ನವದೆಹಲಿ : ಅಯೋಧ್ಯೆ ಶ್ರೀರಾಮಂದಿರ ನಿರ್ಮಾಣ ಕಾರ್ಯ ಸಂಪೂರ್ಣಗೊಂಡ ಹಿನ್ನೆಲೆಯಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿದ ಬೆನ್ನಲ್ಲೇ ಇದೀಗ ಹಿಂದೂಗಳ ಶ್ರದ್ಧಾ ಕೇಂದ್ರವಾಗಿರುವ ಮಥುರಾ, ಕಾಶಿಗೂ ತಲುಪುತ್ತೇವೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಶನಿವಾರ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಸಮಾವೇಶವೊಂದರಲ್ಲಿ ಅಯೋಧ್ಯೆ ಬಳಿಕ ಕಾಶಿ, ಮಥುರಾದ ಮೇಲೆ ಬಿಜೆಪಿ ನೇತೃತ್ವದ ಸರ್ಕಾರ ಕಣ್ಣಿಟ್ಟಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಸಮಾಜ ತನ್ನ ಐತಿಹಾಸಿಕ ಪರಂಪರೆ ಬಗ್ಗೆ ಹೆಮ್ಮೆಪಡಬೇಕು. ಸಾಕಷ್ಟು ಸಾಕ್ಷಾö್ಯಧಾರಗಳ ಪರಿಶೀಲಿಸಿ ಅಯೋಧ್ಯೆ ಪರ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದಕ್ಕೆ ಕೃತಜ್ಞರಾಗಿದ್ದೇವೆ. ನಾವು ಎಲ್ಲ ಸ್ಥಳಗಳಿಗೂ ತಲುಪುತ್ತೇವೆ ಎಂದು ಹೇಳುವ ಮೂಲಕ ಕಾಶಿ, ಮಥುರಾ ದೇವಸ್ಥಾನ ಪುನರುತ್ಥಾನದತ್ತ ಸರ್ಕಾರ ಗಮನಹರಿಸುತ್ತದೆ ಎಂದು ಪ್ರತಿಪಾದಿಸಿದರು.


