ನವದೆಹಲಿ : ದೇಶದಲ್ಲಿ ಗಂಟೆಗೆ 55 ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. 2023ರಲ್ಲಿ ಸಂಭವಿಸಿದ 4,80,583 ರಸ್ತೆಅಪಘಾತಗಳಲ್ಲಿ 1,72,890 ಮಂದಿ ಬಲಿಯಾಗಿದ್ದು, ಅನ್ಯ 4,62,825 ಜನರು ಗಾಯಗೊಂಡಿದ್ದರು. ಅಪಘಾತಗಳಲ್ಲಿ ಬಲಿಪಶುವಾದವರು ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
18-45 ವಯೋಮಿತಿಯ ಶೇ.66.4 ಮಂದಿ ರಸ್ತೆ ಅಪಘಾತದ ಬಲಿಪಶುಗಳಾಗಿದ್ದಾರೆ. 4,80,583 ಅಪಘಾತಗಳ ಪೈಕಿ 1,50,622 ಪ್ರಕರಣಗಳು ರಾಷ್ಟ್ರೀಯ ಹೆದ್ದಾರಿಗಳಲ್ಲೂ, 2,24,744 ಪ್ರಕರಣಗಳು ಅನ್ಯ ರಸ್ತೆಗಳಲ್ಲಿ ಸಂಭವಿಸಿದ್ದವು. ತಮಿಳುನಾಡಿನ ಹೆದ್ದಾರಿಯಲ್ಲಿ ಗರಿಷ್ಠ ಅಪಘಾತಗಳು ಸಂಭವಿಸಿವೆ. ಆದರೆ ಹೆದ್ದಾರಿ ಅಪಘಾತಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸಾವಿಗೀಡಾದವರು ಉತ್ತರಪ್ರದೇಶದವರು.


