Thursday, March 5, 2026
Flats for sale
Homeದೇಶನವದೆಹಲಿ : ಅಮಾಯಕರನ್ನು ಕೊಂದರೆ ಪಾಪಿಗಳಿಗೆ ವಿನಾಶವೊಂದೇ ಪರಿಹಾರ : ಆದಂಪುರ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ...

ನವದೆಹಲಿ : ಅಮಾಯಕರನ್ನು ಕೊಂದರೆ ಪಾಪಿಗಳಿಗೆ ವಿನಾಶವೊಂದೇ ಪರಿಹಾರ : ಆದಂಪುರ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ..!

ನವದೆಹಲಿ : ಭಾರತ- ಪಾಕಿಸ್ತಾನದ ಉದ್ವಿಗ್ನತೆಯ ನಡುವೆ ಪಾಕಿಸ್ತಾನದ ದಾಳಿಯಿಂದ ಸೀಮಿತ ಹಾನಿಗೊಳಗಾದ ಭಾರತೀಯ ವಾಯುಪಡೆಯ ನಾಲ್ಕು ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ಪಂಜಾಬ್‌ನ ಆದಂಪುರ ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ವಾಯುಪಡೆಯ ಸಿಬ್ಬಂದಿ ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಪಾಕಿಸ್ತಾನದ ದಾಳಿಯಿಂದ ಭಾಗಶಃ ಹಾನಿಗೊಳಗಾದ ಭಾರತದ ಪ್ರಮುಖ ನಾಲ್ಕು ವಾಯುನೆಲೆಯಲ್ಲಿ ಉಧಂಪುರ, ಪಠಾಣ್‌ಕೋಟ್, ಆದಂಪುರ ಮತ್ತು ಭುಜ್ ಕೂಡ ಸೇರಿವೆ. ಈ ಹಿನ್ನೆಲೆಯಲ್ಲಿ ಪಂಜಾಬ್‌ನ ಆನಂದ ಪುರಂ ವಾಯುನೆಲೆಗೆ ಪ್ರಧಾನಿ ಭೇಟಿ ನೀಡಿದ ವೇಳೆ ವಾಯುಪಡೆಯ ಸಿಬ್ಬಂದಿ ಅವರಿಗೆ ವಾಯುನೆಲೆಯಲ್ಲಿನ ಭದ್ರತಾ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಯೋಧರೊಂದಿಗೆ ಪ್ರಧಾನಿ ಸಂವಾದ ನಡೆಸಿದರು.

ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನಾ ಸಿಬ್ಬಂಧಿ ಪಾಕಿಸ್ತಾನದ ನೆಲಕ್ಕೆ ನುಗ್ಗಿ ಭಯೋತ್ಪಾದಕರ ಶಿಭಿರ ಮತ್ತು ಅವರ ತರಬೇತಿ ಕೇಂದ್ರಗಳನ್ನು ದ್ವAಸ ಮಾಡಿದ ಸಿಬ್ಬಂದಿಯ ಕೆಲಕ್ಕೆ ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ಜೊತೆಗೆ ವಾಯುಪಡೆಯ ಸಿಬ್ಬಂದಿ ಮತ್ತು ಅಧಿಕಾರಿಗಳೊಂದಿಗೆ ಭಾವಚಿತ್ರ ತೆಗೆಸಿಕೊಂಡು ಸಂತಸ ಹAಚಿಕೊAಡರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊAಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರೊಂದಿಗೆ ಕೆಲವು ಫೋಟೋಗಳನ್ನು ಹಂಚಿಕೊAಡಿದ್ದು”ಬಹಳ ವಿಶೇಷ ಅನುಭವ” ಎಂದು ಹೇಳಿದ್ಧಾರೆ.

ಪಂಜಾಬ್‌ನ ಆದಂಪುರ ವಾಯುನೆಲೆಯಲ್ಲಿ ಬೆಳಗ್ಗೆ ನಮ್ಮ ವೀರ ವಾಯು ಯೋಧರು ಮತ್ತು ಸೈನಿಕರನ್ನು ಭೇಟಿಯಾದೆ. ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆ ಸಾರುವವರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿತ್ತು. ಸಶಸ್ತç ಪಡೆಗಳು ನಮ್ಮ ರಾಷ್ಟçಕ್ಕಾಗಿ ಮಾಡುವ ಎಲ್ಲದಕ್ಕೂ ಭಾರತವು ಅವರಿಗೆ ಶಾಶ್ವತವಾಗಿ ಕೃತಜ್ಞವಾಗಿದೆ” ಎಂದು ಪ್ರಧಾನಿ ಹೇಳಿದ್ದಾರೆ.

ಮೂವರು ಲಷ್ಕರ್ ಉಗ್ರರ ಹತ್ಯೆ, ಗಡಿಯಲ್ಲಿ ಕಟ್ಟೆಚ್ಚರ: ಸನ್ನದ್ಧ ಸ್ಥಿತಿಯಲ್ಲಿ ಸೇನೆ.!

ಭಾರತ- ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ನಂತರ ಗಡಿಯಲ್ಲಿ ಪರಿಸ್ಥಿತಿ ತಿಳಿಯಾಗಿದೆಯಾದರೂ ಗಡಿ ಭಾಗದಲ್ಲಿ ಭಾರತದ ಕಟ್ಟೆಚ್ಚರ ಮುಂದುವರೆದಿದೆ. ಉಗ್ರರ ಯಾವುದೇ ಕಾರ್ಯಾಚರಣೆಗಳನ್ನು ಹತ್ತಿಕ್ಕಲು ಸೇನೆ ಸರ್ವಸನ್ನದ್ಧ ಸ್ಥಿತಿಯಲ್ಲಿದೆ. ಇಂದೂ ಸಹ ಮೂವರು ಉಗ್ರರನ್ನು ಸಂಹಾರ ಮಾಡಲಾಗಿದೆ. ದಕ್ಷಿಣ ಕಾಶ್ಮೀರದ ಸೋಫಿಯಾನ್ ಜಿಲ್ಲೆಯ ಕೆಲ್ಲಾರ್‌ನ ಶುಕ್ರೂ ಅರಣ್ಯ ಪ್ರದೇಶದಲ್ಲಿ ಇಂದು ಬೆಳ್ಳAಬೆಳಿಗ್ಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದು ಲಷ್ಕರ್ -ಇ- ತೊಯಿಬಾ ಸಂಘಟನೆಗೆ ಸೇರಿದ ಮೂವರು ಉಗ್ರರು ಹತರಾಗಿದ್ದಾರೆ.

ಅರಣ್ಯ ಪ್ರದೇಶದಲ್ಲಿ ನಾಲ್ವರು ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಸೇನೆ, ಪೊಲೀಸ್ ಮತ್ತು ಸಿಆರ್‌ಪಿಎಫ್‌ನ ಜಂಟಿ ತAಡವು ಅರಣ್ಯ ಪ್ರದೇಶದಲ್ಲಿ ಶೋಧಕಾರ್ಯಾಚರಣೆ ನಡೆಸಿದ್ದು, ಭದ್ರತಾ ಪಡೆಗಳು ಅಡಗಿದ್ದ ಉಗ್ರರ ನೆಲೆಬಳಿ ಬರುತ್ತಿದ್ದಂತೆಯೇ ಏಕಾಏಕಿ ಉಗ್ರರು ಗುಂಡು ಹಾರಿಸಿದ್ದು, ಪ್ರತಿಯಾಗಿ ಭದ್ರತಾ ಪಡೆಗಳು ಉಗ್ರರ ಮೇಲೆ ಗುಂಡು ಹಾರಿಸಿದಾಗ ಮೂವರು ಉಗ್ರರು ಗುಂಡೇಟಿಗೆ ಬಲಿಯಾದರು ಎಂದು ಹೇಳಲಾಗಿದೆ. ಅರಣ್ಯದಲ್ಲಿ ಇನ್ನೂ ಹಲವು ಉಗ್ರರು ಅಡಗಿರುವ ಸಾಧ್ಯತೆ ಇದ್ದು, ಉಗ್ರರ ಶೋಧಕಾರ್ಯ ಮುಂದುವರೆದಿದೆ. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರಿಗು ಗಾಯಗಳಾಗಿದೆ ಎಂದು ಮೂಲಗಳು ತಿಳಿಸಿವೆ .

RELATED ARTICLES

LEAVE A REPLY

Please enter your comment!
Please enter your name here

Most Popular