Friday, February 20, 2026
Flats for sale
Homeರಾಜ್ಯಧಾರವಾಡ : ಅರ್ಜಿ ಸಲ್ಲಿಸಿದ್ದರೂ ಭೂ ಪರಿವರ್ತನೆ ಮಾಡಲು ಅಧಿಕಾರಿಗಳ ಹಿಂದೇಟು,ಜಿಲ್ಲಾಧಿಕಾರಿ ಕಚೇರಿ ಎದುರು ಮಲಗಿ...

ಧಾರವಾಡ : ಅರ್ಜಿ ಸಲ್ಲಿಸಿದ್ದರೂ ಭೂ ಪರಿವರ್ತನೆ ಮಾಡಲು ಅಧಿಕಾರಿಗಳ ಹಿಂದೇಟು,ಜಿಲ್ಲಾಧಿಕಾರಿ ಕಚೇರಿ ಎದುರು ಮಲಗಿ ವ್ಯಕ್ತಿಯಿಂದ ಉಪವಾಸ ಸತ್ಯಾಗ್ರಹ .

ಧಾರವಾಡ : ವ್ಯಕ್ತಿ ಓರ್ವ ಅಧಿಕಾರಿಗಳ ಕೆಲಸಕ್ಕೆ ಬೇಸತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಮಲಗಿ ಉಪವಾಸ ಸತ್ಯಾಗ್ರಹ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದ ವಿಶ್ವನಾಥ್ ಎಂ ಕುಲಕರ್ಣಿ ಎನ್ನುವವರು ಜಮೀನು ಭೂ ಪರಿವರ್ತನೆ ಮಾಡಲು ಕಳೆದ ೫ ತಿಂಗಳ ಹಿಂದೆ ಅರ್ಜಿ ಹಾಕಿದ್ದರು,ಅರ್ಜಿ ಸಲ್ಲಿಸಿದ್ದರೂ ಸಹ ಭೂ ಪರಿವರ್ತನೆ ಮಾಡಲು ಅಧಿಕಾರಿಗಳ ಹಿಂದೇಟು ಹಾಕಿದ ಹಿನ್ನೆಲೆ ADC ಯವರು ಇಲ್ಲಿಯವರೆಗೆ ಅರ್ಜಿಗೆ ಸ್ಪಂದನೆ ನೀಡುತ್ತಿರದ ಕಾರಣ ಕಳೆದ 5ತಿಂಗಳಿನಿಂದ ಅಲೆದು ಅಲೆದು ಸುಸ್ತಾಗಿದ್ದೇನೆ ಎಂದು ಡಿಸಿ ಕಚೇರಿ ಎದುರು ಮಲಗಿ ಮೌನ ಪ್ರತಿಭಟನೆ ನಡೆಸಿದ್ದಾರೆ. ಎಲ್ಲಾ ದಾಖಲೆಗಳನ್ನು ನೀಡಿದರೂ ಸಹ ಭೂ ಪರಿವರ್ತನೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು ಹೀಗಾಗಿ ಅವರು ಮಾಡುವವರೆಗೂ ಸಹ ನಾನು ಪ್ರತಿಭಟನೆ ಮಾಡುತ್ತೇನೆ ನನಗೇನಾದರೂ ಆದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಹೇಳಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular