ನವದೆಹಲಿ : ಲೋಕಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್, ಬಿಜೆಪಿ ನಾರಿಯರ ವಾಕ್ಸಮರ ರಂಗೇರಿದೆ. ನಟಿ ಕಂಗನಾ ರಣಾವತ್ ವಿರುದ್ಧ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಫೋಟೋ ಶೇರ್ ಮಾಡಿದ್ದಾರೆ.
ಬಿಜೆಪಿಯು ಹಿಮಾಚಲ ಪ್ರದೇಶದ ಮಂಡಿಯಿಂದ ಕಂಗನಾ ರಣಾವತ್ ಅವರನ್ನು ಕಣಕ್ಕಿಳಿಸಿದೆ.ಈ ಕುರಿತು ಕಾಂಗ್ರೆಸ್ ಪ್ರಮುಖ ನಾಯಕಿ ಸುಪ್ರಿಯಾ ಶ್ರೀನಾಥೆ ಮಾಡಿದ ಪೋಸ್ಟ್ ಭಾರಿ ವಿವಾದಕ್ಕೆ ಕಾರಣವಾಗಿದೆ. ಕಂಗನಾ ಹಾಟ್ ಫೋಟೋ ಒಂದನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ನಾಯಕಿ, ವಿವಾದಾತ್ಮ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗಿದೆ. ಹೆಣ್ಣಿಗೆ ಕಾಂಗ್ರೆಸ್ ನೀಡುತ್ತಿರುವ ಗೌರವ ಇದು ಎಂದು ಅಸಮಾಧಾನಗಳು ವ್ಯಕ್ತವಾಗಿತ್ತು. ಈ ವಿವಾದ ಹೆಚ್ಚಾಗುತ್ತಿದ್ದಂತೆ ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ತಿರುಗೇಟು ನೀಡಿದ್ದಾರೆ. ಪ್ರತಿ ಹೆಣ್ಣು ತನ್ನ ಘನತೆಗೆ ಅರ್ಹಳು ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರು ಸುಪ್ರಿಯಾ ಅವರ ಫೋಸ್ಟ್ ಶೇರ್ ಮಾಡಿಕೊಂಡು ಕಿಡಿಕಾರಿದ್ದಾರೆ. ಪ್ರೀತಿಯ ಸುಪ್ರಿಯಾ ಜೀ, ನಾನು ಕಳೆದ 20 ವರ್ಷದ ವೃತ್ತಿ ಜೀವನದಲ್ಲಿ ಎಲ್ಲಾ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಸಿನಿಮಾದಲ್ಲಿ ಹುಡುಗಿಯಿಂದ ರಾಣಿವರೆಗೂ, ದೇವತೆ, ಚಂದ್ರಮುಖಿ, ತಲೈವಿ ಹೀಗೆ ನಾನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಮ್ಮ ಮಕ್ಕಳನ್ನು ನಾವು ಪೂರ್ವಗ್ರಹಗಳ ಸಂಕೋಲೆಯಿಂದ ಮುಕ್ತಗೊಳಿಸಬೇಕು. ಪ್ರತಿಯೊಬ್ಬ ಮಹಿಳೆಯರಿಗೂ ಗೌರವ ಸಲ್ಲಿಸಬೇಕು ಎಂದು ಕಂಗನಾ ರಣಾವತ್ ಕಾಂಗ್ರೆಸ್ ನಾಯಕಿಗೆ ತಿರುಗೇಟು ನೀಡಿದ್ದಾರೆ.