ನವದೆಹಲಿ : ಬಿಜೆಪಿ ಮತಗಳ್ಳತನ ಮಾಡುವುದರಲ್ಲಿ ನಿರತವಾಗಿದೆ. ದೆಹಲಿಯಲ್ಲಿ ಮತದಾನ ಮಾಡಿರುವ ಬಿಜೆಪಿ ನಾಯಕರು ಬಿಹಾರಕ್ಕೂ ಬಂದು ವೋಟ್ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷಗಳ ಮುಖಂಡರು ಆರೋಪಿಸಿದ್ದಾರೆ.
ದೆಹಲಿಯ ಮೋತಿಲಾಲ್ ನೆಹರೂ ಕಾಲೇಜಿನ ಆರ್‌ಎಸ್‌ಎಸ್ ಚಿಂತಕ ರಾಕೇಶ್ ಸಿನ್ಹಾ ಅವರು ದೆಹಲಿಯ ಚುನಾವಣೆಯಲ್ಲೂ ಮತದಾನ ಮಾಡಿದ್ದರು. ಈಗ ಬಿಹಾರಕ್ಕೂ ಬಂದು ಮತ ಹಾಕಿದ್ದಾರೆ. ಅವರ ವಿಳಾಸ ಬಿಹಾರದಲ್ಲಿ ಇರಲು ಹೇಗೆ ಸಾಧ್ಯ..? ಇದು ಮತಗಳ್ಳತನಕ್ಕೆ ಆಧಾರ ಎಂದು ಆಮ್ ಆದ್ಮಿಯ ಸೌರಭ್ ಭಾರದ್ವಾಜ್ ಪ್ರಶ್ನಿಸಿದ್ದಾರೆ. ಜತೆಗೆ ಇನ್ನೂ ಅನೇಕ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ದೆಹಲಿ ಪೂರ್ವಾಂಚಲ ಮೋರ್ಚಾ ಅಧ್ಯಕ್ಷ ಸಂತೋಷ್ ಓಝಾ, ಪಕ್ಷದ ಕಾರ್ಯಕರ್ತ ನಾಗೇಂದ್ರ ಕುಮಾರ್ ಕೂಡ ಎರಡೂ ಕಡೆ ಮತದಾನ ಮಾಡಿರುವುದಾಗಿ ಪ್ರತಿಪಕ್ಷಗಳು ಆರೋಪಿಸಿವೆ. ಪ್ರತಿಪಕ್ಷಗಳ ಆರೋಪವನ್ನು ರಾಕೇಶ್ ಸಿನ್ಹಾ ತಳ್ಳಿ ಹಾಕಿದ್ದು, ಸುಳ್ಳು ಆರೋಪ ಮಾಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಎಚ್ಚರಿಸಿದ್ದಾರೆ.


