Tuesday, October 21, 2025
Flats for sale
Homeದೇಶನವದೆಹಲಿ : ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ, ಆಡಳಿತ ಮತ್ತು ವಿಪಕ್ಷಗಳ ನಡುವಿನ ಮಾತಿನ...

ನವದೆಹಲಿ : ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ, ಆಡಳಿತ ಮತ್ತು ವಿಪಕ್ಷಗಳ ನಡುವಿನ ಮಾತಿನ ಸಮರಕ್ಕೆ ಅಖಾಡ ಸಜ್ಜು..!

ನವದೆಹಲಿ : ಸಂಸತ್ತಿನ ಮುಂಗಾರು ಅಧಿವೇಶನ ನಾಳೆಯಿಂದ ಆರAಭವಾಗಲಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವಿನ ಮಾತಿನ ಸಮರಕ್ಕೆ ಅಖಾಡ ಸಜ್ಜಾಗಿದೆ. ಬಿಹಾರ ವಿಧಾನಸಭಾ ಚುನಾವಣೆ ಹತ್ತಿರದಲ್ಲಿರುವಾಗಲೇ ನಡೆಯಲಿರುವ ಈ ಸಂಸತ್ ಅಧಿವೇಶನ ರಾಜಕೀಯ ಮೇಲಾಟಕ್ಕೆ ವೇದಿಕೆಯಾಗಲಿದೆ.

ಬಿಹಾರ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಆಡಳಿತಾರೂಢ ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟದ ನಡುವೆ ಈ ಅಧಿವೇಶನದಲ್ಲಿ ಭಾರಿ
ವಾಕ್ಸಮರವೇ ನಡೆಯಲಿದ್ದು, ಬಿಹಾರದಲ್ಲಿ ನಡೆದಿರುವ ಮತದಾರರ ಪಟ್ಟಿಯ ಪರಿಷ್ಕರಣೆ, ಆಪರೇಷನ್ ಸಿಂಧೂರ, ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತ, ಭಾರತ-ಪಾಕ್ ನಡುವಣ ಕದನ ವಿರಾಮದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಮಧ್ಯ ಪ್ರವೇಶ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊAಡು ಆಡಳಿತಾರೂಢ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ತುದಿಗಾಲ ಮೇಲೆ ನಿಂತಿವೆ.

ಉಳಿದಂತೆ ಬಿಹಾರದ ವಿಷಯದ ಜೊತೆಗೆ ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ್ ಮತ್ತು ವಿದೇಶಾಂಗ ನೀತಿ ಸೇರಿದಂತೆ ಮತ್ತಿತರ ವಿಷಯ ಗಳನ್ನು ಮುಂದಿಟ್ಟುಕೊAಡು ಪ್ರತಿ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿದ್ದು ತಿರುಗೇಟು ನೀಡಲು ಆಡಳಿತ ಪಕ್ಷ ಹಲವು ವಿಷಯ ಪ್ರಸ್ತಾಪ ಮಾಡುವ ನಿರೀಕ್ಷೆ ಇದೆ.

ವಿಪಕ್ಷಗಳ ವಾಗ್ದಾಳಿಯನ್ನು ಎದುರಿಸಲು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಸಹ ತನ್ನ ಬತ್ತಳಿಕೆಯಲ್ಲಿ ಪ್ರತ್ಯಾಸ್ತçಗಳನ್ನು ಸಿದ್ಧ ಮಾಡಿಕೊಂಡಿದ್ದು, ಸಂಸತ್ತಿನ ಕಲಾಪಗಳು ಕಾವೇರಲಿರುವುದು ನಿಶ್ಚಿತ. ನಾಳೆಯಿಂದ ಆರಂಭವಾಗಲಿರುವ ಸAತ್ತಿನ ಮುಂಗಾರು ಅಧಿವೇಶನ
ಆಗಸ್ಟ್ 21ರ ವರೆಗೂ ನಡೆಯಲಿದ್ದು, ಈ ಅಧಿವೇಶನದಲ್ಲಿ 8 ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಅಧಿವೇಶನದಲ್ಲಿ ಮಹತ್ವದ ಮಸೂದೆಗಳು ಮಂಡನೆಯಾಗಲಿದ್ದು, ಮಣಿಪುರ ಸರಕು ಮತ್ತು ಸೇವೆ ಮಸೂದೆ, ತೆರಿಗೆ ಕಾನೂನುಗಳ ಜತೆಗೆ ಭೂ ಪರಂಪರೆ ತಾಣಗಳು ಮತ್ತು ಭೂಅವಶೇಷಗಳ ಸಂರಕ್ಷಣೆ ಮತ್ತು ನಿರ್ವಹಣೆ ಮಸೂದೆ, ಕಲ್ಲು ಗಣಿ ಅಭಿವೃದ್ಧಿ ಮತ್ತು ನಿಯಂತ್ರಣ ಮಸೂದೆ, ರಾಷ್ಟಿçÃಯ ಕ್ರೀಡಾ ಆಡಳಿತ ಮತ್ತು ಡೋಪಿಂಗ್ ವಿರೋಧಿ ತಿದ್ದುಪಡಿ ಮಸೂದೆಗಳು ಸಂಸತ್‌ನಲ್ಲಿ ಮಂಡನೆಯಾಗಲಿವೆ ಎAದು ಹೇಳಲಾಗಿದೆ.

ಮಣಿಪುರದಲ್ಲಿ ರಾಷ್ಟçಪತಿ ಆಳ್ವಿಕೆಯನ್ನು ವಿಸ್ತರಿಸುವ ಪ್ರಸ್ತಾವಕ್ಕೂ ಸಂಸತ್‌ನಲ್ಲಿ ಅನುಮೋದನೆ ಪಡೆಯುವ ಸಾಧ್ಯತೆಗಳಿವೆ. ನಾಳೆಯಿಂದ ಆ.21ರ ವರೆಗೂ ಸಂಸತ್ ಅಧಿವೇಶನ ನಡೆಯಲಿದ್ದು, ಒಟ್ಟು 21 ದಿನಗಳ ಕಲಾಪಗಳು ನಡೆಯಲಿದ್ದು, ಆ. 12 ರಿಂದ 18ರ ವರೆಗೆ ಸಂಸತ್ ಅಧಿವೇಶನಕ್ಕೆ ವಿರಾಮ ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular