Tuesday, March 17, 2026
Flats for sale
Homeದೇಶನವದೆಹಲಿ : ಕಚ್ಚಾತೈಲದ ಬೆಲೆ ಭಾರೀ ಇಳಿಕೆ,ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ಕೇಂದ್ರ ಸರಕಾರ ಚಿಂತನೆ.

ನವದೆಹಲಿ : ಕಚ್ಚಾತೈಲದ ಬೆಲೆ ಭಾರೀ ಇಳಿಕೆ,ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ಕೇಂದ್ರ ಸರಕಾರ ಚಿಂತನೆ.

ನವದೆಹಲಿ : ಲೋಕಸಭಾ ಚುನಾವಣೆ ಹತ್ತಿರ ಬಂದಂತೆ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿಯುವ ಸಾಧ್ಯತೆ ಇದೆ. ಕಚ್ಚಾ ತೈಲದ ದರ ಕಡಿಮೆಯಾಗಿರುವುದರಿಂದ ಈ ಇಳಿಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿದ್ದರೂ, ಚುನಾವಣೆಯೇ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಭಾರೀ ಇಳಿಕೆ ಕಂಡಿದೆ. 2022 ರಲ್ಲಿ ಕಚ್ಚಾತೈಲದ ಬೆಲೆ ಭಾರೀ ಏರಿಕೆಯಾಗಿದ್ದಾಗ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 17 ರೂಪಾಯಿ ಹಾಗೂ ಡೀಸೆಲ್‌ಗೆ 35 ರೂಪಾಯಿವರೆಗೂ ಭಾರೀ ನಷ್ಟ ಅನುಭವಿಸುತ್ತಿತ್ತು. ಆದರೆ ಬಳಿಕ ದರದಲ್ಲಿ ಭಾರೀ ಇಳಿಕೆಯಾಯಿತಾದರೂ ತೈಲ ಕಂಪನಿಗಳು ಮಾತ್ರ ಬೆಲೆ ಇಳಿಸುವ ಔದಾರ್ಯ ತೋರಿಸಲಿಲ್ಲ. ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 7-10 ರೂ. ಹಾಗೂ ಡೀಸೆಲ್‌ಗೆ3-4 ರೂ. ಲಾಭ ಮಾಡಿಕೊಳ್ಳುತ್ತಿದೆ.

ಕಳೆದ 3 ತಿಂಗಳಲ್ಲಿ ಸುಮಾರು 28,೦೦೦ ಕೋಟಿ ರೂಪಾಯಿಯಷ್ಟು ಲಾಭ ಮಾಡಿಕೊಂಡಿದೆ.
ಒAದು ಕಡೆ ಲೋಕಸಭಾ ಚುನಾವಣೆ, ಇನ್ನೊಂದು ಕಡೆ ಮತ್ತೆ ಹೆಚ್ಚುತ್ತಿರುವ ಹಣದುಬ್ಬರ. ಹಣದುಬ್ಬರ ಹೆಚ್ಚಾದರೂ ರೆಪೋ ದರಗಳಲ್ಲಿ ಆರ್‌ಬಿಐ ವ್ಯತ್ಯಾಸ ಮಾಡಿಲ್ಲ. ಹೀಗಾಗಿ ಹಣದುಬ್ಬರವನ್ನೂ ಹತೋಟಿಗೆ ತಂದು, ಲೋಕಸಭೆ ಚುನಾವಣೆಗೂ ವಿರೋಧಿಗಳ ಅಸ್ತçವನ್ನು ದುರ್ಬಲ ಮಾಡಲು ಈಗ ದರ ಇಳಿಕೆಯ ಚಿಂತನೆ ನಡೆದಿದೆ. ಸಾರ್ವಜನಿಕ ತೈಲ ಕಂಪನಿಗಳಿಗೆ ಆಗಿದ್ದ ನಷ್ಟ ಈಗ ಸರಿದೂಗಿದ್ದು, ಇನ್ನು ಅಗ್ಗದ ದರದಲ್ಲಿ ದೊರೆಯುತ್ತಿರುವ ಕಚ್ಚಾ ತೈಲದ ಲಾಭವನ್ನು ಸಾಮಾನ್ಯ ಜನರಿಗೆ ವರ್ಗಾಯಿಸಬೇಕು ಎಂದು ಸರ್ಕಾರ ನಿರ್ಧರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular