ನವದೆಹಲಿ : ಶುಕ್ರವಾರ ಒಂದೇ ದಿನ ಸೆನ್ಸೆಕ್ಸ್ ಸೂಚ್ಯಂಕ 1,414 ಪಾಯಿಂಟ್‌ಗಳಷ್ಟು ಕುಸಿದಿದ್ದು, ಹೂಡಿಕೆದಾರರು 9.08 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಸೆನ್ಸೆಕ್ಸ್ 73,198ಕ್ಕೆ ಕುಸಿದರೆ, ನಿಫ್ಟಿ 42೦ ಪಾಯಿಂಟ್ ಕುಸಿದು 22,124.7೦ರಲ್ಲಿ ನಿಂತಿದೆ. ಒಂದೇ ದಿನ ವಿದೇಶಿ ಹೂಡಿಕೆದಾರರು 55.56 ಕೋಟಿ ರೂ.ಗಳನ್ನು ಹಿಂಪಡೆದುಕೊAಡಿದ್ದಾರೆ.
ಟೆಕ್ ಮಹೀಂದ್ರಾ, ವಿಪ್ರೋ, ಎಂಫಸಿಸ್ ಅತಿ ದೊಡ್ಡ ಇಳಿಕೆ ಕಂಡಿವೆ. ನಿಫ್ಟಿ ಬ್ಯಾಂಕ್, ಖನಿಜ, ಎಫ್‌ಎಂಸಿಜಿ, ಫಾರ್ಮಾ, ರಿಯಾಲ್ಟಿ, ಗ್ರಾಹಕ ಬಳಕೆ, ತೈಲ ಮತ್ತು ಅನಿಲ ಸೇರಿದಂತೆ ಬಹುತೇಕ ಕ್ಷೇತ್ರಗಳು ಕೆಂಪುಪಟ್ಟಿಯಲ್ಲಿ ಕಂಡವು. ಆ ಮೂಲಕ ಸತತ 8 ನೇ ದಿನವೂ ಷೇರುಪೇಟೆ ಜಾರುಪಥದಲ್ಲಿಯೇ ಮುಂದುವರಿದಿದೆ. ಫೆಬ್ರವರಿ ಒಂದೇ ತಿಂಗಳಲ್ಲಿ 4೦೦೦ ಅಂಕಗಳು ಕುಸಿತ ಸತತ 8 ದಿನಗಳಿಂದ ಜಾರುಪಥದಲ್ಲೇ ಇರುವ ಷೇರುಪೇಟೆಯಲ್ಲಿ ಫೆಬ್ರವರಿ ತಿಂಗ ಳೊAದರಲ್ಲೇ ಸೆನ್ಸೆಕ್ಸ್ 4೦೦೦ ಅಂಕದಷ್ಟು ಕುಸಿತ ಕಂಡಿರುವುದು ಹೂಡಿಕೆದಾರ ಆತಂಕಕ್ಕೆ ಕಾರಣವಾಗಿದೆ. ಸತತ ಕುಸಿತಕ್ಕೆ ಹಲವಾರು ಅಂಶಗಳು ಕಾರಣ ಎನ್ನಲಾಗುತ್ತಿದ್ದು,ರೂಪಾಯಿ ಬೆಲೆ ಡಾಲರ್ ಮುಂದೆ ಕುಗ್ಗುತ್ತಿರುವುದು, ವಿದೇಶಿ ಬಂಡವಾಳವನ್ನು ಹೂಡಿಕೆದಾರರು ನಿರಂತರವಾಗಿ ಹಿಂಪಡೆ ಯುತ್ತಿರುವುದು, ಭಾರತದ ಆರ್ಥಿಕತೆ ಪ್ರಗತಿಯಲ್ಲಿ ನಿಧಾನಗತಿ ಕಂಡುಬAದಿರುವುದು ಹಾಗೂ ಟ್ರಂಪ್ ತೆರಿಗೆ ಮಾತುಗಳು ಕೂಡ ಪ್ರಮುಖ ಕಾರಣಗಳೆಂದು ಹೇಳಲಾಗುತ್ತಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರತಿತೆರಿಗೆ ಕುರಿತು ನೀಡಿದ ಹೇಳಿಕೆ, ಕೇಂದ್ರ ಸರ್ಕಾರದ ಜಿಡಿಪಿ ಅಂದಾಜು ಮಾಹಿತಿ ಬಿಡುಗಡೆ ನಡುವೆಯೇ ಷೇರುಮಾರುಕಟ್ಟೆ ತಲ್ಲಣಗೊಂಡಿರುವುದು ಹೂಡಿಕೆದಾರರನ್ನು ತಲ್ಲಣಗೊಳಿಸಿದೆ. ಟ್ರಂಪ್ ಹೊಸ ನೀತಿಯಿಂದಾಗಿ ನಡೆಯುತ್ತಿರುವ ತೆರಿಗೆ ಸಮರದಿಂದಾಗಿ ಜಾಗತಿಕ ಷೇರುಮಾರುಕಟ್ಟೆ ಕರಡಿ ಹಿಡಿತಕ್ಕೆ ಸಿಲುಕಿದ್ದು, ಇನ್ನಷ್ಟು ದಿನ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.
ಕಳೆದ ವರ್ಷ ಸೆಪ್ಟೆಂಬರ್ 27 ರಂದು ಸೆನ್ಸೆಕ್ಸ್ ದಾಖಲೆ ಪ್ರಮಾಣದ 85,978.25ಕ್ಕೆ ತಲುಪಿದ್ದು, ಆಗಿನಿಂದ ಇಲ್ಲಿನವರೆಗೆ 12,780 ಪಾಯಿಂಟ್(ಶೇ.14.86)ಗಳಷ್ಟು ತಗ್ಗಿದೆ. ನಿಫ್ಟಿಯೂ ದಾಖಲೆ ಪ್ರಮಾಣದ 26,277 ರಿಂದ ಶೇ.15.80 ರಷ್ಟು ಕಡಿಮೆಯಾಗಿದೆ. ಆಗಿನಿಂದ ಇಲ್ಲಿಯವರೆಗೆ 93.91 ಲಕ್ಷ ಕೋಟಿ ರೂ. ಗಳಷ್ಟು ಮಾರುಕಟ್ಟೆ ಬಂಡವಾಳ ಕುಗ್ಗಿದೆ.