ನವದೆಹಲಿ : `ನಾನು ನಿವೃತ್ತಿಯಾಗುತ್ತೇನೆ ಅಥವಾ ಮತ್ತಿನ್ಯಾರೋ ನಿವೃತ್ತಿ ಆಗಬೇಕು ಅಂತ ನಾನೆಂದೂ ಹೇಳಿಲ್ಲ. ನಾವು ಸಂಘದ ಸ್ವಯಂ ಸೇವಕರು ಯಾವಾಗ ಬೇಕಾದರೂ ನಿವೃತ್ತಿಯಾಗಲು ಸಿದ್ಧರಿದ್ದೇವೆ ಮತ್ತು ಸಂಘ ಎಲ್ಲಿಯವರೆಗೆ ಕೆಲಸ ಮಾಡಲು ಹೇಳುತ್ತದೆಯೋ ಅಲ್ಲಿಯ ತನಕ ಕೆಲಸ ಮಾಡಲೂ ತಯಾರಿದ್ದೇವೆ’ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ನನಗೀಗ ೭೫ ವರ್ಷ ಪೂರ್ಣವಾದವು. ನಾನು ಆರಾಮಾಗಿ ನಿವೃತ್ತಿ ಜೀವನ ಅನುಭವಿಸುತ್ತೇನೆ ಎಂದು ಹೇಳಲಾಗುವುದಿಲ್ಲ. ಸಂಘದಲ್ಲಿ ಇAತಹ ಯಾವುದೇ ನಿಯಮಗಳಿಲ್ಲ. ಒಂದೊಮ್ಮೆ ನನಗೆ ೩೫ ವರ್ಷವಾಗಿದ್ದು, ಆಫೀಸಿನಲ್ಲಿ ಕುಳಿತು (ಎಲ್ಲೂ ತಿರುಗಾಡದೆ, ಒಂದೇ ಕಡೆ ಕುಳಿತು) ಕೆಲಸ ಮಾಡಲು ಸಂಘ ಹೇಳಿದರೆ ಅದಕ್ಕೂ ನಾನು ಸಿದ್ಧನೇ. ನಾನು ಇದನ್ನೇ ಮಾಡುತ್ತೇನೆ, ಇದನ್ನು ಮಾಡುವುದಿಲ್ಲ ಎಂಬುದಕ್ಕೆಲ್ಲ ಸಂಘದಲ್ಲಿ ಅವಕಾಶವೇ ಇಲ್ಲ. ಸಂಘ ಏನು ಹೇಳುತ್ತದೆಯೋ ಅದನ್ನು ನಾವು ಮಾಡಬೇಕು’ ಎಂದು ಹೇಳಿದರು.
ದೇಶದಲ್ಲಿ 2.1 ಮಕ್ಕಳನ್ನು ಹೇರುವ ಮಹಿಳೆಯರ ಫಲವತ್ತತೆ ಬದಲಾಯಿಸಲು ಪ್ರತಿಯೊಂದು ಕುಟುಂಬವೂ ಮೂವರು ಮಕ್ಕಳನ್ನು ಹೊಂದಬೇಕು' ಎಂದು ಭಾಗವತ್ ಕಟ್ಟಪ್ಪಣೆ ಮಾಡಿದ್ದಾರೆ.
ಕುಟುಂಬದಲ್ಲಿ ಮೂರಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ ಸಮುದಾಯ ಕ್ರಮೇಣವಾಗಿ ನಶಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇಂತಹ ಪರಿಸ್ಥಿತಿ ಎಲ್ಲಾ ದೇಶಗಳಲ್ಲೂ ಇರುವುದರಿಂದ ಪ್ರತಿ ದಂಪತಿಯೂ ಮೂವರು ಮಕ್ಕಳನ್ನು ಹೊಂದಲೇಬೇಕಾಗಿದೆ’ ಎಂದರು. ಸರಿಯಾದ ವಯಸ್ಸಿನಲ್ಲೇ ಮದುವೆಯಾಗಿ ಮೂವರು ಮಕ್ಕಳನ್ನು ಹೆತ್ತರೆ, ಪೋಷಕರು ಹಾಗೂ ಮಕ್ಕಳು ಇಬ್ಬರೂ ಆರೋಗ್ಯವಂತರಾಗಿರುತ್ತಾರೆ’ ಎಂದು ಹೇಳಿದರು.