ದುಬೈ : ಭಾರತ ವನಿತೆಯರ ತಂಡ ಮಹಿಳಾ ಟಿ೨೦ ವಿಶ್ವಕಪ್ನಿಂದ ಬಹುತೇಕ ಹೊರಬಿದ್ದಿದೆ. ನಿನ್ನೆ ಶಾರ್ಜಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸೋಲು ಹರ್ಮನ್ಪ್ರೀತ್ ಪಡೆಯನ್ನ ಟೂರ್ನಿಯಿಂದಲ್ಲೇ ಹೊರಬೀಳುವಂತೆ ಮಾಡಿದೆ. ಈ ಸೋಲಿನೊಂದಿಗೆ ಭಾರತ ತಂಡದ ಟಿ೨೦ ವಿಶ್ವಕಪ್ ಕನಸು ಬಹುತೇಕ ಕಮರಿದೆ.
ಭಾರತ ಸೆಮಿ ಪ್ರವೇಶಿಸಬೇಕಿದ್ದಲ್ಲಿ ಪವಾಡವೇ ನಡೆಯಬೇಕಿದೆ. ಅಂದರೆ ಬೇರೆ ತಂಡಗಳ ಫಲಿತಾಂಶವನ್ನು ನೆಚ್ಚಿಕೊಳ್ಳಬೇಕಿದೆ. ಇಂದು ನಡೆಯುವ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯದಲ್ಲಿ ಟೀಮ್ ಇಂಡಿಯಾದ ಟಿ೨೦ ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ.
ಗ್ರೂಪ್-ಎ ಅಂಕ ಪಟ್ಟಿಯಲ್ಲಿ ೮ ಅಂಕಗಳನ್ನು ಕಲೆಹಾಕಿರುವ ಆಸ್ಟ್ರೇಲಿಯಾ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಇನ್ನು ದ್ವಿತೀಯ ಸ್ಥಾನಕ್ಕಾಗಿ ಈಗ ಭಾರತ, ಪಾಕಿಸ್ತಾನ್ ಹಾಗೂ ನ್ಯೂಝಿಲೆಂಡ್ ತಂಡಗಳ ನಡುವೆ ಪೈಪೋಟಿ ಇದೆ. ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ +0.322 ನೆಟ್ ರನ್ ರೇಟ್ ಹೊಂದಿರುವ ಟೀಮ್ ಇಂಡಿಯಾ ದ್ವಿತೀಯ ಸ್ಥಾನದಲ್ಲಿದೆ. ಹಾಗೆಯೇ +0.282 ನೆಟ್ ರನ್ ರೇಟ್ ಹೊಂದಿರುವ ನ್ಯೂಝಿಲೆಂಡ್ ತೃತೀಯ ಸ್ಥಾನದಲ್ಲಿದೆ.
ಇನ್ನು -೦.೪೮೮ ನೆಟ್ ರನ್ ರೇಟ್ ಹೊಂದಿರುವ ಪಾಕಿಸ್ತಾನ್ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿ ಭಾರತ (+0.322) ಮತ್ತು ನ್ಯೂಜಿಲ್ಯಾಂಡ್ (+0.282೨) ತಂಡಗಳಿಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದ್ದರೂ ಅದನ್ನು ನಿರ್ಧರಿಸುವುದು ಪಾಕಿಸ್ತಾನ ತಂಡದ ಫಲಿತಾಂಶ.
ಪಂದ್ಯದ ಫಲಿತಾಂಶವೇ ಇಲ್ಲಿ ನಿರ್ಣಾಯಕ. ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಪಾಕಿಸ್ತಾನ ತಂಡ ಗೆದ್ದರೆ, ನೆಟ್ ರನ್ರೇಟ್ ನೆರವಿನಿಂದ ಭಾರತ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ನ್ಯೂಜಿಲ್ಯಾಂಡ್ ಗೆದ್ದರೆ ೬ ಅಂಕಗಳೊAದಿಗೆ ಸೆಮೀಸ್ ಪ್ರವೇಶಿಸಲಿದೆ ಆಗ ಟೀಮ್ ಇಂಡಿಯಾ ಹೊರಬೀಳಲಿದೆ.


