Wednesday, March 25, 2026
Flats for sale
Homeವಾಣಿಜ್ಯನವದೆಹಲಿ : ಏಪ್ರಿಲ್ 1 ರಿಂದ ಪ್ಯಾನ್ ಕಾರ್ಡ್ ಗೆ ಹೊಸ ನಿಯಮ ಜಾರಿ.

ನವದೆಹಲಿ : ಏಪ್ರಿಲ್ 1 ರಿಂದ ಪ್ಯಾನ್ ಕಾರ್ಡ್ ಗೆ ಹೊಸ ನಿಯಮ ಜಾರಿ.

ನವದೆಹಲಿ : ಪ್ಯಾನ್ ಕಾರ್ಡ್ ಮಾಡಿಸಲು ಹಾಗೂ ವ್ಯವಹರಿಸಲು ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಈವರೆಗೆ ಪ್ಯಾನ್ ಕಾರ್ಡ್ ಮಾಡಿಲು ಕೇವಲ ಆಧಾರ್ ಕಾರ್ಡ್ ಸಾಕಾಗಿತ್ತು. ಆದರೆ ಏ.1 ರಿಂದ ಹೊಸ ಕಾರ್ಡ್ ಮಾಡಿಸುವವರು ಹೊಸ ಆದಾಯ ತೆರಿಗೆ ನಿಯಮಗಳನ್ವಯ ತಮ್ಮ ಹುಟ್ಟಿದ ದಿನಾಂಕ ಸಾಬೀತಿಗೆ ಜನನ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, 10ನೇ ತರಗತಿ ಮಾರ್ಕ್ಸ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್ನಲ್ಲಿ ಯಾವುದಾದರೂ ಒಂದನ್ನು ಆಧಾರ್ ಜೊತೆಗೆ ಲಗತ್ತಿಸಬೇಕು. ಹಣಕಾಸು ವ್ಯವಹಾರ ಮಾಡುವಾಗ ಪ್ಯಾನ್ ಕಾರ್ಡ್ನ್ನು ಎಲ್ಲಿ ಮತ್ತು ಯಾವಾಗ ಬಳಸಬೇಕು ಎಂಬುದನ್ನೂ ಹೊಸ ಅದಾಯ ತೆರಿಗೆ ನಿಯಮಗಳು ಹೇಳಿವೆ. ಏಪ್ರಿಲ್ ೧ರಿಂದ ಹೊಸ ಅಪ್ಲಿಕೇಷನ್ ಫಾರಂ ಬರಲಿದೆ. ಕೆಲವು ನಿರ್ದಿಷ್ಟ ಅರ್ಜಿದಾರರು ಹೆಚ್ಚು ವಿವರಗಳನ್ನು ಒದಗಿಸಬೇಕಾಗುತ್ತದೆ. ಹೊಸ ನಿಯಮಗಳನ್ವಯ, ವರ್ಷಕ್ಕೆ 10 ಲಕ್ಷ ರೂ.ವರೆಗೆ ನಗದು ಠೇವಣಿ/ವಿತ್‌ಡ್ರಾ ಮಾಡಲು, 20 ಲಕ್ಷ ರೂ.ವರೆಗಿನ ಆಸ್ತಿಪಾಸ್ತಿ ವ್ಯವಹಾರ (ಈವರೆಗೆ 10 ಲಕ್ಷ ಇತ್ತು), 5 ಲಕ್ಷ ರೂ.ಗಿಂತ ಹೆಚ್ಚಿನ ವಾಹನ ಖರೀದಿ ಮತ್ತು 1 ಲಕ್ಷ ರೂ.ಗಿಂತ ಹೆಚ್ಚಿನ ಹೋಟೆಲ್ ಬಿಲ್ ಪಾವತಿ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ಅಗತ್ಯವಿದೆ ಎಂದು ಸೂಚಿಸಲಾಗಿದೆ.

ಡಿಓಬಿ ಸಾಬೀತಿಗೆ ಹೆಚ್ಚುವರಿ ಅಧಿಕೃತ ಪ್ರಮಾಣಪತ್ರ ಕೊಡಬೇಕು. ಏಪ್ರಿಲ್ 1 ರಿಂದ ಹೆಚ್ಚು ವಿವರಗಳ ಹೊಸ ಅಪ್ಲಿಕೇಷನ್ ಫಾರಂ ಲಭ್ಯವಾಗಿರುತ್ತದೆ.ಜನ್ಮ ದಿನಾಂಕ ಸಾಬೀತಿಗೆ ಇನ್ನು ಆಧಾರ್ ಒಂದೇ ಸಾಲೋದಿಲ್ಲ,ಪ್ಯಾನ್ ಅಗತ್ಯವಿರೋ ಆಸ್ತಿ ವಿವರ ಮಿತಿ 10-20ಲಕ್ಷ ರೂ.ಗೆ ಏರಿಕೆಯಾಗಿದೆ. ಪಾರದರ್ಶಕತೆ ಕಾಯ್ದುಕೊಳ್ಳಲು ಪೇಪರ್ ಕೆಲಸಕ್ಕೆ ಕಡಿವಾಣ ಹಾಕಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular