ನವದೆಹಲಿ : ದ್ವಿಪಕ್ಷೀಯ ಸಭೆ ನಡೆಸಿ ಮಾತನಾಡಿ, ಭಾರತವು ಅಫ್ಘಾನಿಸ್ತಾನದ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ ಹಾಗೂ ಸ್ವಾತಂತ್ಯಕ್ಕೆ ಸಂಪೂರ್ಣ ಬದ್ಧವಾಗಿದೆ.
ಕಾಬೂಲ್‌ನಲ್ಲಿರುವ ಭಾರತದ ತಾಂತ್ರಿಕ ಮಿಷನ್‌ನನ್ನು ರಾಯಭಾರ ಕಚೇರಿಯ ಸ್ಥಾನಮಾನಕ್ಕೇರಿಸಲು ಸಂತೋಷವಾಗುತ್ತಿದೆ ಎಂದರು. ೨೦೨೧ರಲ್ಲಿ ಅಫ್ಘಾನಿಸ್ತಾನವನ್ನು ತಾಲೀಬಾನಿಗಳು ವಶಕ್ಕೆ ಪಡೆದ ಬಳಿಕ ಕಾಬೂಲ್‌ನಲ್ಲಿದ್ದ ಭಾರತೀಯ ರಾಯಭಾರ ಕಚೇರಿಯನ್ನು ಸ್ಥಗಿತಗೊಳಿಸಲಾಗಿತ್ತು. ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಮಾತನಾಡಿ,
ಭಾರತ ವಿರೋಧಿ ಚಟುವಟಿಕೆಗಳಿಗೆ ನಮ್ಮ ನೆಲವನ್ನು ಉಪಯೋಗಿಸಲು ಬಿಡುವುದಿಲ್ಲ. ಅಫ್ಘಾನಿಸ್ತಾನವನ್ನು ಅಮೆರಿಕ ಆಕ್ರಮಿಸಿದಾಗಲೂ ಭಾರತದ ವಿರುದ್ಧ ನಾವು ಒಂದೇ ಒಂದು ಹೇಳಿಕೆಯನ್ನು ನೀಡಿಲ್ಲ. ಭಾರತದ ಜತೆ ಯಾವಾಗಲೂ ಉತ್ತಮ ರಾಜತಾಂತ್ರಿಕ ಬಾAಧವ್ಯ ಹೊಂದಲು ಬಯಸುತ್ತೇವೆ ಎಂದುಅಫ್ಘಾನಿಸ್ತಾನ ವಿದೇಶಾಂಗ ಸಚಿವ ಹೇಳಿದರು.
ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪನ ಸAಭವಿಸಿದಾಗ ಭಾರತವೇ ಮೊದಲು ನೆರವಾಗಿದ್ದು. ಅಫ್ಘಾನಿಸ್ತಾನ ಭಾರತವನ್ನು ಯಾವಾಗಲೂ ಸ್ನೇಹಪರ ರಾಷ್ಟç ಎಂದು ಪರಿಗಣಿಸುತ್ತದೆ. ಭವಿಷ್ಯದಲ್ಲಿ ಭಾರತದ ಜತೆಗೆ ಹೆಚ್ಚಿನ ವ್ಯಾಪಾರ, ಪರಸ್ಪರ ಉತ್ತಮ ಬಾಂಧವ್ಯದ ನಿರೀಕ್ಷೆಯಿದೆ ಎಂದರು.