ನನದೆಹಲಿ : ಕಳೆದ 15 ವರ್ಷಗಳ ಹಿಂದಿನ ಪರಿಸ್ಥಿಯನ್ನು ಹೋಲಿಸಿದರೆ ಹೊಟ್ಟೆಗೆ ಸರಿಯಾಗಿ ತಿನ್ನೋ ಪರಿಸ್ಥಿತಿ ಇರಲಿಲ್ಲ ಎಂಬುದು ನಿಜವಾದ ವಿಷಯ. ದೇಶದಲ್ಲಿ ಬಡವರು ಬಡವರ ಹಾಗೆಯೇ ಇರುತ್ತಿದ್ದ ಕಾಲ ಇತ್ತು ಆದರೆ ಅದು ಈಗ ಬದಲಾಗಿದೆ.ಕಳೆದ 9 ವರ್ಷಗಳಿಂದ ಭಾರತ ದೇಶದಲ್ಲಿ ಬಡತನ ರೇಖೆಯಲ್ಲಿ ಬಹಳಷ್ಟು ಬದಲಾವಣೆ ಯಾಗಿದೆ ಉತ್ತರ ಪ್ರದೇಶದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ 5.94 ಕೋಟಿ ಜನರು ಬಹುಆಯಾಮದ ಬಡತನದಿಂದ ಹೊರಬಂದಿದ್ದಾರೆ. ಇದು ಬಡತನ ಸಂಖ್ಯೆಯಲ್ಲಿ ಅತಿದೊಡ್ಡ ಇಳಿತವಾಗಿದೆ. ನಂತರ ಬಿಹಾರ 3.77 ಕೋಟಿ ಜನರು, ಮಧ್ಯಪ್ರದೇಶ 2.30 ಕೋಟಿ ಜನರು ಮತ್ತು ರಾಜಸ್ಥಾನದಲ್ಲಿ 1.87 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂಬುದು ವರದಿಯಾಗಿದೆ.
ನೀತಿ ಆಯೋಗ ವರದಿ ಪ್ರಕಾರ, ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಬಡತನದಲ್ಲಿ ಗರಿಷ್ಠ ಇಳಿಕೆಯಾಗಿದೆ. 2013-14 ರಲ್ಲಿ ದೇಶದಲ್ಲಿ ಬಹುಆಯಾಮದ ಬಡತನವು ಶೇಕಡಾ 29.17 ರಷ್ಟಿತ್ತು. ಇದು 2022-23 ರಲ್ಲಿ ಶೇಕಡಾ 11.28 ಕ್ಕೆ ಇಳಿದಿದೆ ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಒಂಬತ್ತು ವರ್ಷಗಳ ಆಡಳಿತಾವಧಿಯಲ್ಲಿ ಒಟ್ಟು 24.82 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂಬುದು ವರದಿ.
ನಾವು ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಪ್ರತಿಯೊಬ್ಬ ಭಾರತೀಯನ ಸಮೃದ್ಧ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು,“ಅತ್ಯಂತ ಉತ್ತೇಜಕ, ಅಂತರ್ಗತ ಬೆಳವಣಿಗೆಯನ್ನು ಹೆಚ್ಚಿಸುವ ಕಡೆಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮ ಆರ್ಥಿಕತೆಗೆ ಪರಿವರ್ತಕ ಬದಲಾವಣೆಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂತೋಷದ ಮಾತನ್ನು ಆಡಿದ್ದಾರೆ.
12 ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದ ಸೂಚಕಗಳ ಮೂಲಕ ರಾಷ್ಟ್ರೀಯ ಬಹು ಆಯಾಮವನ್ನು ತೋರಿಸಲಾಗಿದ್ದು ಇವುಗಳಲ್ಲಿ ಪೌಷ್ಠಿಕಾಂಶ, ಮಕ್ಕಳ ಮತ್ತು ಹದಿಹರೆಯದವರ ಮರಣ, ತಾಯಿಯ ಆರೋಗ್ಯ, ಶಾಲಾ ಶಿಕ್ಷಣದ ವರ್ಷಗಳು, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ, ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳು ಬಹುಆಯಾಮದ ಬಡತನದಲ್ಲಿ ಜನರ ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದಲ್ಲಿನ ಸುಧಾರಣೆಗಳು ಒಳಗೊಂಡಿವೆ ಎಂದು NITI ತನ್ನ ವರದಿಯಲ್ಲಿ ತಿಳಿಸಿದೆ.
ಬಿಹಾರ 3.77 ಕೋಟಿ ಜನರು, ಮಧ್ಯಪ್ರದೇಶ 2.30 ಕೋಟಿ ಜನರು ಮತ್ತು ರಾಜಸ್ಥಾನದಲ್ಲಿ 1.87 ಕೋಟಿ ಜನರು,ಉತ್ತರ ಪ್ರದೇಶದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ 5.94 ಕೋಟಿ ಜನರು ಬಹುಆಯಾಮದ ಬಡತನದಿಂದ ಹೊರಬಂದಿದ್ದು ಇದು ಬಡತನ ಸಂಖ್ಯೆಯಲ್ಲಿ ಅತಿದೊಡ್ಡ ಇಳಿತವಾಗಿದೆ ಎಂದು ವರದಿಯಲ್ಲಿದೆ.
ಕಳೆದ 9 ವರ್ಷಗಳಿಂದ ಸರ್ಕಾರದ ನಿರಂತರ ಸಮರ್ಪಣೆ ಮತ್ತು ದೃಢವಾದ ಬದ್ಧತೆಯು ಅತ್ಯಂತ ದುರ್ಬಲ ಹಾಗೂ ವಂಚಿತರ ಜೀವನವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು,ಭಾರತವು 2030 ರ ಮೊದಲು ಬಹುಆಯಾಮದ ಬಡತನವನ್ನು ಅರ್ಧಕ್ಕೆ ಇಳಿಸುವ ತನ್ನ ಎಸ್‌ಡಿಜಿ ಗುರಿಯನ್ನು (ಸುಸ್ಥಿರ ಅಭಿವೃದ್ಧಿ ಗುರಿ) ಸಾಧಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.


