಗೆ ಐವರು ಉಗ್ರರ ಮನೆಗೆ ದ್ವಂಸ ಮಾಡಲಾಗಿದೆ.
ಪುಲ್ವಾಮಾದಲ್ಲಿ ಅಹ್ಸಾನ್ ಶೇಖ್, ಶೋಪಿಯಾನ್‌ನಲ್ಲಿ ಶಾಹಿದ್ ಅಹ್ಮದ್ ಕುಟ್ಟೇ ಮತ್ತು ಕುಲ್ಗಾಮ್‌ನಲ್ಲಿ ಜಾಹಿದ್ ಅಹ್ಮದ್ ಅವರನ್ನು ಗುರಿಯಾಗಿಸಿಕೊಂಡು ಜಮ್ಮು ಮತ್ತು ಕಾಶ್ಮೀರ ಆಡಳಿತ ,ಲಷ್ಕರ್‌ಎ-ತೈಬಾ ಭಯೋತ್ಪಾದಕರ ಮನೆಗಳನ್ನು ಧ್ವಂಸಗೊಳಿಸಿದೆ ಪಾಕಿಸ್ತಾನಿ ಭಯೋತ್ಪಾದಕರಿಗೆ ನೇರ ಬೆಂಬಲ ನೀಡಿದ ಕಾಶ್ಮೀರ ಮೂಲದ ಮೂವರು ಲಷ್ಕರ್ ಓವಗ್ರೌçಂಡ್ ಕಾರ್ಯಕರ್ತರಲ್ಲಿ ಅಹ್ಸಾನ್ ಒಬ್ಬರಾಗಿದ್ದರೆ, ಕುಟ್ಟೇ ಮತ್ತು ಅಹ್ಮದ್ ಕಳೆದ 3-4 ವರ್ಷಗಳಿಂದ ರಾಷ್ಟç ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದರೊಂದಿಗೆ ಕಳೆದ 24 ಗಂಟೆಗಳಲ್ಲಿ ಧ್ವಂಸಗೊAಡ ಭಯೋತ್ಪಾದಕರ
ಮನೆಗಳ ಸಂಖ್ಯೆ ಐದಕ್ಕೆ ಏರಿದೆ. ಪೆಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗವಹಿಸಿದ ಕಾಶ್ಮೀರ ಮೂಲದ ಇತರ ಇಬ್ಬರು ಒಜಿಡಬ್ಲೂ÷್ಯಗಳಾದ ಆಸಿಫ್ ಶೇಖ್ ಮತ್ತು ಆದಿಲ್ ಥೋಕರ್ ಅವರ ಮನೆಗಳನ್ನು ಸ್ಫೋಟಿಸಲಾಗಿದೆ.
ಈ ಗುಂಡಿನ ಚಕಮಕಿಯಲ್ಲಿ ಯಾವುದೇ ಸಾವುನೋವುಗಳಾದ ವರದಿಯಾಗಿಲ್ಲ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಇದೆಲ್ಲದರ ಮಧ್ಯೆ 7 ಉಗ್ರರ ಮನೆಗಳನ್ನು ಸೇನಾಪಡೆ ಧ್ವಂಸಗೊಳಿಸಿದೆ. ಪೆÀಹಲ್ಗಾಮ್ ಭಯೋತ್ಪಾದಕ ದಾಳಿಗೆ ಗಡಿಯಾಚೆಗಿನ ಸಂಪರ್ಕದ ಹಿನ್ನೆಲೆಯಲ್ಲಿ, ಭಾರತ ಬಲವಾದ ಪ್ರತೀಕಾರದ ಸರಣಿ ಘೋಷಿಸಿದ್ದು ಈ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಕಳೆದ 65 ವರ್ಷಗಳಷ್ಟು ಹಳೆಯ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು, ಅಟ್ಟಾರಿ ಭೂ ಗಡಿ ದಾಟುವಿಕೆ ಮುಚ್ಚುವುದು ಮತ್ತು ಪಾಕಿಸ್ತಾನಿ ನಾಗರಿಕರಿಗೆ ವೀಸಾಗಳನ್ನು ರದ್ದುಗೊಳಿಸುವುದರ ಜೊತೆಗೆ ಪಾಕಿಸ್ತಾನಿ ಮಿಲಿಟರಿ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕುವುದು ಸೇರಿವೆ.
ಅಟ್ಟಾರಿ ಗಡಿಯ ಮೂಲಕ ಪ್ರವೇಶಿಸಿದ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ಮೇ 1 ರೊಳಗೆ ದೇಶ ತೊರೆಯುವಂತೆ ಭಾರತ ನಿರ್ದೇಶಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದೆ. ಮೂರನೇ ದೇಶಗಳ ಮೂಲಕ ಪರೋಕ್ಷ ವ್ಯಾಪಾರ ಸೇರಿದಂತೆ ನವದೆಹಲಿಯೊAದಿಗಿನ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಿದೆ. ಇದರ ಜೊತೆಗೆ, ಭಾರತ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿರುವುದನ್ನು ಇಸ್ಲಾಮಾಬಾದ್ ತಿರಸ್ಕರಿಸಿದೆ. ಪಾಕಿಸ್ತಾನದ ನೀರಿನ ಪಾಲನ್ನು ತಡೆಯುವ ಯಾವುದೇ ಪ್ರಯತ್ನವನ್ನು “ಯುದ್ಧದ ಕೃತ್ಯ” ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಸಿದೆ.