Monday, October 20, 2025
Flats for sale
Homeವಾಣಿಜ್ಯನವದೆಹಲಿ : ದೇಶದ ಐಟಿ ಕ್ಷೇತ್ರ ದಲ್ಲಿ ಸೈಲೆಂಟ್ ಸುಂಟರಗಾಳಿ', ನೌಕರಿ ಕಳೆದು ಕೊಳ್ಳುವ ಭೀತಿಯಲ್ಲಿ...

ನವದೆಹಲಿ : ದೇಶದ ಐಟಿ ಕ್ಷೇತ್ರ ದಲ್ಲಿ ಸೈಲೆಂಟ್ ಸುಂಟರಗಾಳಿ’, ನೌಕರಿ ಕಳೆದು ಕೊಳ್ಳುವ ಭೀತಿಯಲ್ಲಿ 50 ಸಾವಿರ ಉದ್ಯೋಗಿಗಳು..!

ನವದೆಹಲಿ : ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಡಿತದಂತಹ `ಸೈಲೆಂಟ್ ಸುಂಟರಗಾಳಿ’ ಬೀಸುತ್ತಿದೆ . ವರ್ಷಾಂತ್ಯದೊಳಗೆ ಸುಮಾರು ೫೦ ಸಾವಿರ ಮಂದಿ ತಮ್ಮ ನೌಕರಿ ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ. ಉದ್ಯೋಗಿಗಳ ಕಾರ್ಯಕ್ಷಮತೆ ಇತ್ಯಾದಿ ನೆಪಗಳು ಮತ್ತು ಅತ್ಯಾ ಧುನಿಕ ಕೃತಕ ಬುದ್ಧಿಮತ್ತೆ ಸೌಲಭ್ಯ ಅಳವಡಿಕೆ ಮತ್ತು ವ್ಯಾವಹಾರಿಕ ಕಾರಣ ಗಳಿಂದಾಗಿ ಐ.ಟಿ.ಕಂಪನಿಗಳು ತಮ್ಮ ಹೆಚ್ಚುವರಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುತ್ತಿವೆ.

೩ ತಿಂಗಳಲ್ಲಿ ಟಿಸಿಎಸ್ ಐಟಿ ಕಂಪನಿ ತಿಂಗಳಲ್ಲಿ 19,755 ಉದ್ಯೋಗಿಗಳನ್ನು ತೆಗೆದಹಾಕಿದೆ. 2022ರ ನಂತರ ಮೊದಲ ಬಾರಿಗೆ ಟಿಸಿಎಸ್ ನಲ್ಲಿ ಉದ್ಯೋಗಿಗಳ ಸಂಖ್ಯೆ 6 ಲಕ್ಷಕ್ಕೂ ಕಡಿಮೆ. 2024ರಲ್ಲಿ 25,994 ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ಇನ್‌ಫೋಸಿಸ್. ಟೆಕ್ ಮಹೀಂದ್ರಾ ಕಂಪನಿಯಿAದಲೂ 10,669 ಉದ್ಯೋಗಿಗಳ ಕಡಿತ

2023 ಮತ್ತು 2024ರ ನಡುವೆ 25 ಸಾವಿರ ಮಂದಿ ಈಗಾಗಲೇ ಕೆಲಸ ಕಳೆದುಕೊಂಡಿದ್ದಾರೆ. ಇದೇ ನಿದರ್ಶನವನ್ನು ಆಧಾರವಾಗಿ ಇಟ್ಟುಕೊಂಡು ಈ ಸಂಖ್ಯೆ ಈ ವರ್ಷಾಂತ್ಯದೊಳಗೆ ದುಪ್ಪಟ್ಟಾಗಬಹುದೆಂದು ಅAದಾಜಿಸಲಾಗಿದೆ. ಐ.ಟಿ. ದಿಗ್ಗಜಗಳಲ್ಲೊಂದಾದ ಟಿ.ಸಿ.ಎಸ್. ಕಂಪನಿಯು ಈಗಾಗಲೇ ಜುಲೈನಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯನ್ವಯ, 2026 ಮಾರ್ಚ್ ವೇಳೆಗೆ ತನ್ನ ಸಿಬ್ಬಂದಿ ಪ್ರಮಾಣವನ್ನು ಶೇ. ೨ರಷ್ಟು ಕಡಿತ ಮಾಡಲಿದೆ. ಇದಲ್ಲದೆ ಕೆಲವು ಬೃಹತ್ ಹಾಗೂ ಮಧ್ಯಮ ಗಾತ್ರದ ತಂತ್ರಜ್ಞಾನ ಸೇವಾ ಸಂಸ್ಥೆಗಳೂ ಸಹ ತಮ್ಮ ನೌಕರರಿಗೆ ರಾಜೀನಾಮೆ ನೀಡಲು ಅಥವಾ ಬೇರೆ ಕಡೆ ಕೆಲಸಕ್ಕೆ ಸೇರಿಕೊಳ್ಳಲು ವಿವೇಚನಾಯುಕ್ತವಾಗಿ ಕೇಳಿಕೊಂಡಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular