ನವದೆಹಲಿ : ಕಳೆದ ವರ್ಷ ದೇಶದಲ್ಲಿ 17 ಲಕ್ಷ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ಕೇವಲ 1.37೭ ಲಕ್ಷ ಪ್ರಕರಣಗಳು ದಾಖಲಾಗಿವೆ. ನಂತರದ ವರ್ಷಗಳಲ್ಲಿ, ಸೈಬರ್ ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಗೃಹ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಸೈಬರ್ ವರದಿ ಮಾಡುವ ವೇದಿಕೆ (ಎನ್.ಸಿ.ಆರ್.ಪಿ) ಕಳೆದ ನಾಲ್ಕು ವರ್ಷಗಳಲ್ಲಿ ಸೈಬರ್ ಅಪರಾಧಿಗಳು 33,156 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಬಹಿರAಗಪಡಿಸಿದೆ.
ವಂಚನೆಗೊಳಗಾದವರು ಎನ್‌ಸಿಆರ್‌ಪಿಗೆ ಆನ್‌ಲೈನ್‌ನಲ್ಲಿ ದೂರುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗೃಹ ಸಚಿವಾಲಯ ಪ್ರಕಟಿಸಿದೆ. 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವಂಚನೆಗೊಳಗಾದ ಪ್ರಕರಣಗಳ ಇ-ಎಫ್‌ಐಆರ್ ವ್ಯವಸ್ಥೆಯ ಮೂಲಕ ಕೂಡಾ ದೂರು ದಾಖಲಿಸಬಹುದು.
ಅನುಮಾನಾಸ್ಪದವಾಗಿ ಕಂಡು ಬAದಿರುವ ಸುಮಾರು ಆರು ಲಕ್ಷ ಬ್ಯಾಂಕ್ ವಹಿವಾಟುಗಳನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ. ಈ ಮೂಲಕ 1,8೦೦ ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಸಚಿವಾಲಯ ಘೋಷಿಸಿದೆ