ನವದೆಹಲಿ : ಜಗತ್ತಿನ ದಕ್ಷಿಣ ಭಾಗದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಕೃತಕ ಬುದ್ದಿ ಮತ್ತೆಯ ಪರಿಣಾಮ ಕುರಿತ ಇಂಡಿಯಾ ಎಐ
ಇಂಪ್ಯಾಕ್ಟ್ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನವದೆಹಲಿಯ ಭಾರತ ಮಂಟಪAನಲ್ಲಿ ಚಾಲನೆ ನೀಡಿದರು.
ಉನ್ನತ ಸಾಮರ್ಥ್ಯ ಇರುವ 600 ಕ್ಕೂ ಹೆಚ್ಚು ನವೋದ್ಯಮಗಳು ಭಾಗವಹಿಸಿರುವ ಈ ಶೃಂಗ ಸಭೆಯನ್ನು ಪ್ರಧಾನಿ ಉದ್ಘಾಟಿಸಿದ ನಂತರ ಈ
ನವೋದ್ಯಮಗಳ ಪ್ರಮುಖರ ಜೊತೆ ಸಂವಾದ ನಡೆಸಿದ್ದಲ್ಲದೆ, ವಿವಿಧ ಸ್ಟಾಲ್‌ಗಳಿಗೆ ಭೇಟಿ ನೀಡಿ ಕಂಪನಿಗಳ ಅಧಿಕಾರಿಗಳ ಜತೆ ಚರ್ಚಿಸಿದರು.
ಎಐ ಸುರಕ್ಷತೆ, ಆಡಳಿತ ಹಾಗೂ ಅಂಕಿಅAಶಗಳ ಸುರಕ್ಷತೆಗೆ ಸಂಬAಧಿಸಿದ ಹಲವಾರು ವಿಚಾರಗಳು ಮುಂದಿನ ಐದು ದಿನಗಳ ಕಾಲ(ಫೆ.೨೦ವರೆಗೆ)
ಚರ್ಚಿಸಲಿರುವ ಈ ಶೃಂಗಸಭೆಯಲ್ಲಿ ೧೫ರಿಂದ ೨೦ ದೇಶಗಳ ಮುಖ್ಯಸ್ಥರು, 50ಕ್ಕೂ ಅಧಿಕ ಸಚಿವರುಗಳು, ೪೦ಕ್ಕೂ ಹೆಚ್ಚು ಜಗತ್ತಿನ ಹಲವೆಡೆ ಇರುವ ಕಂಪನಿಗಳ ಸಿಇಒಗಳು ಭಾಗವಹಿಸುತ್ತಿದ್ದಾರೆ.ಗೂಗಲ್ ಸಿಇಒ ಪಿಚಾಯ್, ಬಯೋಕಾನ್ ಗ್ರೂಪ್ ಅಧ್ಯಕ್ಷೆ ಮಜುಂದಾರ್ ಶಾ ಹಾಗೂ ಓಪನ್ ಎಐ ಸಿಇಒ ಸ್ಯಾಮ್ ಅಲ್ಫಮನ್ ಪಾಲ್ಗೊಳ್ಳುತ್ತಿದ್ದಾರೆ
ಶೃಂಗಸಭೆಯ ಭಾಗವಾಗಿ ಎಐ ಇಂಪಾಕ್ಟ್ ಎಕ್ಸ್ಫೋ ಹಾಗೂ 13 ದೇಶಗಳ ಮಂಟಪಗಳನ್ನು ತೆರೆಯಲಾಗಿದೆ. ಆಸ್ಟೆçÃಲಿಯಾ, ಜಪಾನ್, ರಷ್ಯಾ, ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ, ನೆದರಲ್ಯಾಂಡ್, ತಜಕಿಸ್ತಾನ, ಆಫ್ರಿಕಾ, ಸ್ವಿಜರಲ್ಯಾಂಡ್, ಸೆರ್ಬಿಯಾ ಹಾಗೂ ಎಸ್ಟೋನಿಯಾ ದೇಶಗಳು ಭಾಗಿಯಾಗಿ ತಮ್ಮ ಸ್ಟಾಲ್ ಹಾಕಿಕೊಂಡಿವೆ. ಮಂಗಳವಾರದಿAದ ಎಕ್ಸ್ಫೋ ವೀಕ್ಷಣೆಗೆ ಸಾರ್ವಜನಿಕರಿಗೂ ಅವಕಾಶ ನೀಡಲಾಗುತ್ತಿದೆ.
ಶೃAಗದ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಅಶ್ವಿನ್ ವೈಷ್ಣವ್, ನಿರಂತರ ತಪ್ಪು ಮಾಹಿತಿ ಹಬ್ಬುವ ಹಾಗೂ ಡೀಪ್‌ಫೇಕ್ ವಿಚಾರದಲ್ಲಿ ಕಾನೂನು ಹಾಗೂ ತಾಂತ್ರಿಕ ಪರಿಹಾರಗಳನ್ನು ಕಂಡುಹುಡುಕುವ ಕುರಿತು 30 ಕ್ಕೂ ಹೆಚ್ಚು ದೇಶಗಳ ಸಚಿವರುಗಳ ಜೊತೆ ಭಾರತ ಚರ್ಚಿಸುತ್ತಿದೆ ಎಂದರು.
ಮಾಹಿತಿ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದೇನು?: ಈ ಶೃಂಗಸಭೆಯ ಮುಖಾಂತರ ಕೃತಕ ಬುದ್ಧಿಮತ್ತೆ(ಎಐ) ಕುರಿತಂತೆ ಉತ್ತಮ ಫಲಿತಾಂಶವನ್ನು ಹೊರತರುತ್ತೇವೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ. ಎಐಯ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳ ಕುರಿತು ಪ್ರಸ್ತಾವಿಸಿದ ಅವರು, ಹವಾಮಾನ ಮುನ್ಸೂಚನೆ, ಪರಿಸರ ಬದಲಾವಣೆ,ಕೃಷಿ ಹಾಗೂ ಹೊಸ ಖನಿಜಗಳ ನಿಕ್ಷೇಪದ ವಿಚಾರದಲ್ಲಿ ಎಐಯಿಂದ ಸಕಾರಾತ್ಮಕವಾದ ಪ್ರಯೋಜನಗಳಿವೆ ಎಂದರು. ಭಾರತವು ಈ ತಂತ್ರಜ್ಞಾನದ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳನ್ನು ಸರಿದೂಗಿಸಲಿದೆ ಎಂದರು.
ಸಚಿವಾಲಯಗಳ ನಿರೀಕ್ಷೆಯೇನು?: ಆರೋಗ್ಯವಲಯದಲ್ಲಿ ಆರೋಗ್ಯ ನಿಗಾ ಕಾರ್ಮಿಕರ ಹೊರೆ ಕಡಿಮೆ ಮಾಡುವುದು ಹೇಗೆ ಎಂಬುದು ಈ
ಶೃಂಗಸಭೆಯಿAದ ನಿರೀಕ್ಷಿಸಲಾಗುತ್ತಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಪುಣ್ ಸಲೀಲಾ ಶ್ರೀವಾಸ್ತವ್ ಹೇಳಿದ್ದಾರೆ. ಭವಿಷ್ಯದಲ್ಲಿ ಶಾಲಾ ಕಾಲೇಜುಗಳ ಮಕ್ಕಳನ್ನು ಈ ತಂತ್ರಜ್ಞಾನ ಮೂಲಕ ಹೇಗೆ ಸಜ್ಜುಗೊಳಿಸಬಹುದೆಂಬುದರ ಕುರಿತು ಶಿಕ್ಷಣ ಕುರಿತ ಸಂವಾದದಲ್ಲಿ ಚರ್ಚಿಸಲಾಯಿತು ಎಂದು ಕೇಂದ್ರ ಸಹಾಯಕ ಸಚಿವ ಜಿತನ್ ಪ್ರಸಾದ್ ಹೇಳಿದರು.


