ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸತತ 4,078 ದಿನ ಪ್ರಧಾನಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ದಾಖಲೆ ಮುರಿದ್ದಾರೆ. ದೇಶದಲ್ಲಿ ಈಗ ದೀರ್ಘ ಕಾಲ ಸೇವೆ ಸಲ್ಲಿಸಿದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೇಶದಲ್ಲಿ ಹೆಚ್ಚು ಸಮಯ
ಪ್ರಧಾನಿಯಾಗಿರುವ ದಾಖಲೆ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಹೆಸರಿನಲ್ಲಿದೆ.
ನೆಹರೂ ಅವರು 1947ರ ಅಗಸ್ಟ್ 15ರಿಂದ 1964ರ ಮೇ 27ರ ವರೆಗೂ ಅಂದರೆ 16 ವರ್ಷ 286 ದಿನಗಳ ಕಾಲ ಪ್ರಧಾನಿಯಾಗಿದ್ದರು. ಅದಾದ ಬಳಿಕ ಇಂದಿರಾ 1966 ಜನವರಿ 24 ರಿಂದ 1977ರ ಮಾರ್ಚ್ 24ರವರೆಗೂ ಸತತ 4,೦77 ದಿನ ಸೇವೆ ಸಲ್ಲಿಸಿದ ದೇಶದ ಎರಡನೇ ಪ್ರಧಾನಿಯಾಗಿದ್ದರು.
ಆದರೀಗ ಮೋದಿ ಪ್ರಧಾನಿಯಾಗಿ ಶುಕ್ರವಾರ 4,೦78 ದಿನಗಳ ಪೂರ್ಣಗೊಳಿಸುವ ಮೂಲಕ ಇಂದಿರಾ ದಾಖಲೆ ಹಿಂದಿಕ್ಕಿ ದೀರ್ಘ ಕಾಲ ಸೇವೆ ಸಲ್ಲಿಸಿದ ಎರಡನೇ ಪ್ರಧಾನಿ ಎನ್ನುವ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇದಲ್ಲದೆ, ಮೋದಿ ಅವರು ಈಗಾಗಲೇ ಸತತ ಮೂರು ಬಾರಿ ಪ್ರಧಾನಿಯಾಗುವ ಮೂಲಕ ನೆಹರೂ ದಾಖಲೆಯನ್ನೂ ಹಿಂದಿಕ್ಕಿದ್ದಾರೆ.
2014 ರಿAದ ಪ್ರಧಾನಿ ಮೋದಿ ಕೈಗೊಂಡ ಪ್ರಮುಖ ನಿರ್ಧಾರ ಗಳೆಂದರೇ, ಮೇಕ್ ಇನ್ ಇಂಡಿಯಾ, ನೋಟು ಅಮಾನ್ಯೀಕರಣ, ಆರ್ಟಿಕಲ್ 370 ರದ್ದತಿ, ಉರಿ, ಬಾಲಾಕೋಟ್, ಆಪರೇಷನ್ ಸಿಂದೂರ್, ರಾಮ ಮಂದಿರ, ಕಾಶಿ, ಮಹಾಕಾಲ್-ಪುನರುತ್ಥಾನ.
ಮೋದಿಯ ಐತಿಹಾಸಿಕ ಮೈಲುಗಲ್ಲು:
ಸ್ವಾತಂತ್ರಾ ನAತರ ಜನಿಸಿದ ಮೊದಲ ಪ್ರಧಾನಿ,ಧೀರ್ಘ ಕಾಲ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ನಾಯಕ,ಹಿಂದಿಯೇತರ ರಾಜ್ಯಕ್ಕೆ ಸೇರಿದ ಮೊದಲ ಪ್ರಧಾನಮಂತ್ರಿ,ಅತಿ ಹೆಚ್ಚು ಕಾಲ ರಾಜ್ಯ, ಕೇಂದ್ರ ಸರ್ಕಾರ ನಿರ್ವಹಿಸಿದವರು ಪ್ರಧಾನಿಯಾಗಿ 2 ಅವಧಿ ಪೂರ್ಣಗೊಳಿಸಿದ,ಮೊದಲ ಕಾಂಗ್ರೆಸ್ಸೇತರ ನಾಯಕ ನರೇಂದ್ರ ಮೋದಿ,ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ಸೇತರ ನಾಯಕ,ಸ್ವಂತ ಬಹುಮತದಲ್ಲಿ ಪ್ರಧಾನಿಯಾದ ಮೊದಲ ಕಾಂಗ್ರೆಸ್ಸೇತರ ನಾಯಕ ಮೋದಿ,ನೆಹರೂ ಹೊರತಾಗಿ ಸತತ ಮೂರು ಬಾರೀ ಚುನಾವಣೆ ಗೆದ್ದ ಬಿಜೆಪಿ ನಾಯಕ ಬಿಜೆಪಿ ನಾಯಕನಾಗಿ ಆರು ಬಾರಿ ಚುನಾವಣೆಯಲ್ಲಿ ಗೆದ್ದ ದೇಶದ ಮೊದಲ ನಾಯಕ ಎಂಬ ಕೀರ್ತಿ ಇದೆ.