Thursday, March 12, 2026
Flats for sale
Homeದೇಶನವದೆಹಲಿ : ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿದ ಮೆಹುಲ್ ಚೋಕ್ಸಿಯಾ...

ನವದೆಹಲಿ : ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿದ ಮೆಹುಲ್ ಚೋಕ್ಸಿಯಾ ಬಂಧನ..!

ನವದೆಹಲಿ : ಕೇಂದ್ರ ತನಿಖಾ ಸಂಸ್ಥೆಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿ ವಿವಿಧ ದೇಶಗಳಲ್ಲಿದ್ದ ಆರ್ಥಿಕ ಅಪರಾಧಿ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಿದೆ . ಕೇAದ್ರ ತನಿಖಾ ದಳ – ಸಿಬಿಐ ಮತ್ತು ಜಾರಿ ನಿರ್ದೇಶನಾಲಯ- ಇಡಿ ಸೇರಿದಂತೆ ಭಾರತೀಯ ಏಜೆನ್ಸಿಗಳ ಕೋರಿಕೆಯ ಮೇರೆಗೆ ವಂಚಕ ಉದ್ಯಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈ ನ್ಯಾಯಾಲಯಗಳು ಹೊರಡಿಸಿದ್ದ ಜಾಮೀನು ರಹಿತ ವಾರೆಂಟ್ ಅಡಿ ಈ ಕ್ರಮ ಕೈಗೊಳ್ಳಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬAಧಿಸಿದAತೆ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ. ಕೇಂದ್ರ ತನಿಖಾ ದಳ -ಸಿಬಿಐ ಮತ್ತು ಜಾರಿ ನಿರ್ದೇಶನಾಲಯ -ಇಡಿ ಸೇರಿದಂತೆ ಭಾರತೀಯ ಏಜೆನ್ಸಿಗಳ ಕೋರಿಕೆಯ ಮೇರೆಗೆ ಈತನ ಬಂಧನವಾಗಿದೆ. 2018 ರಿಂದ ಪರಾರಿಯಾಗಿದ್ದ ಮೆಹುಲ್ ಚೋಕ್ಸಿಯನ್ನು ಏಪ್ರಿಲ್ 12 ರಂದು ಬೆಲ್ಜಿಯಂನ ಆಸ್ಪತ್ರೆಯಲ್ಲಿ ಬಂಧಿಸಲಾಗಿದೆ, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ.ಭಾರತೀಯ ಅಧಿಕಾರಿಗಳು ಹಸ್ತಾಂತರ ಪ್ರಯತ್ನಗಳನ್ನು ಹೆಚ್ಚಿಸಿದ ಕೆಲವು ದಿನಗಳ ನಂತರ ಅವರ ಬಂಧನವಾಗಿದೆ.

ವಾಪಸಾತಿಗೆ ಹೆಚ್ಚಿನ ಪ್ರಯತ್ನ ಮಾಡಲು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ, ಅವರು ಅನಾರೋಗ್ಯದ ಕಾರಣ ಯುರೋಪ್‌ಗೆ ಪ್ರಯಾಣಿಸಿದ್ದರು ಎಂದು ಮೂಲಗಳು ತಿಳಿಸಿವೆ. ಸಿಬಿಐ ಮತ್ತು ಇಡಿ ಪ್ರಕರಣವನ್ನು ಮೆಹುಲ್ ಚೋಕ್ಸಿಯ ಗೀತಾಂಜಲಿ ಗ್ರೂಪ್‌ನ ಬ್ಯಾಂಕಿಂಗ್ ಮುಖ್ಯಸ್ಥ ವಿಪುಲ್ ಚಿತಾಲಿಯಾ ಗುಂಪಿನ ಹಣಕಾಸು ತಂಡದ ಸದಸ್ಯ ದಿವಂಗತ ದೀಪಕ್ ಕುಲಕರ್ಣಿ ಮತ್ತು ಪಿಎನ್‌ಬಿಯ ಮಾಜಿ ಮುಖ್ಯ ವ್ಯವಸ್ಥಾಪಕ ಗೋಕುಲ್‌ನಾಥ್ ಶೆಟ್ಟಿ ಸೇರಿದಂತೆ ಪ್ರಮುಖ ವ್ಯಕ್ತಿಗಳು ಒದಗಿಸಿದ ಸಾಕ್ಷ್ಯ ಗಳು ಮತ್ತು ದಾಖಲೆಗಳ ಆಧಾರದಮೇಲೆ ಬಂಧನ ಮಾಡಲಾಗಿದೆ.

ಗೀತಾಂಜಲಿ ಜೆಮ್ಸ್ ಅನ್ನು ಇಡಿ ಸಲ್ಲಿಸಿದ ಬಹು ಆರೋಪಪಟ್ಟಿಗಳಲ್ಲಿ ಹೆಸರಿಸಲಾಗಿದೆ, ಆದರೆ ಸಿಬಿಐ ಅವರ ಮೇಲೆ, ನೀರವ್ ಮೋದಿ ಮತ್ತು ಇತರರನ್ನು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ – ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರದ ಆರೋಪ ಹೊರಿಸಿ ಅನುಗುಣವಾದ ಪ್ರಕರಣಗಳನ್ನು ಸಹ ದಾಖಲಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular