Saturday, February 28, 2026
Flats for sale
Homeಸಿನಿಮಾನವದೆಹಲಿ : ಕೇರಳ ಸ್ಟೋರಿ-2 ಚಿತ್ರ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ .

ನವದೆಹಲಿ : ಕೇರಳ ಸ್ಟೋರಿ-2 ಚಿತ್ರ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ .

ನವದೆಹಲಿ : ಕೇರಳ ಸ್ಟೋರಿ-2 ಚಿತ್ರ ಬಿಡುಗಡೆಗೆ ಒಂದೇ ದಿನ ಬಾಕಿ ಇರುವಾಗಲೇ ಕೇರಳ ಹೈಕೋರ್ಟ್ ತಡೆ ನೀಡಿದೆ. ಚಿತ್ರಕ್ಕೆ ಸಿಬಿಎಫ್‌ಸಿ ಸರ್ಟಿಫಿಕೇಟ್ ನೀಡಿದ್ದನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬೀಚು ಕುರಿಯನ್ ಥಾಮಸ್ ಅವರಿದ್ದ ಪೀಠ, ಸೆನ್ಸಾರ್ ಮಂಡಳಿ ತನ್ನ ತಲೆ ಉಪಯೋಗಿಸಿಲ್ಲ ಎಂದು ಎರಡು ವಾರಗಳ ಕಾಲ ತಡೆ ನೀಡಿ ಮಧ್ಯಂತರ ಆದೇಶ ನೀಡಿದೆ.

ಇತ್ತೀಚೆಗೆ ಕೇರಳ ಸ್ಟೋರಿ-2 ಟ್ರೇಲರ್ ರಿಲೀಸ್ ಆದ ಬೆನ್ನಲ್ಲೇ ಚಿತ್ರದಲ್ಲಿ ಕೇರಳ ರಾಜ್ಯವನ್ನು ತಪ್ಪಾಗಿ ಬಿಂಬಿಸಲಾಗಿದೆ. ಇದರಿಂದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿತ್ರಕ್ಕೆ ನೀಡಿರುವ ಯುಎ ಪ್ರಮಾಣಪತ್ರವನ್ನು ರದ್ದುಗೊಳಿಸಬೇಕು ಎಂದು ಶ್ರೀದೇವ್ ನಂಬೂದಿರಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಸೆನ್ಸಾರ್ ಮಂಡಳಿಯು ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದರಿAದ ಅದರ ಕ್ರಮಗಳ ಮರುಪರಿಶೀಲನೆ ನಡೆಯಬೇಕಿದೆ. ಅಲ್ಲದೇ ಸೆನ್ಸಾರ್ ಮಂಡಳಿ ಈ ಬಗ್ಗೆ ವಿವೇಚನೆಯನ್ನು ಪ್ರದರ್ಶಿಸಿಲ್ಲ ಎಂದು ನ್ಯಾಯಾಲಯವು ಅರ್ಜಿದಾರರ ದೂರನ್ನು ಪರಿಗಣಿಸುವ ಸಂದರ್ಭದಲ್ಲಿ ಕೋರ್ಟ್ ಆಕ್ಷೇಪಿಸಿದೆ. ಈ ಬೆನ್ನಲ್ಲೇ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ನ ಉನ್ನತ ಪೀಠಕ್ಕೆ ಚಿತ್ರತಂಡ ಅರ್ಜಿಸಲ್ಲಿಸಿದೆ ಎಂದು ವರದಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular