ನವದೆಹಲಿ : ವೆಸ್ಟ್ ಇಂಡೀಸ್ ಆಲ್‌ರೌಂಡರ್ ಆಂಡ್ರೆ ರಸೆಲ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮುಂಬರುವ ಐದು ಪಂದ್ಯಗಳ ಸ್ವದೇಶಿ ಟಿ20ಸರಣಿಯ ಮೊದಲ ಎರಡು ಪಂದ್ಯಗಳು ತಂಡಕ್ಕೆ ಅವರ ಕೊನೆಯ ಪಂದ್ಯಗಳಾಗಿವೆ.
37 ವರ್ಷದ ರಸೆಲ್ ಅವರನ್ನು ಐದು ಪಂದ್ಯಗಳ ಸರಣಿಗೆ ವಿಂಡೀಸ್ ತAಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಸರಣಿಯ ಮೊದಲ ಎರಡು ಪಂದ್ಯಗಳು ಜಮೈಕಾದ ಸಬೀನಾ ಪಾರ್ಕ್ನಲ್ಲಿ ನಡೆಯಲಿದ್ದು, ಇದು ಈ ಆಲ್‌ರೌಂಡರ್‌ನ ತವರು ಮೈದಾನವಾಗಿದೆ. ಅವರು ತಮ್ಮ ತವರು ಮೈದಾನದಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ. ಅವರ ನಿವೃತ್ತಿಯ ಸುದ್ದಿಯನ್ನು ವಿಂಡೀಸ್ ಕ್ರಿಕೆಟ್ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ತಿಳಿಸಿದೆ.
2019 ರಿಂದ ರಸೆಲ್ ವೆಸ್ಟ್ ಇಂಡೀಸ್ ಪರ ಕೇವಲ ಟಿ20ಐಗಳನ್ನು ಮಾತ್ರ ಆಡುತ್ತಿದ್ದಾರೆ. ಅವರು ವೆಸ್ಟ್ ಇಂಡೀಸ್ ಪರ 84 ಟಿ20ಐ ಪಂದ್ಯಗಳನ್ನು
ಆಡಿದ್ದಾರೆ, 22.೦೦ ಸರಾಸರಿ ಮತ್ತು 163೩.೦8 ಸ್ಟೆçöÊಕ್ ರೇಟ್‌ನಲ್ಲಿ 1,೦78 ರನ್ ಗಳಿಸಿದ್ದಾರೆ. ವಿಂಡೀಸ್ ಕ್ರಿಕೆಟ್ ಸಂಸ್ಥೆ ಸ್ಟಾರ್ ಆಟಗಾರನಿಗೆ ಗೌರವ ಸೂಚಿಸಿದೆ. ಆಂಡ್ರಿ ರಸೆಲ್ ತಮ್ಮ ನಿವೃತ್ತಿಯ ಬಗ್ಗೆ ಸಮಾಜಿಕ ತಾಣದಲ್ಲಿ ತಿಳಿಸಿದ್ದಾರೆ. ವೆಸ್ಟ್ ಇಂಡೀಸ್ ಪರ ಆಡುವುದು ನನಗೆ ದೊಡ್ಡ ವಿಷಯ. ಚಿಕ್ಕವನಿದ್ದಾಗ ಈ ಮಟ್ಟದ ಕ್ರಿಕೆಟ್ ಆಡಲು ಬಯಸಿದ್ದೆ. ಆದರೆ ಆಡುತ್ತೇನೆ ಎಂದು ಭಾವಿಸಿರಲಿಲ್ಲ. ಕ್ರಿಕೆಟ್ ಆಟ ನನಗೆ ಸ್ಪೂರ್ತಿ ನೀಡಿದೆ. ವೆಸ್ಟ್ ಇಂಡೀಸ್ ತಂಡದ ಜೆರ್ಸಿ ತೊಟ್ಟು ಮೈದಾನಕ್ಕೆ ಇಳಿಯುವುದು ದೊಡ್ಡ ಸಾಧನೆ. ಮನೆಯಲ್ಲಿ ಕುಟುಂಬ ಮತ್ತು ಸ್ನೇಹಿತರ ಜೊತೆ ಕಾಲ ಕಳೆಯಲು ನಾನು ಇಷ್ಟಪಡುತ್ತೇನೆ. ನಾನು ಇಷ್ಟ ಪಡುವ ಕ್ರಿಕೆಟ್ ಆಟದ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಲು ಬಯಸುವೆ ಎಂದು ತಿಳಿಸಿದ್ದಾರೆ.
ಆಂಡ್ರೆ ರಸೆಲ್ 2011ರಿಂದ ವೆಸ್ಟ್ ಇಂಡೀಸ್ ತಂಡದ ಪರ ಕ್ರಿಕೆಟ್ ಆಡುತ್ತಿದ್ದಾರೆ. ಅಲ್ಲದೆ ಇವರ ಅಮೋಘ ಆಟದ ಬಲದಿಂದ ಇವರು ಕೆರಿಬಿಯನ್ ತಂಡಕ್ಕೆ ಆಧಾರವಾಗಿದ್ದಾರೆ. ರಸೆಲ್ ವೆಸ್ಟ್ ಇಂಡೀಸ್ ಕಂಡ ಸ್ಟಾರ್ ಪ್ಲೇಯರ್‌ಗಳಲ್ಲಿ ಒಬ್ಬರು. ಇವರು ಆಡಿರುವ 56 ಏಕದಿನ ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ 1034 ರನ್ ಕಲೆ ಹಾಕಿದ್ದಾರೆ. ಈ ವೇಳೆ 4 ಅರ್ಧಶತ ಸಿಡಿಸಿದ್ದಾರೆ. ಇನ್ನು ವಿಂಡೀಸ್ ಪರ 84 ಟಿ2೦ ಪಂದ್ಯಗಳಲ್ಲಿ 1078 ರನ್ ಕಲೆ ಹಾಕಿದ್ದಾರೆ.
ಇವರು 163.೦8 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದಾರೆ. ಇವರು ಈ ಫಾರ್ಮೆಟ್‌ನಲ್ಲಿ ಬಾರಿಸಿದ 71 ರನ್ ಗರಿಷ್ಠ ರನ್ ಆಗಿದೆ. ಆಂಡ್ರೆ ರಸೆಲ್ 2012 ಹಾಗೂ 1016ರಲ್ಲಿ ಐಸಿಸಿ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದಾರೆ. ಇವರು ವಿಂಡೀಸ್ ಪರ ಏಕೈಕ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ರಸೆಲ್ ಟಿ20 ಲೀಗ್‌ನ ಸ್ಟಾರ್ ಆಟಗಾರ. ಇವರು ಇವರೆಗೆ ಆಡಿದ 561 ಪಂದ್ಯಗಳಲ್ಲಿ 9,316 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 33 ಅರ್ಧಶತಕಗಳು ಸೇರಿವೆ. ಇವರು ಅಮೋಘ ಬೌಲಿಂಗ್ ದಾಳಿಗೆ 485 ವಿಕೆಟ್ ಲಭಿಸಿವೆ. ಇತ್ತೀಚಿನ ದಿನಗಳಲ್ಲಿ ವೆಸ್ಟ್ ಇಂಡೀಸ್‌ನಿAದ ನಿವೃತ್ತರಾದ ಎರಡನೇ ಹೈ ಪ್ರೊಫೈಲ್ ರಸೆಲ್. ಇತ್ತೀಚೆಗೆ, ವೆಸ್ಟ್ ಇಂಡೀಸ್‌ನ ಡ್ಯಾಶಿಂಗ್ ಬ್ಯಾಟ್ಸ್ಮನ್ ನಿಕೋಲಸ್ ಪೂರನ್ 29 ನೇ ವಯಸ್ಸಿನಲ್ಲಿ ಅಂತರರಾಷ್ಟಿçÃಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.