Sunday, July 13, 2025
Flats for sale
Homeಗ್ಯಾಜೆಟ್ / ಟೆಕ್ನವದೆಹಲಿ : ಎಲೋನ್ ಮಸ್ಕ್ ಒಡೆತನದ ಉಪಗ್ರಹ ಇಂಟರ್ನೆಟ್ ಕಂಪನಿ ಸ್ಟಾರ್‌ಲಿಂಕ್ ಇಂಟರ್ನೆಟ್‌ಗೆ ಭಾರತದದಲ್ಲಿ ಪರವಾನಿಗೆ..!

ನವದೆಹಲಿ : ಎಲೋನ್ ಮಸ್ಕ್ ಒಡೆತನದ ಉಪಗ್ರಹ ಇಂಟರ್ನೆಟ್ ಕಂಪನಿ ಸ್ಟಾರ್‌ಲಿಂಕ್ ಇಂಟರ್ನೆಟ್‌ಗೆ ಭಾರತದದಲ್ಲಿ ಪರವಾನಿಗೆ..!

ನವದೆಹಲಿ : ಎಲೋನ್ ಮಸ್ಕ್ ಒಡೆತನದ ಉಪಗ್ರಹ ಇಂಟರ್ನೆಟ್ ಕಂಪನಿ ಸ್ಟಾರ್‌ಲಿಂಕ್ (Starlink) ಭಾರತದಲ್ಲಿ ತನ್ನ ಸೇವೆಗಳನ್ನು ಒದಗಿಸಲು ಅಂತಿಮವಾಗಿ ಸರ್ಕಾರದ ಅನುಮೋದನೆಯನ್ನು ಪಡೆದುಕೊಂಡಿದೆ. ಶುಕ್ರವಾರ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ (DoT) ಸ್ಟಾರ್‌ಲಿಂಕ್ ಸಂಸ್ಥೆಗೆ ಅನುಮೋದನೆ ದೊರೆತಿದ್ದು, ಸ್ಟಾರ್‌ಲಿಂಕ್ ಭಾರತದಲ್ಲಿ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಪರವಾನಗಿ ಪಡೆದ ಮೂರನೇ ಕಂಪನಿಯಾಗಿ ಹೊರಹೊಮ್ಮಿದೆ. ಈ ಹಿಂದೆ ಏರ್‌ಟೆಲ್ ಬೆಂಬಲಿತ ಯುಟೆಲ್‌ಸ್ಯಾಟ್ ಒನ್‌ವೆಬ್ (Eutelsat OneWeb) ಮತ್ತು ರಿಲಯನ್ಸ್ ಜಿಯೋದ ಜಿಯೋ ಸ್ಯಾಟಲೈಟ್ ಕಮ್ಯುನಿಕೇಷನ್ಸ್ (Jio Satellite Communications) ಕಂಪನಿಗಳು ಪರವಾನಗಿ ಪಡೆದಿವೆ.

ಈ ಬೆಳವಣಿಗೆಯೊಂದಿಗೆ, ಸ್ಟಾರ್‌ಲಿಂಕ್ ಭಾರತದಲ್ಲಿ ತನ್ನ ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ. ದೇಶದಲ್ಲಿ ಸುಮಾರು 900 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ತಲುಪುವ ಗುರಿಯನ್ನು ಕಂಪನಿ ಹೊಂದಿದೆ ಎಂದು ರಾಯಿಟರ್ಸ್ ಮತ್ತು ಬ್ಲೂಮ್‌ಬರ್ಗ್ ವರದಿ ಮಾಡಿವೆ. ಇತ್ತ ದೂರಸಂಪರ್ಕ ಇಲಾಖೆಯ (DoT) ಮೂಲಗಳು ಸಹ ಸ್ಟಾರ್‌ಲಿಂಕ್‌ಗೆ ಪರವಾನಗಿ ಸಿಕ್ಕಿರುವುದನ್ನು ದೃಢಪಡಿಸಿದ್ದು, ಅರ್ಜಿ ಸಲ್ಲಿಸಿದ 15-20 ದಿನಗಳಲ್ಲಿ ಅವರಿಗೆ ಪ್ರಾಯೋಗಿಕ ಸ್ಪೆಕ್ಟ್ರಮ್ ನೀಡಲಾಗುವುದು ಎಂದು ಪಿಟಿಐ (PTI) ವರದಿ ಮಾಡಿದೆ. ಆದಾಗ್ಯೂ, ಈ ಕುರಿತು ಸ್ಟಾರ್‌ಲಿಂಕ್ ಅಥವಾ ದೂರಸಂಪರ್ಕ ಇಲಾಖೆ ತಕ್ಷಣವೇ ಅಧಿಕೃತ ಪ್ರಕಟಣೆ ನೀಡಿಲ್ಲ ಎಂಬುದನ್ನು ಗಮನಿಸಬೇಕು.

ಸ್ಟಾರ್‌ಲಿಂಕ್ ಎಂದರೆ ಏನು? ಸ್ಟಾರ್‌ಲಿಂಕ್‌ ಎಂಬುದು ವಿಶ್ವದ ಅತಿದೊಡ್ಡ ಉಪಗ್ರಹಗಳ ಗುಚ್ಛವಾಗಿದ್ದು, ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಸೇವೆ ಒದಗಿಸಲು ಉದ್ದೇಶಿತವಾಗಿದೆ. ಸುಮಾರು 7,000 ಸಣ್ಣ ಉಪಗ್ರಹಗಳು ಭೂಮಿಯಿಂದ ಸುಮಾರು 550 ಕಿ.ಮೀ ದೂರದಲ್ಲಿ ಲೋ ಅರ್ಥ್‌ ಆರ್ಬಿಟ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಉಪಗ್ರಹಗಳ ಸಹಾಯದಿಂದ ವಿಶ್ವದ ಯಾವುದೇ ಭಾಗದಲ್ಲಿ ಇಂಟರ್ನೆಟ್‌ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಸಾಂಪ್ರದಾಯಿಕ ಸೆಲ್ಯುಲರ್‌ ನೆಟ್ವರ್ಕ್‌ ಸೇವೆಗಾಗಿ ಮೊಬೈಲ್‌ ಟವರ್‌ಗಳನ್ನು ಬಳಸಬೇಕಾಗುತ್ತದೆ, ಆದರೆ ಸ್ಟಾರ್‌ಲಿಂಕ್‌ ವ್ಯವಸ್ಥೆಯಲ್ಲಿ ಇಂಟರ್ನೆಟ್‌ ನೇರವಾಗಿ ಉಪಗ್ರಹದಿಂದ ಬಳಕೆದಾರರ ಮನೆಗೆ ತಲುಪುತ್ತದೆ. ಇದಕ್ಕಾಗಿ, ಬಳಕೆದಾರರಿಗೆ ಸ್ಟಾರ್‌ಲಿಂಕ್‌ ರೂಟರ್‌ಅಗತ್ಯವಿದೆ, ಇದು ಸಮೀಪದ ಸ್ಟಾರ್‌ಲಿಂಕ್‌ ಉಪಗ್ರಹಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಸಾಂಪ್ರದಾಯಿಕ ಸೆಲ್ಯುಲರ್‌ ನೆಟ್ವರ್ಕ್‌ಗಳಿಗೆ ಹೋಲಿಸಿದರೆ, ಸ್ಟಾರ್‌ಲಿಂಕ್‌ ಉಪಗ್ರಹಗಳಿಂದ ನೇರವಾಗಿ ಗ್ರಾಹಕರ ಮನೆಗಳಿಗೆ ಇಂಟರ್ನೆಟ್ ಸೇವೆ ಒದಗಿಸುತ್ತದೆ.

ಹೇಗೆ ಕಾರ್ಯನಿರ್ವಹಿಸುತ್ತದೆ? ಸ್ಟಾರ್‌ಲಿಂಕ್ ರೂಟರ್ ಸಾಧನವು ಬಾಹ್ಯಾಕಾಶದಲ್ಲಿರುವ ಉಪಗ್ರಹಕ್ಕೆ ಡೇಟಾವನ್ನು ಕಳುಹಿಸುತ್ತದೆ. ಈ ಉಪಗ್ರಹವು ಇಂಟರ್ನೆಟ್‌ಗೆ ಸಂಪರ್ಕ ಹೊಂದಿರುವ ನೆಲದ ಸ್ಟೇಷನ್‌ಗಳಿಗೆ ಡೇಟಾವನ್ನು ಪ್ರಸಾರ ಮಾಡುತ್ತದೆ. ನಂತರ, ಈ ಡೇಟಾ ಪುನಃ ಉಪಗ್ರಹಕ್ಕೆ ಹಿಂತಿರುಗಿ ಬಳಕೆದಾರರ ಮೋಡೆಮ್ ಮತ್ತು ಉಪಗ್ರಹ ಡಿಶ್‌ಗೆ ತಲುಪುತ್ತದೆ. ಈ ಪ್ರಕ್ರಿಯೆಯ ಮೂಲಕ ನಿರಂತರ ಸಂಪರ್ಕವನ್ನು ಒದಗಿಸಲಾಗುತ್ತದೆ. ಈ ಕಾರ್ಯಾಚರಣೆಗೆ ಕೇಬಲ್‌ಗಳು, ಫೈಬರ್ ಅಥವಾ ಫೋನ್ ಲೈನ್‌ಗಳ ಅಗತ್ಯವಿಲ್ಲ. ಸಾಂಪ್ರದಾಯಿಕ ಇಂಟರ್ನೆಟ್ ಪೂರೈಕೆದಾರರು ಕೇಬಲ್‌ಗಳು ಅಥವಾ ಫೈಬರ್-ಆಪ್ಟಿಕ್ ಮೂಲಸೌಕರ್ಯವನ್ನು ಬಳಸುವಾಗ, ಸ್ಟಾರ್‌ಲಿಂಕ್ ಭೂಮಿಯ ಮೇಲೆ ಸುತ್ತುವ ಸಣ್ಣ ಉಪಗ್ರಹಗಳ ಜಾಲವನ್ನು ಬಳಸಿಕೊಂಡು ಬಳಕೆದಾರರಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ನೇರವಾಗಿ ಒದಗಿಸುತ್ತದೆ. ಕೇಬಲ್‌ಗಳನ್ನು ಹಾಕುವುದು ದುಬಾರಿಯಾಗಿರುವ ಗ್ರಾಮೀಣಅಥವಾ ತಲುಪಲು ಕಷ್ಟಕರ ಪ್ರದೇಶಗಳಲ್ಲಿ ಇದು ವಿಶೇಷವಾಗಿ ಪ್ರಯೋಜನಕಾರಿ.

5G ಗಿಂತ ಸ್ಟಾರ್‌ಲಿಂಕ್‌ ವೇಗವೇ? ಸಾಮಾನ್ಯವಾಗಿ ಸ್ಟಾರ್‌ಲಿಂಕ್‌ಗಿಂತ 5G ವೇಗವಾಗಿರುತ್ತದೆ ಎಂದು ಹೇಳಬಹುದಾದರೂ ಆದರೆ ಎರಡೂ ವೇಗದ ಸಂಪರ್ಕಗಳನ್ನು ಒದಗಿಸುತ್ತವೆ ಎನ್ನಬಹುದು. ನಗರ ಪ್ರದೇಶಗಳಲ್ಲಿ 5G ಉತ್ತಮ ಆಯ್ಕೆಯಾದರೆ, ಗ್ರಾಮೀಣ ಪ್ರದೇಶಗಳಿಗೆ ಸ್ಟಾರ್‌ಲಿಂಕ್ ಹೆಚ್ಚು ಅನುಕೂಲಕರವಾಗಿದೆ. ಏಕೆಂದರೆ, 5G ಡೆಟಾ 2 Gbps ವರೆಗೆ ವೇಗವನ್ನು ತಲುಪಬಹುದು ಮತ್ತು ಸರಾಸರಿ ಡೌನ್‌ಲೋಡ್ ವೇಗ 50 Mbps ಮತ್ತು 1 Gbps ನಡುವಿರುತ್ತದೆ. ಸ್ಟಾರ್‌ಲಿಂಕ್ ಸಾಮಾನ್ಯವಾಗಿ 250 Mbps ವರೆಗೆ ವೇಗವನ್ನು ಒದಗಿಸುತ್ತದೆ. ಆದರೆ ಇದು ನೆಟ್‌ವರ್ಕ್ ಲೋಡ್ ಮತ್ತು ಹವಾಮಾನದ ಮೇಲೆ ಅವಲಂಬಿತವಾಗಿದೆ. 5G ಸಾಮಾನ್ಯವಾಗಿ ಸ್ಟಾರ್‌ಲಿಂಕ್‌ಗಿಂತ ವೇಗವಾಗಿದ್ದರೂ ಎರಡೂ ವೇಗದ ಸಂಪರ್ಕವನ್ನು ಒದಗಿಸುತ್ತವೆ. ನಗರ ಪ್ರದೇಶಗಳಲ್ಲಿ 5G ಉತ್ತಮ ಆಯ್ಕೆಯಾದರೆ, ಗ್ರಾಮೀಣ ಪ್ರದೇಶಗಳಿಗೆ ಸ್ಟಾರ್‌ಲಿಂಕ್ ಹೆಚ್ಚು ಸೂಕ್ತವಾಗಿರುತ್ತದೆ. ಉಪಗ್ರಹಗಳು ಭೂಮಿಗೆ ಹತ್ತಿರದಲ್ಲಿರುವುದರಿಂದ ಕಡಿಮೆ ಲೇಟೆನ್ಸಿಯ ಡೇಟಾ ವೇಗವಾಗಿ ಪ್ರಯಾಣಿಸುತ್ತದೆ. ಸ್ಟಾರ್‌ಲಿಂಕ್ ಸೇವೆ ಎಲ್ಲೆಲ್ಲಿದೆ? ಪ್ರಸ್ತುತ ಸ್ಟಾರ್‌ಲಿಂಕ್ 100ಕ್ಕೂ ಹೆಚ್ಚು ದೇಶಗಳಲ್ಲಿ ಸೇವೆ ನೀಡುತ್ತಿದೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಮಲೇಷ್ಯಾ, ಇಂಡೋನೇಷ್ಯಾ, ಭೂತಾನ್ ಮತ್ತು ಶ್ರೀಲಂಕಾ ದೇಶಗಳಲ್ಲಿ ಸ್ಟಾರ್‌ಲಿಂಕ್ ಸೇವೆ ಈಗಾಗಲೇ ಲಭ್ಯವಿದ್ದು, ಯಾವುದೇ ಮೊಬೈಲ್ ಟವರ್‌ಗಳನ್ನು ಅಗತ್ಯವಿಲ್ಲದೆ ನೇರವಾಗಿ ಆಕಾಶದಿಂದ ಇಂಟರ್ನೆಟ್ ಸೇವೆ ಒದಗಿಸುತ್ತದೆ. ಭಾರತದಲ್ಲಿ ಮಾರುಕಟ್ಟೆ ಪ್ರವೇಶಿಸಲು ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿರುವ ಸ್ಟಾರ್‌ಲಿಂಕ್ ರಾಷ್ಟ್ರೀಯ ಭದ್ರತೆ ಮತ್ತು ಟೆಲಿಕಾಂ ಪೈಪೋಟಿಯ ಒತ್ತಡದ ಕಾರಣದಿಂದ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲು ಸಾಧ್ಯವಾಗುತ್ತಿಲ್ಲ. 100ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಸ್ಟಾರ್‌ಲಿಂಕ್ ಸ್ವತಃ ಭಾರತದಲ್ಲಿ ಮಾರುಕಟ್ಟೆ ಪ್ರವೇಶಿಸಲು ಪ್ರಯತ್ನಿಸಿದಾಗ ವಿಫಲವಾಗಿದೆ. ಆದರೆ, ಭಾರತದಲ್ಲಿ ಏರ್‌ಟೆಲ್ ಮತ್ತು ಜಿಯೋ ಜೊತೆ ಸಹಭಾಗಿತ್ವದಲ್ಲಿ ವಿಭಿನ್ನವಾಗಿ ಪ್ರವೇಶಿಸಲು (ಮತ್ತಷ್ಟು ಮಾಹಿತಿ ಲಭ್ಯವಾಗಬೇಕಾಗಿದೆ) ಸಿದ್ಧವಾಗಿದೆ. ಆದರೆ, ಈ ಸೇವೆ ಹೇಗಿರಲಿದೆ ಎಂಬುದು ತಿಳಿದುಬಂದಿಲ್ಲ. ಭಾರತಕ್ಕೆ ಏಕೆ ಮುಖ್ಯ? ಭಾರತವು ವಿಶ್ವದ ಎರಡನೇ ಅತಿದೊಡ್ಡ ಇಂಟರ್ನೆಟ್ ಮಾರುಕಟ್ಟೆಯಾಗಿದೆ, ಆದರೆ 67 ಕೋಟಿ ಜನರಿಗೆ ಇಂಟರ್ನೆಟ್ ಪ್ರವೇಶವಿಲ್ಲ (2024ರ GSMA ವರದಿ ಪ್ರಕಾರ). ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಸಾಂಪ್ರದಾಯಿಕ ನೆಟ್‌ವರ್ಕ್‌ಗಳ ಕೊರತೆಯ ಕಾರಣದಿಂದ ಡಿಜಿಟಲ್ ಅಂತರವನ್ನು ಸ್ಟಾರ್‌ಲಿಂಕ್ ಕಡಿಮೆ ಮಾಡಬಹುದು. ಇದು ರಾಷ್ಟ್ರವ್ಯಾಪಿ ಸಂಪರ್ಕವನ್ನು ಸುಲಭಗೊಳಿಸುತ್ತಿದ್ದು, ಇಂಟರ್ನೆಟ್‌ ಸೌಲಭ್ಯದಿಂದ ವಂಚಿತ ಪ್ರದೇಶಗಳಿಗೆ ತಲುಪಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪ್ರಸ್ತುತ, ದೇಶದ ಹಲವೆಡೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್‌ ಸಂಪರ್ಕದ ಸಮಸ್ಯೆ ಇದೆ, ಆದರೆ, ಸ್ಟಾರ್‌ಲಿಂಕ್‌ ಯಾವುದೇ ಮೊಬೈಲ್‌ ಟವರ್‌ಗಳನ್ನು ಅಗತ್ಯವಿಲ್ಲದೆ ನೇರವಾಗಿ ಆಕಾಶದಿಂದ ಇಂಟರ್ನೆಟ್‌ ಸೇವೆ ಒದಗಿಸುತ್ತದೆ. ಹೈಸ್ಪೀಡ್‌ ಇಂಟರ್ನೆಟ್‌ ಜೊತೆಗೆ ದೇಶದ ಎಲ್ಲೆಡೆ ಬಳಕೆದಾರರು ಸರಿಸುಮಾರು 25-220 ಎಂಬಿಪಿಎಸ್‌ ಡೌನ್‌ಲೋಡ್‌ ಸ್ಪೀಡ್‌ ಪಡೆಯಬಹುದು ಎನ್ನಲಾಗಿದೆ.

ಭಾರತದಲ್ಲಿ ವಿಳಂಬ ಏಕೆ? ಭಾರತದಲ್ಲಿ ಸ್ಟಾರ್‌ಲಿಂಕ್‌ನ ಸಂಪೂರ್ಣ ವಾಣಿಜ್ಯ ಉಡಾವಣೆಯು ಕೆಲವು ವಿಳಂಬಗಳನ್ನು ಅನುಭವಿಸಿದೆ. ಮುಖ್ಯವಾಗಿ ನಿಯಂತ್ರಣ ಸಂಬಂಧಿ ಸವಾಲುಗಳ ಕಾರಣದಿಂದ. ಕಂಪನಿಯು 2020 ರಿಂದ ಆಯ್ದ ಪ್ರದೇಶಗಳಲ್ಲಿ ಬೀಟಾ ಸೇವೆಗಳನ್ನು ಪ್ರಾರಂಭಿಸಿತ್ತು, ಆದರೆ ನಂತರ ಸರ್ಕಾರವು ಬೀಟಾ ಸೇವೆಯನ್ನು ನಿಲ್ಲಿಸಲು ನಿರ್ಧರಿಸಿತು. ವಿಶ್ವದಾದ್ಯಂತ ಉಪಗ್ರಹ ಆಧಾರಿತ ಸಂಪನ್ಮೂಲಗಳನ್ನು ಇಂಟರ್‌ನ್ಯಾಷನಲ್ ಟೆಲಿಕಾಂ ಯೂನಿಯನ್ ನಿರ್ವಹಿಸುತ್ತದೆ. ಭಾರತದಲ್ಲಿ ಉಪಗ್ರಹಗಳ ಬಳಕೆ ಮತ್ತು ಬಳಕೆದಾರರ ಲಿಂಕ್‌ಗಳನ್ನು ಸ್ಪೆಕ್ಟ್ರಮ್ ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತದೆ. ಈ ಕಾರಣದಿಂದಾಗಿ ಹರಾಜು ಪ್ರಕ್ರಿಯೆಯ ಮೂಲಕ ಪರವಾನಗಿ ಹಂಚಿಕೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಉಂಟಾಗಿವೆ. ಇದಲ್ಲದೆ, ದೇಶದಲ್ಲಿ 5G ಇಂಟರ್‌ನೆಟ್ ಒದಗಿಸಲು ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ಲಕ್ಷಾಂತರ ಕೋಟಿಗಳನ್ನು ಖರ್ಚು ಮಾಡಿದ್ದಾರೆ. ಸ್ಟಾರ್‌ಲಿಂಕ್ ಬರುವುದರಿಂದ ಈ ಸಂಸ್ಥೆಗಳಿಗೆ ಕಷ್ಟಗಳು ಎದುರಾಗಬಹುದು ಎಂದು ಹೇಳಲಾಗಿದೆ. ಭಾರತದಲ್ಲಿ ಬೆಲೆ ಎಷ್ಟಿರಬಹುದು? ದೇಶದಲ್ಲಿ ಉಪಗ್ರಹ ಸಂವಹನ ಸೇವೆಗಳನ್ನು ಪ್ರಾರಂಭಿಸಲು ಸ್ಟಾರ್‌ಲಿಂಕ್ ಸಂಸ್ಥೆ ಸಿದ್ಧವಾಗಿದ್ದು, ಆರಂಭದಲ್ಲಿ ತಿಂಗಳಿಗೆ ಕೇವಲ $10 (ಸುಮಾರು ₹850) ರಷ್ಟು ಕಡಿಮೆ ಬೆಲೆಯಲ್ಲಿ ಅನಿಯಮಿತ ಡೇಟಾ ಯೋಜನೆಗಳನ್ನು ನೀಡಲಿದೆ ಎನ್ನಲಾಗಿದೆ. ಈ ಮೂಲಕ ಇದು ವಿಶ್ವದ ಅಗ್ಗದ ಯೋಜನೆಗಳಲ್ಲಿ ಒಂದಾಗಲಿದೆ ಎಂದು ವರದಿಯಾಗಿದೆ.! ಹೌದು, ಹೆಚ್ಚಿನ ನಿಯಂತ್ರಕ ಅಡೆತಡೆಗಳನ್ನು ನಿವಾರಿಸಿದ ನಂತರ ಸ್ಟಾರ್‌ಲಿಂಕ್ ಭಾರತದಲ್ಲಿ ತನ್ನ ಉಪಗ್ರಹ ಸಂವಹನ ಸೇವೆಗಳನ್ನು ಪರಿಚಯಿಸಲು ಸಜ್ಜಾಗುತ್ತಿದ್ದು, ಅದರ ಯೋಜನೆಗಳ ಬೆಲೆ ತಿಂಗಳಿಗೆ $10 (ಸುಮಾರು ರೂ. 850) ರಷ್ಟು ಕಡಿಮೆ ಇರಬಹುದು ಎಂದು ಹಲವಾರು ಮಾಧ್ಯಮ ವರದಿಗಳು ಸೂಚಿಸುತ್ತದೆ. ಆರಂಭದಲ್ಲಿ ಲಭ್ಯವಾಗುವ ನಿರೀಕ್ಷೆಯಿರುವ ಪ್ರಚಾರ ಯೋಜನೆಗಳ ಅಡಿಯಲ್ಲಿ, ಈ ಬೆಲೆಯಲ್ಲಿ ಗ್ರಾಹಕರಿಗೆ ಅನಿಯಮಿತ ಡೇಟಾ ಯೋಜನೆಗಳನ್ನು ನೀಡಬಹುದು ಎಂದು ವರದಿಗಳಲ್ಲಿ ಹೇಳಲಾಗಿದೆ. ಆದರೆ, ಇದನ್ನು ಸ್ಟಾರ್‌ಲಿಂಕ್ ಈ ವರೆಗೆ ದೃಡಪಡಿಸಿಲ್ಲ.

RELATED ARTICLES

LEAVE A REPLY

Please enter your comment!
Please enter your name here

Most Popular