ನವದೆಹಲಿ : ಟಾಟಾ ಸನ್ಸ್ ಸಂಸ್ಥೆಯ ಬಹುಪಾಲು ಶೇರು ಹೊಂದಿರುವ ಟಾಟಾ ಟ್ರಸ್ಟ್ ಆಡಳಿತದಲ್ಲಿ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಸಿದ್ಧತೆ ನಡೆಸಿದೆ. ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾನಿಧನರಾದ ಮೇಲೆ ಟಾಟಾ ಸಂಸ್ಥೆಯ ಒಡೆತನದ ಬಗ್ಗೆ ಭಾರೀ ಚರ್ಚೆ ನಡೆದಿದೆ. ಮೂಲಗಳ ಪ್ರಕಾರ, ಟಾಟಾ ಸನ್ಸ್ ಮುಖ್ಯಸ್ಥ ನಿಯೋಲ್ ಟಾಟಾ ಹಾಗೂ ಟಾಟಾ ಟ್ರಸ್ಟ್ ಮುಖ್ಯಸ್ಥ ಎನ್.ಚಂದ್ರಶೇಖರ್ ಅವರು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳ ಜತೆ ಸಭೆ
ನಡೆಸಲು ಮುಂದಾಗಿದ್ದಾರೆ.
ಈ ವೇಳೆ ಟಾಟಾ ಗ್ರೂಪ್‌ನಲ್ಲಿ ಹೆಚ್ಚುತ್ತಿರುವ ಆಂತರಿಕ ಸಂಘರ್ಷದ ಕುರಿತು ಚರ್ಚೆ ನಡೆಸಲಾಗುತ್ತಿದೆ. ನಾಮನಿರ್ದೇಶಿತ ರಕ್ಷಣಾ ಮಾಜಿ ಕಾರ್ಯದರ್ಶಿ ವಿಜಯ್ ಸಿಂಗ್ ಅವರನ್ನು ತೆಗೆದುಹಾಕಿದಂತೆಯೇ ಟಾಟಾ ಸನ್ಸ್ ಮಂಡಳಿಯ ಸದಸ್ಯ ವೇಣು ಶ್ರೀನಿವಾಸನ್ ಅವರನ್ನು ತೆಗೆದುಹಾಕೆಂಬ ಕುರಿತು ಟ್ರಸ್ಟಿಗಳ ಮಧ್ಯೆ ಇಮೇಲ್ ಸಂಭಾಷಣೆ ನಡೆದ ಬಳಿಕ ಆಂತರಿಕ ಸಂಘರ್ಷ ಶುರುವಾಗಿದೆ. ಇದರಿಂದಾಗಿ ಟಾಟಾ ಸನ್ಸ್ ಹೈಜಾಕ್ ಮಾಡಲು ಯತ್ನ ನಡೆದಿದೆ ಎಂಬ ಹುಯಿಲೆಬ್ಬಿದಿದೆ. ಸಂಸ್ಥೆಯಲ್ಲಿ ಒಡಕು ಹೆಚ್ಚಾದ ಬೆನ್ನಲ್ಲೇ ಟಾಟಾ ಸನ್ಸ್ ಅಕ್ಟೋಬರ್ 10ರಂದು ಸಭೆ ಸೇರಲಿದೆ ಎಂದು ಮೂಲಗಳು ತಿಳಿಸಿವೆ.


