ನವದೆಹಲಿ : ದಿಲ್ಲಿಯಲ್ಲಿ ನಡೆದ ಸ್ಫೋಟ ಆಪರೇಷನ್ ಸಿಂದೂರ್ಗೆ ನಡೆದ ಪ್ರತೀಕಾರದ ಪ್ರಯತ್ನ ಎನ್ನುವುದು ಸ್ಪಷ್ಟವಾಗಿದೆ. ಸಿಂದೂರ್ಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಜಮ್ಮು ಮತ್ತು ಕಾಶ್ಮೀರದ ನೌಗಾಮ್ ಪ್ರದೇಶದಲ್ಲಿ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಪೋಸ್ಟರ್ ಅಂಟಿಸಿತ್ತು. ಅದನ್ನು ನಿರ್ಲಕ್ಷಿಸದೆ, ಅಲ್ಲಿನ ಪೊಲೀಸರು ತನಿಖೆ ನಡೆಸಿದಾಗ, ಮೌಲ್ವಿಯೊಬ್ಬನ ಬಂಧನವಾಯಿತು. ಆತನ ಮೂಲಕ ಫರೀದಾ ಬಾದ್ನಲ್ಲಿನ ಡಾಕ್ಟರ್ ಟೆರರಿಸ್ಟ್ಗಳ ಮಾಡ್ಯೂಲ್ ಪತ್ತೆಯಾಯಿತು. ಹೀಗಾಗಿ ದೆಹಲಿ ಸ್ಫೋಟ ಆಪರೇಷನ್ ಸಿಂದೂರ್ಗೆ ನಡೆಸಿದ ಪ್ರತೀಕಾರ ಎಂದು ಸ್ಪಷ್ಟವಾಗಿದೆ. ಆ ಮೂಲಕ ಇದು ಜೈಶ್ ಉಗ್ರರ ಕೃತ್ಯ ಎನ್ನುವುದು ಸಾಬೀತಾಗಿದೆ.
ನೌಗಾಮ್ನಲ್ಲಿ ಅಕ್ಟೋಬರ್ 19 ರಂದು ಜೈಶ್ ಇ ಮುಹಮ್ಮದ್ ಹೆಸರಲ್ಲಿ ಉರ್ದು ಭಾಷೆಯಲ್ಲಿ ಬೆದರಿಕೆ ಹಾಕಿರುವ ಪೋಸ್ಟರ್ ಪತ್ತೆಯಾಗಿತ್ತು. ಪೊಲೀಸರು ಹಾಗೂ ಭದ್ರತಾಪಡೆಗಳೊಂದಿಗೆ ಸಹಕರಿಸದAತೆ ಕಾಶ್ಮೀರದ ಜನರನ್ನು ಇದರಲ್ಲಿ ಪ್ರಚೋದಿಸಲಾಗಿತ್ತು. ಪೋಸ್ಟರ್ ಹಾಕಿದ ನಂತರ ಜಮ್ಮು-ಕಾಶ್ಮೀರ, ಹರಿಯಾಣ ಹಾಗೂ ಉತ್ತರಪ್ರದೇಶಗಳಲ್ಲಿ ಏಕಕಾಲದಲ್ಲಿ ತನಿಖಾ ದಾಳಿ ನಡೆದಿದ್ದು ಅತ್ಯಂತ ಹೆಚ್ಚು ಪ್ರಮಾಣದ ಸ್ಫೋಟಕ ವಸ್ತುಗಳ ಸಂಗ್ರಹ ಬಯಲಿಗೆ ಬಂದಿತು. ಜಾಡು ಹಿಡಿದ ಪೊಲೀಸರಿಗೆ ಮೊದಲು ಸಿಕ್ಕಿದ್ದು ಶೋಪಿಯಾನ್ನ ಮೌಲ್ವಿ ಇರ್ಫಾನ್ ಅಹ್ಮದ್ ವಾಘೆ ಹಾಗೂ ಗಾಂದೆರ್ಬಾಲ್ನ ಜಮೀರ್ ಅಹ್ಮದ್ ಎಂಬಿಬ್ಬರು ಶಂಕಿತರು. ಅವರ ವಿಚಾರಣೆ ನಡೆಸಿದಾಗ ನೀಡಿದ ವಿವರಗಳಿಂದ ಫರೀದಾಬಾದ್ ಅಲ್ ಫಲಾಹ್ ವೈದ್ಯಕೀಯ ಕಾಲೇಜಿನ ಡಾಕ್ಟರ್ ಗ್ಯಾಂಗ್ ಬಯಲಾಯಿತು. ನವೆಂಬರ್ 5 ರಂದು ಈ ಕಾಲೇಜಿನ ವೈದ್ಯ ಡಾ.ಆದಿಲ್ನನ್ನು ಸಹಾರನ್ಪುರದಲ್ಲಿ ಬಂಧಿಸಲಾಯಿತು. ಇದಾದ ಮೂರು ದಿನಗಗಳಲ್ಲಿ, ನವೆಂ ಬರ್ ೮ರಂದು ಫರೀದಾಬಾದ್ ವೈದ್ಯಕೀಯ ಕಾಲೇಜಿನಲ್ಲಿ ದಾಳಿ ನಡೆಸಿದಾಗ ಶಸ್ತಾçಸ್ತç ಹಾಗೂ ಮದ್ದು ಗುಂಡುಗಳು ಪತ್ತೆಯಾದವು.
ಬಂಧನಕ್ಕೊಳಗಾಗಿರುವ ಡಾಕ್ಟರ್ ಶಾಹೀನ್ ವಿಚ್ಛೇದನಗೊಂಡಿದ್ದು, ಆನಂತರ ಉಗ್ರರ ಜಾಲ ಸೇರಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಮೊದಲ ಗಂಡ ಈ ಕುರಿತು ಹೇಳಿಕೆ ನೀಡಿದ್ದು, ಹಿಂದೆ ಆಕೆ ಬುರ್ಖಾ ಕೂಡ ಹಾಕುತ್ತಿರಲಿಲ್ಲ ಎಂದಿದ್ದಾರೆ. ಜೈಶ್ನ ಮಹಿಳಾ ಘಟಕದ ಮುಖ್ಯಸ್ಥೆಯಾಗಿರುವುದನ್ನು ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಜೈಶ್ನ ಮುಖ್ಯಸ್ಥ ಅಜರ್ ಮಸೂದ್ ಸೋದರಿಯೊಂದಿಗೆ ಶಾಹೀನ್ ಸಂಪರ್ಕ ಹೊಂದಿದ್ದು ಗೊತ್ತಾಗಿದೆ
ಮಹತ್ತರ ಬೆಳವಣಿಗೆಯೊಂದರಲ್ಲಿ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟಕ್ಕೂ ಟರ್ಕಿಗೂ ಸಂಪಕ ಇರುವುದು ತನಿಖೆ ವೇಳೆ ಗೊತ್ತಾಗಿದೆ. ಕಾಶ್ಮೀರಿ ವೈದ್ಯರಾದ ಉಮರ್ಮುಹಮ್ಮದ್ ಹಾಗೂ ಮುಝಮಿಲ್ ಶಕೀಲ್ ಅವರು ಟರ್ಕಿಗೆ ತೆರಳಿ ಜೈಶ್ ಇ ಮುಹಮ್ಮದ್ ಗುಂಪಿನ ಹ್ಯಾಂಡ್ಲರ್ ಅನ್ನೂ ಭೇಟಿಯಾಗಿದ್ದರು. ಇವರಿಬ್ಬರ ಪಾಸ್ಫೋರ್ಟ್ಗಳಲ್ಲಿ ಟರ್ಕಿಯ ವಲಸೆ ಮುದ್ರೆಗಳಿವೆ. ಇದರಿಂದಾಗಿ ದೆಹಲಿ ಸ್ಫೋಟಕ್ಕೆ ಅಂತಾರಾಷ್ಟಿçÃಯ ಮಟ್ಟದಲ್ಲಿ ಸಂಚು ರೂಪಿಸಲಾಯಿತೇ ಎಂಬ ಸಂಶಯ ಮೂಡುವಂತಾಗಿದೆ. ಇದೇ ವೇಳೆ ಬಂಧಿತೆ ಡಾ. ಶಾಹೀನ್ ಭಾರತದಲ್ಲಿ ಜೈಶ್ ಮೊಹಮ್ಮದ್ ಗುಂಪಿನ ಮಹಿಳಾ ಘಟಕ ರಚಿಸಲು ಹ್ಯಾಂಡ್ಲರ್ಗಳು ಸಲಹೆ ನೀಡಿದ್ದೂ ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ. ಹೀಗಾಗಿ ಬಂಧಿತ ವೈದ್ಯರ ರಹಸ್ಯ ನಡೆಗಳು ತನಿಖಾ ಸಂಸ್ಥೆಗಳಿಗೆ ಆತಂಕ ಉಂಟು ಮಾಡಿದ್ದು ತನಿಖೆಯ ವ್ಯಾಪ್ತಿಯನ್ನು ಅಂತಾರಾಷ್ಟಿçÃಯ ಮಟ್ಟಕ್ಕೆ ವಿಸ್ತರಿಸಬೇಕೇ ಎಂಬುದನ್ನು ನಿಷ್ಕರ್ಷೆ ಮಾಡುತ್ತಿದ್ದಾರೆ
ಕೆಂಪು ಕೋಟೆ ಬಳಿ ನಡೆಸಿದ ಆತ್ಮಾಹುತಿ ದಾಳಿ ಸ್ಫೋಟವನ್ನು ಮೂಲತಃ ಬಾಬ್ರಿ ಮಸೀದಿ ಧ್ವಂಸಗೊAಡ ದಿನವಾದ ಡಿಸೆಂಬರ್ ೬ ರಂದು ನಡೆಸಲು ಉಗ್ರ ಡಾ. ಉಮರ್ ನಬಿ ಸಂಚು ರೂಪಿಸಿದ್ದ ಸಂಗತಿ ಈಗ ಬಯಲಾಗಿದೆ. ಜೈಷ್ ಎ ಮುಹಮ್ಮದ್ ಸಂಘಟನೆಯೊAದಿಗೆ ನಂಟು ಹೊಂದಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ೮ `ವೈಟ್ ಕಾಲರ್’ ಉಗ್ರರು ತಮ್ಮೊಳಗೆ ನಡೆಸಿರುವ ಮಾತುಕತೆ ಹಾಗೂ ಕುಟುಂಬ ಸದಸ್ಯರು ಮತ್ತು ಗೆಳೆಯರೊಂದಿಗೆ ಮಾಡಿರುವ ಸಂಭಾಷಣೆಗಳಿAದ ಈ ಉದ್ದೇಶಿತ ಸಂಚು ಬಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಕಾಶ್ಮೀರ, ಹರಿಯಾಣ ಮತ್ತು ಉತ್ತರಪ್ರದೇಶಗಳ ಉಗ್ರ ಜಾಲ ವ್ಯಾಪ್ತಿಯಲ್ಲಿ 28 ವರ್ಷದ ವೈದ್ಯ ಉಮರ್ ಓರ್ವ ಪ್ರಮುಖ ಉಗ್ರನಾಗಿ ಹೊರಹೊಮ್ಮಿದ್ದ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಸೇರಿದ ಈತ ಇದೀಗ ದೆಹಲಿ ಕಾರು ಸ್ಫೋಟದಲ್ಲಿ ಆತ್ಮಾಹುತಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ಫರೀದಾಬಾದ್ನ ಅಲ್ ಫಲಾಹ್ ವಿ.ವಿ.ಯ ಡಾ. ಮುಝಮಿಲ್ ಅಹ್ಮದ್ ಘನಿ ಅಲಿಯಾಸ್ ಮುಸಾಯಿಬ್ ಬಂಧನವಾಗಿರುವುದರಿAದ ಡಿ.6 ರಂದು ಉದ್ದೇಶಿಸಲಾಗಿದ್ದ ದಾಳಿ ಯೋಜನೆ ವಿಫಲವಾಯಿತು. ಬಂಧಿತ ಮುಸಾಯಿಬ್ನ ಕೊಠಡಿಯಲ್ಲಿ 360 ಕೆ.ಜಿ. ಅಮೋನಿಯಂ ನೈಟ್ರೇಟ್ ಪತ್ತೆಯಾಗಿದೆ. ಇದರಿಂದ ಹೆದರಿದ್ದ ಉಮರ್ ದೆಹಲಿಯಲ್ಲಿ ಆಕಸ್ಮಿಕವಾಗಿ ಸ್ಫೋಟಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೈಲಂಟಾಗಿದ್ದ ಶಾಹೀನ್ ವೈಲಂಟ್ ಆದಳು. ಈ ಮಧ್ಯೆ ಭಾರತದಾದ್ಯಂತ ಭಯೋತ್ಪಾದಕ ದಾಳಿಗೆ ತಾನೂ ಒಳಗೊಂಡAತೆ ವೈದ್ಯರ ಗುಂಪು ಸಂಚು ನಡೆಸಿದ್ದಾಗಿ ಅಲ್ ಫಲಾಹ್ ವಿವಿಯ ವೈದ್ಯೆ ಡಾ ಶಾಹೀನ್ ಶಾಹೀದ್ ತನಿಖಾಧಿಕಾರಿಗಳೆದುರು ತಪ್ಪೊಪ್ಪಿಕೊಂದ್ದಾಳೆ. ಈ ಕೃತ್ಯಕ್ಕಾಗಿ ಕಳೆದ ಎರಡು ವರ್ಷಗಳಿಂದ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಲಾಗುತಿತ್ತು ಎಂದೂ ಆಕೆ ಜಮ್ಮುಕಾಶ್ಮೀರ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾಳೆ. ಶಾಹೀನ್ ಶಾಂತ ಸ್ವಭಾವದವಳಾಗಿದ್ದಳು. ಯಾವುದೇ ಧರ್ಮ ಸಿದ್ಧಾಂತ ಕುರಿತು ಚರ್ಚಿಸುತ್ತಿರಲಿಲ್ಲ. ತನ್ನ ವೈದ್ಯಕೀಯ ಅಧ್ಯಯನ ಬಗ್ಗೆ ಮಾತ್ರ ಗಮನಹರಿಸುತ್ತಿದ್ದಳು ಆದರೆ 2005ರಲ್ಲಿ ವಿಚ್ಛೇದನಗೊಂಡ ನAತರ ಆಕೆ ಭಯೋತ್ಪಾದಕಿಯಾಗಿದ್ದು ಆಶ್ಚರ್ಯವಾಗಿದೆ ಎಂದು ಲಖನೌದ ಕೆಪಿಎಂ ಆಸ್ಪತ್ರೆಯ ನೇತ್ರತಜ್ಞ ಡಾ.ಜಾಫರ್ ಹಯಾತ್ ಹೇಳುತ್ತಾರೆ.
ಜೈಶ್ ಇ ಮುಹಮ್ಮದ್ ಗುಂಪು ಬೆಂಬಲಿಸುವ ಉಗ್ರರ ಗುರಿ ದೆಹಲಿಯ ಕೆಂಪುಕೋಟೆಯಾಗಿರಲಿಲ್ಲ. ಸಹಚರರ ಬಂಧನದಿAದ ಗಲಿಬಿಲಿಗೊAಡ ಶಂಕಿತ ಉಗ್ರರಿಂದ ದೆಹಲಿ ಸ್ಫೋಟ ನಡೆದಿದೆ. ಉಗ್ರರ ನಿಜವಾದ ಗುರಿ ಅಯೋಧ್ಯೆಯ ರಾಮಮಂದಿರ, ಕಾಶಿ ವಿಶ್ವನಾಥ ದೇವಾಲಯ, ದೆಹಲಿಯ ಸೇನಾಭವನ, ವಾಯುಪಡೆ ಕಚೇರಿ,ಸಂಸತ್ ಭವನ ರಸ್ತೆಯಂತಹ ಪ್ರಮುಖ ಆಯಾಕಟ್ಟಿನ ಸ್ಥಳಗಳ ಮೇಲೆ ದಾಳಿ ಮಾಡಲು ಸಂಚು ನಡೆಸಿದ್ದರು ಎಂದು ತನಿಖೆ ವೇಳೆ ಬಯಲಾಗಿದೆ. ಈ ಸಂಬAಧ 1500 ಕ್ಕೂ ಹೆಚ್ಚು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಅಮೋನಿಯಂ ನೈಟ್ರೇಟ್ ಸಂಗ್ರಹಿಸಿದ್ದರು. ಆದರೆ ಕಳೆದ ೩೦ ದಿನಗಳಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು.


