Friday, March 13, 2026
Flats for sale
Homeದೇಶನವದೆಹಲಿ ; ಪಂಚ ರಾಜ್ಯ ಚುನಾವಣೆ ಘೋಷಣೆ.

ನವದೆಹಲಿ ; ಪಂಚ ರಾಜ್ಯ ಚುನಾವಣೆ ಘೋಷಣೆ.

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ
ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ. ಮ.ಪ್ರ. ನ.೧೭ ರಾಜಸ್ಥಾನ ನ.೨೩ ತೆಲಂಗಾಣ ನ.೩೦ ಮತದಾನ ಮಿಜೋರಾಂ ನ.೭, ಛತ್ತೀಸ್ ಗಢದಲ್ಲಿ ೨ ಹಂತದಲ್ಲಿ ಮತದಾನ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಚುನಾವಣೆಯ ವಿವರ ಪ್ರಕಟಿಸಿದರು. ನ. ೧೭ ರಿಂದ ೩೦ ರವರೆಗೆ ಮಧ್ಯಪ್ರದೇಶ, ರಾಜಸ್ಥಾನ , ಛತ್ತೀಸ್‌ಗಢ, ಮಿಜೋರಾಂ ಮತ್ತು ತೆಲಂಗಾಣದಲ್ಲಿ ಮತದಾನ ನಡೆಯಲಿದೆ. ಡಿ. ೩ ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದರು.

ಎಲ್ಲ ರಾಜ್ಯಗಳಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಸಲು ಆಯೋಗ ಸಕಲ ರೀತಿಯಲ್ಲಿ ಸಿದ್ಧವಾಗಿದೆ ಎಂದು ಅವರು ಹೇಳಿದರು.

ಸಣ್ಣರಾಜ್ಯವಾದ ಮಿಜೋರಾಂನಲ್ಲಿ ನ. ೭ ರಂದು ಚುನಾವಣೆ ನಡೆಯಲಿದೆ. ನಕ್ಸಲ್‌ಪೀಡಿತ ಛತ್ತೀಸ್‌ಗಢದಲ್ಲಿ ನ. ೭ ಮತ್ತು ೧೭ ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ ಉಳಿದಂತೆ ಮಧ್ಯಪ್ರದೇಶದಲ್ಲಿ ನ. ೧೭ , ರಾಜಸ್ಥಾನದಲ್ಲಿ ನ.೨೩ ಮತ್ತು ತೆಲಂಗಾಣದಲ್ಲಿ ನ.೩೦ ರಂದು ಚುನಾವಣೆ ನಡೆಯಲಿದೆ ಎಂದು ಅವರು ವಿವರಿಸಿದರು.

ಮಿಜೋರಾಂ ಸರ್ಕಾರದ ಅವಧಿ ಡಿ.೧೭ರೊಳಗೆ ಮುಗಿಯುತ್ತದೆ. ಉಳಿದ ನಾಲ್ಕು ರಾಜ್ಯ ಸರ್ಕಾರಗಳ ಅವಧಿ ೨೦೨೪ರ ಜ. ೧೬ರೊಳಗೆ ಮುಗಿಯಲಿದೆ ಎಂದು ರಾಜೀವ್ ಕುಮಾರ್ ಅಂಕಿ-ಅAಶಗಳನ್ನು ಒದಗಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular