ನವದೆಹಲಿ : ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿಯ ಮೊಮ್ಮಗ ಏಕಾಗ್ರ ಕೇವಲ ನಾಲ್ಕು ತಿಂಗಳಲ್ಲೇ 240 ಕೋಟಿ ರೂ. ಮೌಲ್ಯದ ಇನ್ಫೋಸಿಸ್ ಷೇರುಗಳ ಮಾಲೀಕನಾಗಿದ್ದಾನೆ. ನಾರಾಯಣಮೂರ್ತಿ- ಸುಧಾ ಮೂರ್ತಿಯವರು ಕಳೆದ ನವೆಂಬರ್‌ನಲ್ಲಿ ಅಜ್ಜ-ಅಜ್ಜಿಯರಾದರು. ಈ ದಂಪತಿಯ ಮಗ ರೋಹನ್ ಮೂರ್ತಿ ಅವರ ಪತ್ನಿ ಅಪರ್ಣಾ ಕೃಷ್ಣನ್ ಈಗ ಏಕಾಗ್ರ ಎನ್ನುವ ನಾಲ್ಕು ತಿಂಗಳ ಗಂಡು ಮಗುವಿನ ತಾಯಿ.
ನಾರಾಯಣಮೂರ್ತಿ ತಮ್ಮ ಕುಟುಂಬದ ಪುಟ್ಟ ಸದಸ್ಯನಿಗೆ ಇನ್ಫೋಸಿಸ್‌ನ 15 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇನ್ಫೋಸಿಸ್ ದೇಶದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾಗಿದೆ. ಅದರಲ್ಲಿ ನಾರಾಯಣ ಮೂರ್ತಿ ತಮ್ಮ ಮೊಮ್ಮಗನಿಗೆ ನೀಡಿರುವ ಷೇರುಗಳ ಪಾಲು ಶೇ.0.೦4ರಷ್ಟಾಗಿದೆ. ಹೀಗಾಗಿ ಏಕಾಗ್ರ ಈಗ ಭಾರತದ ಅತಿ ಕಿರಿಯ ಮಿಲಿಯಾಧಿಪತಿ.
ನಾರಾಯಣಮೂರ್ತಿ ಈ ಕಂಪನಿಯಲ್ಲಿ 1.51 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಮೊಮ್ಮಗನಿಗೆ ಶೇ.೦.೦4 ಷೇರುಗಳನ್ನು ನೀಡಿರುವುದರಿಂದ ಅವರ ಷೇರುಗಳ ಪಾಲು ಶೇ. ೦.36ಕ್ಕೆ ಇಳಿದಿದೆ. ಸೋಮವಾರದಂದು ಇನ್ಫೋಸಿಸ್ ಕಂಪನಿಯ ಪ್ರತಿ ಷೇರು ಮೌಲ್ಯ ರೂ. 1.634.90.


