Friday, November 22, 2024
Flats for sale
Homeದೇಶನವದೆಹಲಿ : ಅರವಿಂದ್ ಕೇಜ್ರಿವಾಲ್ ಗೆ ಉಗ್ರರಿಂದ 100 ಕೋಟಿ ಹಣ, ಖಲಿಸ್ತಾನಿ ಉಗ್ರ ಪನ್ನುವಿಂದ...

ನವದೆಹಲಿ : ಅರವಿಂದ್ ಕೇಜ್ರಿವಾಲ್ ಗೆ ಉಗ್ರರಿಂದ 100 ಕೋಟಿ ಹಣ, ಖಲಿಸ್ತಾನಿ ಉಗ್ರ ಪನ್ನುವಿಂದ ಹೊಸ ಬಾಂಬ್.

ನವದೆಹಲಿ : ಮದ್ಯೆ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಪ್ರತ್ಯೇಕಕತಾವಾದಿ ಮುಖಂಡ ಎಎಪಿಗೆ ಉಗ್ರಗಾಮಿ ಸಂಘಟನೆಗಳು 100 ಕೋಟಿ ರೂ. ನೀಡಿವೆ ಎಂದು ಹೊಸ ಬಾಂಬ್ ಸಿಡಿಸಿದ್ದಾನೆ. ಇದು ದೇಶದ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

2014 ಮತ್ತು 2022 ರ ನಡುವೆ ಖಲಿಸ್ತಾನಿ ಉಗ್ರ ಸಂಘಟನೆಯ ಗುAಪುಗಳು ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಪಕ್ಷಕ್ಕೆ 100 ಕೋಟಿ ರೂಪಾಯಿ ನೀಡಿವೆ ಎಂದು ಸಿಖ್ ಪ್ರತ್ಯೇಕತಾವಾದಿ ಹಾಗೂ ಎಸ್‌ಎಫ್‌ಜೆ ಮುಖ್ಯಸ್ಥ ಗುರುಪತ್ವಂಗ್ ಸಿಂಗ್ ಪನ್ನೂನ್ ಸ್ಫೋಟ ಹೇಳಿಕೆ ನೀಡಿದ್ದಾನೆ.

ದೆಹಲಿ ಬಾಂಬ್ ಸ್ಫೋಟದ ರುವಾರಿ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಅವರನ್ನು ಬಂಧಮುಕ್ತ ಸಲುವಾಗಿ ಎಎಪಿಗೆ ಹಣ ನೀಡಲಾಗಿದೆ. ಹೀಗಾಗಿ ಕೇಜ್ರಿವಾಲ್ ಅವರು ಭುಲ್ಲರ್‌ನನ್ನು ಬಿಡುಗಡೆ ಮಾಡಲು ಮುಂದಾಗಿರುವುದನ್ನು ಬಹಿರAಗಪಡಿಸಿದ್ದಾನೆ.

ಈ ಸಂಬAಧ ಪನ್ನೂನ್ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಂಚಿಕೊAಡಿದ್ದು ಪನ್ನುನ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪಕ್ಷದ ನಿಧಿಗೆ ದೇಣಿಗೆ ನೀಡಲಾಗಿದೆ. ಅದಕ್ಕೆ ಪ್ರತಿಯಾಗಿ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಅವರನ್ನು ಬಿಡುಗಡೆ ಮಾಡಲು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದ್ದಾನೆ.

ಭುಲ್ಲರ್ 1993 ರ ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಬಾಂಬ್ ಸ್ಫೋಟದಲ್ಲಿ ಒಂಬತ್ತು ಮAದಿ ಮೃತಪಟ್ಟು 31 ಮಂದಿ ಗಾಯಗೊAಡಿದ್ದರು.

ಸAಸತ್ತಿನ ಅಡಿಪಾಯವನ್ನು “ಅಲುಗಾಡಿಸುವ” ಪ್ರತಿಜ್ಞೆ ಸೇರಿದಂತೆ ಸಿಖ್ಸ್ ಫಾರ್ ಜಸ್ಟಿಸ್ ನಾಯಕ ಈ ಹಿಂದೆ ಭಾರತದ ವಿರುದ್ಧ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದಾರೆ. ಪ್ರತ್ಯೇಕತಾವಾದಿ ನಾಯಕನ ಹತ್ಯೆಗೆ ಭಾರತ ಸಂಚು ರೂಪಿಸಿದೆ ಎಂದು ಅಮೆರಿಕ ಆರೋಪಿಸಿದೆ. ಭಾರತದ ಸ್ವಂತ ಆಂತರಿಕ ತನಿಖೆಯು ಈ ಸಂಚಿನ ಹಿಂದೆ ಕೆಲವು `ರಾಕ್ಷಸ ಏಜೆಂಟ್’ಗಳನ್ನು ಬಹಿರಂಗಪಡಿಸಿದೆ.

ಏತನ್ಮಧ್ಯೆ, ದೆಹಲಿ ಅಬಕಾರಿ ನೀತಿ “ಹಗರಣ” ದಲ್ಲಿ ಕೇಜ್ರಿವಾಲ್ ಬಂಧನದ ನAತರ ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ. ಬಂಧನದಿAದ ರಕ್ಷಣೆ ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.

ಮಾರ್ಚ್ 21 ರಂದು ಭಾರತೀಯ ಚುನಾವಣಾ ಆಯೋಗ ಸಾರ್ವಜನಿಕಗೊಳಿಸಿದ ಚುನಾವಣಾ
ಬಾಂಡ್‌ಗಳ ದತ್ತಾಂಶದಿAದ ಗಮನ ಸೆಳೆಯಲು ಅರವಿಂದ್ ಕೇಜ್ರಿವಾಲ್ ಅವರನ್ನು ಕಂಬಿ ಹಿಂದೆ ಹಾಕಲಾಗಿದೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular