Monday, March 16, 2026
Flats for sale
Homeಜಿಲ್ಲೆಧರ್ಮಸ್ಥಳ : ಅನ್ಯ ಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಸುತ್ತಾಟ; ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು.

ಧರ್ಮಸ್ಥಳ : ಅನ್ಯ ಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಸುತ್ತಾಟ; ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು.

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಸುತ್ತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ನಡೆಯುತ್ತಲೇ ಇದ್ದು, 20 ದಿನಗಳ ಅಂತರದಲ್ಲಿ ಮೂರನೇ ಪ್ರಕರಣ ನಡೆದಿದೆ.

ಬೆಂಗಳೂರು ಮೂಲದ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದರು. ಇದನ್ನು ಗಮನಿಸಿ ಜೋಡಿಯನ್ನು ತಡೆದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಜೋಡಿಯನ್ನು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಿಲ್ಲೆಯಲ್ಲಿ ಇಂತಹ ಜೋಡಿಗಳ ಸುತ್ತಾಟ ಹೆಚ್ಚಾಗಿದ್ದು ಹಿಂದೂ ಕಾರ್ಯಕರ್ತರು ಹಿಂಬಾಲಿಸಿ ಧಳಿಸಿದ ಅನೇಕ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಹೇಳಿ ಕೇಳಿ ಕೋಮ ಸೂಕ್ಷ್ಮ ಪ್ರದೇಶ. ಯಾವುದೇ ಘಟನೆ ನಡೆದರೂ ಅದಕ್ಕೆ ಕೋಮು ಅನ್ನೋದು ತಳುಕು ಹಾಕಿಕೊಂಡಿರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular