Friday, January 16, 2026
Flats for sale
Homeದೇಶನವದೆಹಲಿ : ಇ.ಡಿ ಶೋಧ ಕಾರ್ಯಕ್ಕೆಅಡ್ಡಿ ,ಸುಪ್ರೀಂ ಕೋರ್ಟ್ನಲ್ಲೂ ಮಮತಾ ಬ್ಯಾನರ್ಜಿಗೆ ಭಾರಿ ಮುಖಭಂಗ.

ನವದೆಹಲಿ : ಇ.ಡಿ ಶೋಧ ಕಾರ್ಯಕ್ಕೆಅಡ್ಡಿ ,ಸುಪ್ರೀಂ ಕೋರ್ಟ್ನಲ್ಲೂ ಮಮತಾ ಬ್ಯಾನರ್ಜಿಗೆ ಭಾರಿ ಮುಖಭಂಗ.

ನವದೆಹಲಿ : ಗುರುವಾರ ಕೋಲ್ಕತಾ ಹೈಕೋರ್ಟ್ನಲ್ಲಿ ಟಿಎಂಸಿ ಅರ್ಜಿ ವಜಾ ಬೆನ್ನಲ್ಲೇ ಈಗ ಸುಪ್ರೀಂ ಕೋರ್ಟ್ನಲ್ಲೂ ಮಮತಾ ಬ್ಯಾನರ್ಜಿಗೆ ಭಾರಿ ಮುಖಭಂಗವಾಗಿದೆ. ಗುರುವಾರದ ವಿಚಾರಣೆ ವೇಳೆ ಇ.ಡಿ ಶೋಧ ಕಾರ್ಯಕ್ಕೆ ಅಡ್ಡಿಯುಂಟು ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದೆ. ಸದ್ಯ ಕೆಲ ಬಹುಪ್ರಮುಖ ಪ್ರಶ್ನೆಗಳು ಉದ್ಭವಿಸಿದ್ದು ಅವುಗಳಿಗೆ ಉತ್ತರ ಕಂಡುಕೊಳ್ಳದೇ ಹೋದರೆ ಅದು ಅರಾಜಕತೆಗೆ ಕಾರಣವಾದೀತು. ತನಿಖಾ ಸಂಸ್ಥೆ ಅಪರಾಧಕ್ಕೆ ಸಂಬAಧಿಸಿದ ವಿಷಯದಲ್ಲಿ ತನಿಖೆ ನಡೆಸುವಾಗ ರಾಜಕೀಯ ಚಟುವಟಿಕೆಗಳ ಮೂಲಕ ಅದಕ್ಕೆ ಅಡ್ಡಿ ಮಾಡಬಹುದೇ? ಎಂಬ ಪ್ರಶ್ನೆ ಉದ್ಭವಿಸಿದೆ ಎಂಬುದಾಗಿ ಸುಪ್ರೀಂ ಕೋರ್ಟ್ ನ್ಯಾಯಪೀಠ ಪ್ರಶ್ನಿಸಿದೆ.

ಇನ್ನು, ಐ-ಪ್ಯಾಕ್ ಸಲಹಾ ಸಂಸ್ಥೆ ವಿರುದ್ಧ ಶೋಧ ನಡೆಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯ ವಿರುದ್ಧ ಕೋಲ್ಕತಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ಕೂಡ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮಬಂಗಾಳ ಸರ್ಕಾರ ಹಾಗೂ ಕೋಲ್ಕತಾ ಪೊಲೀಸರಿಗೆ ಭಾರೀ ಮುಖಭಂಗವಾಗಿದೆ.

ರಾಜ್ಯದ ಡಿಜಿಪಿ ರಾಜೀವ್ ಕುಮಾರ್ ಹಾಗೂ ಕೋಲ್ಕತಾ ಪೊಲೀಸ್ ಕಮಿಷನರ್ ಸೇರಿ ಹಲವರನ್ನು ಅಮಾನತು ಮಾಡಬೇಕೆಂದು ಇ.ಡಿ. ಆಗ್ರಹಿಸಿರುವ ಕಾರಣ ಕೇಂದ್ರ ಗೃಹ ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸ್ ಸರ್ಕಾರದಿಂದ ನ್ಯಾಯಾಲಯ ಪ್ರತ್ಯುತ್ತರ ಬಯಸಿದೆ. ಹಾಗೆಯೇ ಸಿಬಿಐ ತನಿಖೆಗೆ ಕೋರಿದ ಅರ್ಜಿ ಬಗ್ಗೆಯೂ ಅಭಿಪ್ರಾಯ ಕೇಳಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಐ-ಪ್ಯಾಕ್ ಸಲಹಾ ಸಂಸ್ಥೆಯ ಕಟ್ಟಡದಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದರ ವಿಷಯದಲ್ಲಿ ಈ ತನಿಖಾ ಸಂಸ್ಥೆ ಮತ್ತು ಮಮತಾ ನಡುವಿನ ಕಾನೂನು ಸಮರ ಈಗ ಸುಪ್ರೀಂಕೋರ್ಟ್ ಹಂತ ತಲುಪಿದೆ. ರಾಜ್ಯ ಸರ್ಕಾರದ ಸಂಸ್ಥೆಗಳಿAದ ಹಸ್ತಕ್ಷೇಪ ಹಾಗೂ ತನಿಖೆಗೆ ಸಂಬAಧಿಸಿದAತೆ ಗಂಭೀರ ಅಂಶಗಳನ್ನು ಇ.ಡಿ. ಅಧಿಕಾರಿಗಳು ನ್ಯಾಯಾಲಯ ಮುಂದಿರಿಸಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಸಾಕ್ಷಾö್ಯಧಾರ ಗೋಚರಿಸುವಂತಹ ಪ್ರಕರಣವಿದೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಐ-ಪ್ಯಾಕ್ ಕಚೇರಿಯಲ್ಲಿ ನಡೆದ ಶೋಧ ಹಾಗೂ ತನಿಖೆ ವಿಷಯದಲ್ಲಿ ಮಮತಾ ಬ್ಯಾನರ್ಜಿ ಹಾಗೂ ಪಶ್ಚಿಮಬಂಗಾಳದ ಅಧಿಕಾರಿಗಳು ಹಸ್ತಕ್ಷೇಪ ನಡೆಸಿದ್ದಾರೆಂದು ಇ.ಡಿ ಆರೋಪಿಸಿದೆ. ಮುಖ್ಯಮಂತ್ರಿ ಮಮತಾ ಅವರು ಐ-ಪ್ಯಾಕ್ ಸ್ಥಾಪಕ ಪ್ರತೀಕ್ ಜೈನ್ ಅವರ ನಿವಾಸದಿಂದ ಸಾಕ್ಷಾö್ಯಧಾರಗಳನ್ನು ಕದ್ದೊಯ್ದಿದ್ದಾರೆ ಎಂದು ಇ.ಡಿ. ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೂರಿದ್ದಾರೆ. ಈ ರೀತಿಯ ಕೃತ್ಯಗಳು ಭವಿಷ್ಯದಲ್ಲಿ ಇಂಥದೇ ಪ್ರಕರಣಗಳು ಬಂದಾಗ ಯಾವ ರೀತಿ ವರ್ತಿಸಬೇಕೆಂದು ಪೊಲೀಸರಿಗೆ ಕುಮ್ಮಕ್ಕು ನೀಡುವಂತಿದೆ ಎಂದರು. ಇದೊAದು ಅಧಿಕಾರಿಗಳು ಬೆದರಿಕೆ ಮೂಲಕ ಜನರ ಮೇಲೆ ದಬ್ಬಾಳಿಕೆ ಮಾಡುವಂತಹ ಆಡಳಿತದಂತಿದೆ. ಜನವರಿ9 ರಂದು ಕೋಲ್ಕತಾ ಹೈಕೋರ್ಟ್ನಲ್ಲಿ ಪ್ರಕರಣಕ್ಕೆ ಸಂಬAಧಪಡದ ವಕೀಲರ ಗುಂಪು ವಿಚಾರಣೆಗೆ ಅಡ್ಡಿಪಡಿಸಿದ್ದರಿಂದ ವಿಚಾರಣೆ ಮುಂದೂಡಲ್ಪಟ್ಟಿತ್ತು ಎಂದೂ ಅವರು ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular