Tuesday, March 17, 2026
Flats for sale
Homeದೇಶನವದೆಹಲಿ : ಉಗ್ರರ ಪ್ರತಿಕಾರಕ್ಕೆ ಮೋದಿ, ಶಾ, ರಾಜನಾಥ್, ದೋವಲ್ ಬಿರುಸಿನ ಸಭೆ, ಸೇನೆಯ ಜೊತೆ...

ನವದೆಹಲಿ : ಉಗ್ರರ ಪ್ರತಿಕಾರಕ್ಕೆ ಮೋದಿ, ಶಾ, ರಾಜನಾಥ್, ದೋವಲ್ ಬಿರುಸಿನ ಸಭೆ, ಸೇನೆಯ ಜೊತೆ ರಕ್ಷಣಾ ಸಚಿವ ಚರ್ಚೆ..!

ನವದೆಹಲಿ/ಶ್ರೀನಗರ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಹಿಂದೂ ನರ ಮೇಧಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಹಾಗೂ ಶತಾಯಗತಾಯ ಪ್ರತೀಕಾರ ತೀರಿಸಿಕೊಳ್ಳಲು ಮೋದಿ ಸರ್ಕಾರ ಮುಂದಾ ಗಿದೆ. ಇದಕ್ಕೆ ಪೂರಕ ವೆಂಬAತೆ ಕೇಂದ್ರ ಸರ್ಕಾರದ ಪ್ರಮುಖ ಸಚಿವರು ಹಾಗೂ ಅಧಿಕಾರಿಗಳು ಬುಧವಾರ ಬೆಳಗ್ಗೆಯಿಂದ ಬಿಟ್ಟು ಬಿಡದೇ ಸರಣಿ ಸಭೆಗಳನ್ನು ಮಾಡಿದ್ದಾರೆ.

ಘಟನೆ ಬೆನ್ನಲ್ಲೇ ಎರಡು ದಿನದ ಸೌದಿ ಅರೇಬಿಯಾ ಪ್ರವಾಸ ರದ್ದುಗೊಳಿಸಿದ ಬುಧವಾರ ಬೆಳಗ್ಗೆ ದೆಹಲಿಗೆ ಬಂದಿಳಿದ ಮೋದಿ, ಏರ್‌ಪೋರ್ಟಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಂದ ಸಮಗ್ರ ಮಾಹಿತಿ ಪಡೆದು ಅಲ್ಲೇ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ನಂತರ ತಮ್ಮ ನಿವಾಸದಲ್ಲಿ ಸತತ ಒಂದಾದ ಮೇಲೊಂದರಂತೆ ಸರಣಿ ಸಭೆ ನಡೆಸಿ ಪಾಕಿಸ್ತಾನಕ್ಕೆ ಹಾಗೂ ದಾಳಿಕೋರ ಉಗ್ರರಿಗೆ ಯಾವೆಲ್ಲ ರೀತಿ ಪ್ರತೀಕಾರದ ಉತ್ತರ ನೀಡಬೇಕು ಎಂಬ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ.

ಬುಧವಾರ ಸಂಜೆ ಕೂಡ ಮೋದಿ ನೇತೃತ್ವದಲ್ಲಿ ಹೈಲೆವೆಲ್ ಮೀಟಿಂಗ್ ನಡೆದಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ ದೆಹಲಿಗೆ ಬಂದ ಅಮಿತ್ ಶಾ ನೇರವಾಗಿ ಮೋದಿ ನಿವಾಸಕ್ಕೆ ತೆರಳಿದ ಹೈಲೆವೆಲ್ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಸಭೆಯಲ್ಲಿ ರಾಜನಾಥ್ ಸಿಂಗ್, ಅಜಿತ್ ದೋವಲ್ ಸೇರಿದಂತೆ ಇನ್ನೂ ಕೆಲ ಪ್ರಮುಖ ರಕ್ಷಣಾ ಅಧಿಕಾರಗಳು ಮಾತ್ರ ಭಾಗಿಯಾಗಿದ್ದರು. ಇದಕ್ಕೂ ಮೊದಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಜಿತ್ ದೋವಲ್ ಹಾಗೂ ಮೂರೂ ಸೇನೆಗಳ ಮುಖ್ಯಸ್ಥರನ್ನು ಖುದ್ದು ಭೇಟಿಯಾಗಿ ರಕ್ಷಣಾ ಸಂಬAಧ ವಿಷಯಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದ್ದಾರೆ. ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ ಉಗ್ರರನ್ನಷ್ಟೇ ಅಲ್ಲದೇ ಅವರ ಹಿಂದಿರುವ ಮಾಸ್ಟರ್‌ಮೈಂಡ್‌ಗಳನ್ನು ಬಿಡುವುದಿಲ್ಲ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.

ದಾಳಿಯ ಸೂತ್ರಧಾರಿ ಸೈಫುಲ್ಲಾ ಖಾಲಿದ್ ಹಫೀಸ್ ಸಯೀದ್ ಸ್ನೇಹಿತ..!

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್ ಏ ತೊಯ್ಬಾ ನಾಯಕ ಸೈಫುಲ್ಲಾ ಕಸೂರಿ ಅಲಿಯಾಸ್ ಖಾಲಿದ್ ಎಂದು ತಿಳಿದು ಬಂದಿದೆ. ಪಾಕ್ ಸರ್ಕಾರ ಹಾಗ ಸೇನೆಯ ಜತೆ ನಿಕಟ ನಂಟು ಹೊAದಿರುವ ಉಗ್ರ ಹಫೀಜ್ ಸಯೀದ್ ಹಾಗೂ ಈ ಸೈಫುಲ್ಲಾ ಸ್ನೇಹಿತರು. ಪಾಕ್ ಸೇನೆಯ ಅನಧಿಕೃತ ಭಯೋ ತ್ಪಾದಕ ಕಾರ್ಯಾಚರಣೆಗಳನ್ನೂ ಹಿಂದಿನಿAದಲೂ ನಡೆಸಿಕೊಂಡು ಬAದಿರುವ ಸೈಫುಲ್ಲಾ ಖಾಲಿದ್ ಆಪ್ ಆಡಳಿತಕ್ಕೂ ಅತ್ಯಂತ ಪ್ರೀತಿ ಪಾತ್ರ ಹಾಗೂ ನಂಬಿಕಸ್ಥ ವ್ಯಕ್ತಿ. ಪಾಕ್ ಸೈನಿಕರನ್ನು ಹುರುದುಂಬಿಸಲು ಅಲ್ಲಿನ ಸೇನೆ ಉಗ್ರ ಸೈಫುಲ್ಲಾನನ್ನು ಆಗಾಗ ಆಹ್ವಾನಿಸುತ್ತಿರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular