Thursday, February 26, 2026
Flats for sale
Homeದೇಶನವದೆಹಲಿ : ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ 14 ವರ್ಷದ ಹೆಣ್ಣು ಮಕ್ಕಳಿಗೆ ಫ್ರೀ...

ನವದೆಹಲಿ : ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ 14 ವರ್ಷದ ಹೆಣ್ಣು ಮಕ್ಕಳಿಗೆ ಫ್ರೀ ಲಸಿಕೆ : ಕೇಂದ್ರ ಸರಕಾರದಿಂದ ಮಹತ್ವದ ನಿರ್ಧಾರ.

ನವದೆಹಲಿ : ಮಾರಕ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಪೂರ್ವಭಾವಿಯಾಗಿ 18ವರ್ಷದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್.ಪಿ.ವಿ. ನಿರೋಧಕ ಲಸಿಕೆ ಹಾಕುವ ರಾಷ್ಟಿçÃಯ ಅಭಿಯಾನ ಕೈಗೊಳ್ಳಲು ಕೇಂದ್ರ ಸರ್ಕಾರ ಸಿದ್ಧತೆಗಳನ್ನು ಮಾಡಿದೆ.

ಈ ಅಭಿಯಾನದಡಿ ಎಚ್‌ಪಿವಿ (ಹ್ಯೂಮನ್ ಪಪಿಲ್ಲೋಮ ವೈರಸ್) ಎಂಬ ವೈರಸ್ ನಿರೋಧಕ ಲಸಿಕೆ ಗಾರ್ಡಸಿಲ್' ಅನ್ನು ಒಂದೇ ಬಾರಿಗೆ ೧೪ ವರ್ಷದ ಬಾಲಕಿಯರಿಗೆ ಉಚಿತವಾಗಿ ನೀಡಲಾಗುವುದು. 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮುಕ್ತ ಮಾರುಕಟ್ಟೆಯಲ್ಲಿಗಾರ್ಡಸಿಲ್-4′ ಲಸಿಕೆಯ ಒಂದು ಡೋಸ್‌ಗೆ ೩,೯೨೭ ರೂ. ವೆಚ್ಚವಾಗುತ್ತಿದೆ. ಇನ್ನು ಇದು ಉಚಿತವಾಗಿ ದೊರೆಯಲಿದೆ. ಸರ್ಕಾರಿ ಆಸ್ಪತ್ರೆಗಳು, ಆಯುಷ್ಮಾನ್ ಆರೋಗ್ಯ ಮಂದಿರ, ಕಮ್ಯುನಿಟಿ ಹೆಲ್ತ್ ಸೆಂಟರ್ ಮುAತಾದ ಕಡೆ ಲಸಿಕೆಯನ್ನು ನೀಡಲಾಗುತ್ತದೆ.

ಈ ಲಸಿಕೆಯಿಂದ ಸಂಭವನೀಯ ಗರ್ಭಕಂಠದ ಕ್ಯಾನ್ಸರ್ ಅನ್ನು ಗಮನಾರ್ಹವಾಗಿ ತಡೆಗಟ್ಟಲು ಸಾಧ್ಯವಾಗಲಿದೆ. ಇದು ಸುರಕ್ಷಿತವೂ ಆಗಿದೆ. ಸರ್ಕಾರ ಈಗ ನಡೆಸುತ್ತಿರುವ ಸಾರ್ವತ್ರಿಕ ಲಸಿಕೆ ಅಭಿಯಾನದ ಅಡಿ ಈ ಎಚ್‌ಪಿವಿ ಲಸಿಕೆ ಅಭಿಯಾನ ನಡೆಸುತ್ತಿಲ್ಲ. ಇದು ಪ್ರತ್ಯೇಕವಾಗಿಯೇ ನಡೆಯಲಿದೆ.

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂ ಎಚ್‌ಓ) ಶಿಫಾರಸು ಹಾಗೂ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ. `ಮುಂಜಾಗ್ರತೆಯಿAದ ಗರ್ಭಕಂಠ ಕ್ಯಾನ್ಸರ್ ಪಿಡುಗು ತೊಲಗಿಸಲು ಎಚ್‌ಪಿವಿ ಲಸಿಕೆಯೇ ಏಕೈಕ ಮದ್ದು’ ಎಂದು ಡಬ್ಲ್ಯೂ ಎಚ್‌ಓ ಮಾಡಿರುವ ಶಿಫಾರಸು ಅನ್ವಯ ಜಾಗತಿಕ ಕಾರ್ಯತಂತ್ರದ ಭಾಗವಾಗಿ ಈ ಅಭಿಯಾನ ಕೈಗೊಳ್ಳಲಾಗಿದೆ.

ಅಂಕಿಅAಶಗಳ ಪ್ರಕಾರ ಭಾರತದ ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಎಂಬುದು 2 ನೇ ಸರ್ವೇ ಸಾಮಾನ್ಯ ಪಿಡುಗಾಗಿದೆ. ಪ್ರತಿ ವರ್ಷ ಈ ಮಾರಕ
ಕಾಯಿಲೆಗೆ 80 ಸಾವಿರ ಮಂದಿ ತುತ್ತಾಗುತ್ತಿದ್ದು, ಈ ಪೈಕಿ 42 ಸಾವಿರ ಮಂದಿ ಅಸುನೀಗುತ್ತಿದ್ದಾರೆ. ಎಚ್‌ಪಿವಿ- ಅದರಲ್ಲೂ ಎಚ್‌ಪಿವಿ 16 ಮತ್ತು 18 ಮಾದರಿಯ ಮಾರಕ ವೈರಸ್‌ಗಳ ಸೋಂಕಿನಿAದಲೇ ಬಹುತೇಕ ಗರ್ಭಕಂಠ ಕ್ಯಾನ್ಸರ್ ಉಂಟಾಗುತ್ತಿದೆ ಎAಬುದು ವೈಜ್ಞಾನಿಕ ಸಂಶೋಧನೆಗಳಿAದ ದೃಢಪಟ್ಟಿದೆ. ಭಾರತದಲ್ಲಿನ ಶೇ. 80ಕ್ಕಿಂತ ಹೆಚ್ಚು ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಈ ವೈರಸ್‌ಗಳಿಂದಲೇ ಉಂಟಾಗುತ್ತಿದೆ. ಗರ್ಭಕಂಠ ಕ್ಯಾನ್ಸರ್ ಹಾಗೂ ಅದರ ಅಪಾಯಗಳನ್ನು ಮನದಟ್ಟು ಮಾಡಿ, ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿ, ಲಸಿಕೆ ಅಭಿಯಾನ
ಕೈಗೊಳ್ಳಲು ಕರ್ನಾಟಕದ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಸಲಹೆ ನೀಡಿದ್ದರು.

ಹೆಣ್ಣು ಮಕ್ಕಳ ವಯಸ್ಸಿನ ಆಧಾರದ ಮೇಲೆ ಗರ್ಭಕಂಠ ಕ್ಯಾನ್ಸರ್‌ಗೆ ಲಸಿಕೆಯನ್ನು 2 ಭಾಗವಾಗಿ ನೀಡಲಾಗುತ್ತದೆ. 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ 2 ಡೋಸ್ ಹಾಗೂ 15 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ 3 ಡೋಸ್ ನೀಡಲಾಗುತ್ತಿದೆ. ಆದರೆ ಅಭಿಯಾನದಲ್ಲಿ ಸರ್ಕಾರ ಸದ್ಯಕ್ಕೆ 14 ವರ್ಷದ ಹೆಣ್ಣು ಮಕ್ಕಳಿಗೆ ಒಂದೇ ಡೋಸ್‌ನಲ್ಲಿ ಎಚ್‌ಪಿವಿ ಲಸಿಕೆಯನ್ನು ಉಚಿತವಾಗಿ ನೀಡಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular