ನವದೆಹಲಿ : ಜಮಾಲುದ್ದೀನ್ ಅಲಿಯಾಸ್ ಬೆಂಗೂರ್ ಬಾಬಾ ನಡೆಸಿದ್ದಾರೆ. ಎನ್ನಲಾದ ಧಾರ್ಮಿಕ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ 14 ಕಡೆ ಜಾರಿ ನಿರ್ದೇಶನಾಲಯ ಏಕ ಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆ ಕಲೆಹಾಕಿದ್ದಾರೆ.
ಉತ್ತರ ಪ್ರದೇಶದ ಬಲರಾಂಪುರದಲ್ಲಿ 12 ಮತ್ತು ಮುಂಬೈನಲ್ಲಿ ಎರಡು ಸ್ಥಳಗಳಲ್ಲಿ ಶೋಧ ನಡೆಸಿ ಮಹತ್ವದ ದಾಖಲೆ ಕಲೆ ಹಾಕಿದೆ. ಅಕ್ರಮ ಧಾರ್ಮಿಕ ಮತಾಂತರ ಮತ್ತು ಆರ್ಥಿಕ ಅಕ್ರಮಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಆಸ್ತಿಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಪ್ರಮುಖ ಆರೋಪಿ ನವೀನ್ ಅವರ ಬ್ಯಾಂಕ್ ಖಾತೆಯಿಂದ ಶೆಹಜಾದ್ ಶೇಖ್ ಎಂಬವರ ಖಾತೆಗೆ 2 ಕೋಟಿ ರೂಪಾಯಿ ಒಳಗೊಂಡಿರುವ ಅನುಮಾನಾಸ್ಪದ ಹಣಕಾಸಿನ ವಹಿವಾಟು ಪತ್ತೆಹಚ್ಚಲಾಗಿದ್ದು ಮತಾಂತರಕ್ಕೆ ಬಳಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೆಹಜಾದ್ ಶೇಖ್ ಅವರ ಎರಡು ನಿವಾಸಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಒಂದು ಬಾಂದ್ರಾದಲ್ಲಿ ಮತ್ತು ಇನ್ನೊಂದು ಮುಂಬೈನ ಮಾಹಿಮ್ನ ರಿಜ್ಜಿ ಹೈಟ್ಸ್ ನಲ್ಲಿರುವ. ಪ್ರಸ್ತುತ ಶೇಖ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಖಾಂದ್ರಾದಲ್ಲಿರುವ ಅವರ ಮನೆಯಲ್ಲಿ ಹಣಕಾಸಿನ ಮೂಲಗಳ ಬಗ್ಗೆ ವಿಚಾರಣೆಗೆ ಒಳಪಡಿಸಿದ್ದಾರೆ
ಈ ಪ್ರಕರಣ ಸಂಘಟಿತ ಧಾರ್ಮಿಕ ಮತಾಂತರದ ಆರೋಪಗಳ ಸುತ್ತ ಕೇಂದ್ರೀಕೃತವಾಗಿದೆ.ಬಹುಶ: ಅಕ್ರಮಹಣದ ಮಾರ್ಗಗಳ ಮೂಲಕ ಹಣಕಾಸು ಒದಗಿಸಲಾಗಿದೆ. ಹವಾಲಾ ಚಾಲಗಳನ್ನು ಅಂತಹ ಕಾರ್ಯಾಚರಣೆಗಳಿಗೆ ಹಣವನ್ನು ಹರಿಸಲು ಬಳಸಿರಬಹುದು ಎಂದು ಜಾರಿ ನಿರ್ದೇಶನಾಲಯ ಶಂಕಿಸಿದೆ.
ಧಾರ್ಮಿಕ ಮತಾಂತರ ಮತ್ತು ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಘನಶ್ಯಾಮ್ ರೋಪ್ರಾ ಮತ್ತು ಅವರ ಸಹಚರ ನೀತು ಅವರಿಗೆ ಸಂಬಂಧಿಸಿದ ವಿದೇಶಿ ಮತ್ತು ದೇಶೀಯ ಬ್ಯಾಂಕ್ ಖಾತೆಗಳನ್ನು ಒಳಗೊಂಡ ಬಹುಕೋಟಿ ಹಣಕಾಸು ವಹಿವಾಟುಗಳ ಕುರಿತು ಜಾರಿ ನಿರ್ದೇಶನಾಲಯ ವ್ಯಾಪಕ ತನಿಖೆ ನಡೆಸುತ್ತಿದೆ.
ಈ ಪ್ರಕರಣ ಸಂಘಟಿತ ಧಾರ್ಮಿಕ ಮತ್ತು ಅಕ್ರಮ ಧಾರ್ಮಿಕ ಮತಾಂತರಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಂಪರ್ಕವಿದೆ ಎನ್ನುವ ಶಂಕೆ ವ್ಯಕ್ತಪಡಿಸಿದ್ದು ಖಾತೆಗಳ ಮೂಲಕ ನಿಧಿಯ ಮೂಲ, ಉದ್ದೇಶ ಮತ್ತು ಮಾರ್ಗವನ್ನು ಪತ್ತೆಹಚ್ಚಲಾಗಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಉತ್ತರ ಪ್ರದೇಶ ಎಟಿಎಸ್ನಿಂದ ಬಂಧಿಸಲ್ಪಟ್ಟ ಜಮಾಲುದ್ದೀನ್ ಅಲಿಯಾಸ್ ಚಂಗೂರ್ ಬಾಬಾ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಲಕ್ಕೋದಲ್ಲಿ ವೈದ್ಯಕೀಯ ತಪಾಸಣೆಗಾಗಿ ಬೆಂಗಾವಲು ಪಡೆಯುವಾಗ, ವರದಿಗಾರರಿಗೆ, ನಿರಪರಾಧಿ. ನನಗೆ ಏನೂ ತಿಳಿದಿಲ್ಲ” ಎಂದು ಹೇಳಿದ್ದಾರೆ.


