ನವದೆಹಲಿ : ಕಳೆದ ವರ್ಷ ಹೆಚ್ಚು ಸಂಪಾದನೆ ತಂದುಕೊಟ್ಟ ನಟ ರಣವೀರ್ ಸಿಂಗ್ ನಟನೆಯ ದುರಂದರ್ ಚಿತ್ರದಲ್ಲಿ ಬಲೂಚ್ ಎಂಬ ಪದವನ್ನು ಮ್ಯೂಟ್ ಮಾಡಲು ಚಿತ್ರದ ನಿರ್ಮಾಪಕರಿಗೆ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ತಿಳಿಸಿದೆ. ಬಲೋಚ್ ಅವರನ್ನು ಉಲ್ಲೇಖಿಸಿದ ಎರಡು ಪದಗಳು ಹಾಗೂ ಒಂದು ಸAಭಾಷಣೆಯನ್ನು ಮ್ಯೂಟ್ ಮಾಡಲು ನಿರ್ಮಾಪಕರಿಗೆ ಸೂಚಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ದುರಂದರ್‌ನ ಪರಿಷ್ಕೃತ ಆವೃತ್ತಿ ಜನವರಿ ಒಂದರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ದುರಂದರ್ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು ಅದರಲ್ಲಿ ನಾಯಕ ನಟ ರಣವೀರ್ ಸಿಂಗ್ ಪಾಕಿಸ್ತಾನದ ನಾಲ್ವರು ಭಯೋತ್ಪಾದಕರನ್ನು ಬಡಿದಟ್ಟುವ ದೃಶ್ಯಗಳಿವೆ.


