ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ 14 ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ- ಐಸಿಯು ಇಲ್ಲ, ಶೌಚಾಲಯವಿಲ್ಲದ ಮೊಹಲ್ಲಾ ಚಿಕಿತ್ಸಾಲಯಗಳು ಸೇರಿದಂತೆ ದೆಹಲಿಯ ಎಎಪಿ ಸರ್ಕಾರದ ಅವಧಿಯಲ್ಲಿನ ಆಸ್ಪತ್ರೆಗಳ ಅವ್ಯವಸ್ಥೆಯನ್ನು ಸಿಎಜಿ ವರದಿಯಲ್ಲಿ ಬಹಿರಂಗಪಡಿಸಿದೆ.
ದೆಹಲಿಯ ಹಲವಾರು ಆಸ್ಪತ್ರೆಗಳು ನಿರ್ಣಾಯಕ ವೈದ್ಯಕೀಯ ಸೇವೆಗಳ ತೀವ್ರ ಕೊರತೆ ಎದುರಿಸುತ್ತಿವೆ ಎಂದು ವರದಿ ಬಹಿರಂಗಪಡಿಸಿದ್ದು ನಗರದ 27 ಆಸ್ಪತ್ರೆಗಳಲ್ಲಿ 14 ಆಸ್ಪತ್ರೆಗಳಲ್ಲಿ ಐಸಿಯು ಸೌಲಭ್ಯಗಳಿಲ್ಲ, ಆದರೆ 16 ಆಸ್ಪತ್ರೆಗಳಲ್ಲಿ ರಕ್ತ ಬ್ಯಾಂಕ್‌ಗಳಿಲ್ಲ. ಹೆಚ್ಚುವರಿಯಾಗಿ, ಎಂಟು ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಇಲ್ಲ, ಮತ್ತು
15 ಆಸ್ಪತ್ರೆಗಳಲ್ಲಿ ಶವಾಗಾರವಿಲ್ಲ. 12 ಆಸ್ಪತ್ರೆಗಳು ಆಂಬ್ಯುಲೆನ್ಸ್ ಸೇವೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎನ್ನುವ ಆಘಾತಕಾರಿ ಸಂಗತಿ ಹೊರಹಾಕಿದೆ.
ದೆಹಲಿಯ ಆರೋಗ್ಯ ಮೂಲಸೌಕರ್ಯದ ಕುರಿತಾದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ -ಸಿಎಜಿ ವರದಿಯಲ್ಲಿ ಎಎಪಿ ಸರ್ಕಾರದ ಕಳೆದ ಆರು ವರ್ಷಗಳಲ್ಲಿ ತೀವ್ರ ಆರ್ಥಿಕ ದುರುಪಯೋಗ, ನಿರ್ಲಕ್ಷ್ಯ ಮತ್ತು ಹೊಣೆಗಾರಿಕೆಯ ಕೊರತೆಯನ್ನುಎತ್ತಿ ತೋರಿಸಿದೆ. ದೆಹಲಿ ವಿಧಾನಸಭೆಯಲ್ಲಿ ಮಂಡಿಸಲಾಗುವ ವರದಿಯಲ್ಲಿ ಆಸ್ಪತ್ರೆಗಳಿಗೆ ಉಪಕರಣಗಳು ಮತ್ತು ಆರೋಗ್ಯ ಕಾರ್ಯಕರ್ತರ ತೀವ್ರ ಕೊರತೆ, ಮೊಹಲ್ಲಾ ಚಿಕಿತ್ಸಾಲಯಗಳಲ್ಲಿ ಕಳಪೆ ಮೂಲಸೌಕರ್ಯ ಮತ್ತು ತುರ್ತು ನಿಧಿಯ ಬಳಕೆ ಮಾಡಿಕೊಂಡು ಅವ್ಯವಸ್ಥೆಯ ಆಗರವಾಗಿರುವ ಅಂಶದ ಬಗ್ಗೆ ಬೆಳಕು ಚೆಲ್ಲಲಾಗಿದೆ ಮೊಹಲ್ಲಾ ಚಿಕಿತ್ಸಾಲಯಗಳು ಮತ್ತು ಆಯುಷ್ ಔಷಧಾಲಯಗಳಲ್ಲಿ ಕಳಪೆ ಮೂಲಸೌಕರ್ಯ ಅನೇಕ ಮೊಹಲ್ಲಾ ಚಿಕಿತ್ಸಾಲಯಗಳಲ್ಲಿ ಶೌಚಾಲಯಗಳು, ವಿದ್ಯುತ್ ಬ್ಯಾಕಪ್ ಮತ್ತು ಚೆಕ್‌ಅಪ್ ಟೇಬಲ್‌ಗಳಂತಹ ಅಗತ್ಯ ಸೌಲಭ್ಯಗಳ ಕೊರತೆಯಿದೆ. ಆಯುಷ್ ಔಷಧಾಲಯಗಳಲ್ಲಿಯೂ ಇದೇ ರೀತಿಯ ಕೊರತೆಗಳ ವರದಿ ಆಗಿದೆ. ಆರೋಗ್ಯ ಕಾರ್ಯಕರ್ತರ ತೀವ್ರ ಕೊರತೆ ದೆಹಲಿ ಆಸ್ಪತ್ರೆಗಳು ಆತಂಕಕಾರಿ ಸಿಬ್ಬಂದಿ ಕೊರತೆ ಎದುರಿಸುತ್ತಿವೆ, ಶೇ. ೨೧ ರಷ್ಟು ದಾದಿಯರ ಕೊರತೆ, ಶೇ. 38 ರಷ್ಟು ಅರೆವೈದ್ಯರ ಕೊರತೆ ಮತ್ತು ಕೆಲವು ಆಸ್ಪತ್ರೆಗಳಲ್ಲಿ ಶೇ. 50-96 ರಷ್ಟು ವೈದ್ಯರು ಮತ್ತು
ದಾದಿಯರ ಕೊರತೆಯಿದೆ ಎನ್ನುವ ಸಂಗತಿಯನ್ನು ಬಯಲು ಮಾಡಿದೆ.
ರಾಜೀವ್ ಗಾಂಧಿ ಮತ್ತು ಜನಕ್‌ಪುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಆಪರೇಷನ್ ಥಿಯೇರ‍್ಗಳು, ಐಸಿಯು ಹಾಸಿಗೆಗಳು ಮತ್ತು ಖಾಸಗಿ ಕೊಠಡಿಗಳು ಬಳಕೆಯಾಗದೆ ಉಳಿದಿವೆ, ಆದರೆ ಆಘಾತ ಕೇಂದ್ರಗಳಲ್ಲಿ ತುರ್ತು ಆರೈಕೆಗಾಗಿ ತಜ್ಞ ವೈದ್ಯರ ಕೊರತೆಯಿದೆ ಎಂದು ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ.
ತುರ್ತು ನಿಧಿ ಕಡಿಮೆ ಬಳಕೆ:
ಕೋವಿಡ್-19 ಪ್ರತಿಕ್ರಿಯೆಗಾಗಿ ನಿಗದಿಪಡಿಸಿದ ರೂ. 787.೯೧ ಕೋಟಿಯಲ್ಲಿ ಕೇವಲ ರೂ. 582.84 ಕೋಟಿ ಮಾತ್ರ ಬಳಸಲಾಗಿದೆ. ಆರೋಗ್ಯ ಕಾರ್ಯಕರ್ತರಿಗೆ ಮೀಸಲಾದ ಒಟ್ಟು 30.52 ಕೋಟಿ ರೂ. ಖರ್ಚು ಮಾಡದೆ ಉಳಿದಿದ್ದು, ಅಗತ್ಯ ಔಷಧಗಳು ಮತ್ತು ಪಿಪಿಇ ಕಿಟ್‌ಗಳಿಗಾಗಿ ನಿಗದಿಪಡಿಸಿದ 83.14 ಕೋಟಿ ರೂ. ಬಳಕೆಯಾಗದೆ ಉಳಿದಿದೆ. ಭರವಸೆ ನೀಡಿದ 32,೦೦೦ ಹೊಸ ಆಸ್ಪತ್ರೆ ಹಾಸಿಗೆಗಳಲ್ಲಿ, ಕೇವಲ 1,357 ಮಾತ್ರ ಸೇರಿಸಲಾಗಿದೆ. ಕೆಲವು ಆಸ್ಪತ್ರೆಗಳು ಶೇ. 101 – 189 ರಷ್ಟು ಆಕ್ಯುಪೆನ್ಸೀ ದರಗಳನ್ನು ವರದಿ ಮಾಡಿವೆ, ಇದರಿಂದಾಗಿ ರೋಗಿಗಳು ನೆಲದ ಮೇಲೆ ಮಲುಗುವ ಸ್ಥಿತಿ ನಿರ್ಮಾಣವಾಗಿತ್ತು ಎಂದು ಹೇಳಲಾಗಿದೆ.
ಪ್ರಮುಖ ಆಸ್ಪತ್ರೆ ಯೋಜನೆಗಳು 3 ರಿಂದ 6 ವರ್ಷಗಳ ವಿಳಂಬದಿಂದ ವೆಚ್ಚ ಹೆಚ್ಚಾಗಿವೆ,382.52 ಕೋಟಿಯಷ್ಟು ಹೆಚ್ಚಾಗಿದೆ. ಇದರಿಂದಾಗಿ, ಇಂದಿರಾ ಗಾಂಧಿ ಆಸ್ಪತ್ರೆ, ಬುರಾರಿ ಆಸ್ಪತ್ರೆ ಮತ್ತು ಎಂಎ ಡೆಂಟಲ್ ಆಸ್ಪತ್ರೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ ಲೋಕ ನಾಯಕ್ ಆಸ್ಪತ್ರೆಯಲ್ಲಿ ರೋಗಿಗಳು ಸಾಮಾನ್ಯ ಶಸ್ತçಚಿಕಿತ್ಸೆಗಳಿಗೆ 2 ರಿಂದ 3 ತಿಂಗಳು ಮತ್ತು ಸುಟ್ಟಗಾಯಗಳು ಮತ್ತು ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆಗಳಿಗೆ 6 ರಿಂದ 8 ತಿಂಗಳು ಕಾಯುತ್ತಾರೆ. ಸಿಎನ್‌ಬಿಸಿ ಆಸ್ಪತ್ರೆಯಲ್ಲಿ ಮಕ್ಕಳ ಶಸ್ತçಚಿಕಿತ್ಸೆಗಳಿಗೆ 12 ತಿಂಗಳ ಕಾಯುವ ಅವಧಿ ಇದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ದೆಹಲಿ ಅಬಕಾರಿ ನೀತಿಯ ಕುರಿತು ಸಿಎಜಿ ವರದಿಯನ್ನು ಮಂಡಿಸಿದ್ದ ವರದಿಯಲ್ಲಿ ಈ ವಿಷಯ ತಿಳಿಸಿದ್ದಾರೆ.