ದುಬೈ : ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಜೇಯ ಓಟ ಮುಂದುವರೆದಿದ್ದು, ಈ ಬಾರಿಯ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ 2013, 2017ರ ಬಳಿಕ ಮತ್ತೊಮ್ಮೆ ಟ್ರೋಫಿ ಗೆಲ್ಲಲು ಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಮೂಲಕ 2011 ರಿಂದಲೂ ಐಸಿಸಿ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುಗಳನ್ನೇ ಕಂಡಿದ್ದ ಭಾರತ, ಈಗ ಕಾಂಗರೂಗಳಿಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಸದ್ಯ ಇಂದು ನಡೆಯುವ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ನಡುವಿನ 2 ನೇ ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲುವ ತಂಡದೊAದಿಗೆ ಭಾರತ ಪ್ರಶಸ್ತಿಗಾಗಿ ಸೆಣಸಾಡಲಿದೆ.
ಟಾಸ್ ಗೆದ್ದು ನೇರ ಬ್ಯಾಟಿಂಗ್ ಆರಂಭಿಸಿದ ಆಸ್ಟೆçÃಲಿಯಾ ತಂಡ ಮೊದಲ ೩ನೇ ಓವರ್‌ನಲ್ಲೇ ಕೂಪರ್ ಕೊನ್ನಲ್ಲಿ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತು. ವೇಗಿ ಮೊಹಮ್ಮದ್ ಶಮಿ ಭಾರತಕ್ಕೆ ಮೊದಲ ವಿಕೆಟ್ ತಂದಿಟ್ಟರು. ಭಾರತಕ್ಕೆ ಪ್ರತಿ ಐಸಿಸಿ ಟೂರ್ನಿಯಲ್ಲಿ ವಿಲನ್ ಆಗುತ್ತಿದ್ದ ಟ್ರಾವಿಸ್ ಹೆಡ್, 39 ರನ್‌ಗಳಿಸಿ ಮುನ್ನುಗ್ಗುತ್ತಿದ್ದಾಗ ವರುಣ್ ಚಕ್ರವರ್ತಿ ತನ್ನ ಕೈಚಳಕ ಮೆರೆದು ಔಟ್ ಮಾಡುವಲ್ಲಿ ಯಶಸ್ವಿಯಾದರು.ಆದರೂ ಸ್ಟೀವ್ ಸ್ಮಿತ್ ಹಾಗೂ ಹೆಡ್ ಜೋಡಿ ಆಸೀಸ್‌ಗೆ 50 ರನ್‌ಗಳ ಜೊತೆಯಾಟ ನೀಡಿದರು. ಸ್ಟೀವ್ ಸ್ಮಿತ್ ಜೊತೆಗೂಡಿದ 4 ನೇ ಕ್ರಮಾಂಕದ ಆಟಗಾರ ಮಾರ್ನಸ್ ಲಬುಶೇನ್ ಕೂಡ 29 ರನ್‌ಗಳನ್ನು ಗಳಿಸಿದ್ದರಿಂದ ಆಸೀಸ್ ನೂರರ ಗಡಿ ದಾಟಿತು. ಆದರೆ, ಲಬುಶೇನ್ ನಂತರ ಬಂದ ಇAಗ್ಲಿಸ್ ಕೇವಲ 11 ರನ್‌ಗಳಿಸಿ ಕ್ಯಾಚ್ ನೀಡಿದರು.
ಆಸ್ಟ್ರೇಲಿಯಾ : 49.3 ಓವರ್‌ಗಳಲ್ಲಿ 264 ಹೆಡ್ ಸಿ ಗಿಲ್ ಬಿ ಚಕ್ರವರ್ತಿ39, ಕೊನೊಲಿ ಸಿ ರಾಹುಲ್ ಬಿ ಶಮಿ ೦, ಸ್ಟೀವನ್ ಸ್ಮಿತ್ ಬಿ ಶಮಿ 71, ಲ್ಯಾಬುಸ್ಚಾಗ್ನೆ ಎಲ್‌ಬಿಡಬ್ಲೂö್ಯ ಬಿ ಜಡೇಜಾ 03, ಇಂಗ್ಲಿಸ್ ಸಿ ಕೊಹ್ಲಿ ಬಿ ಜಡೇಜಾ 11, ಅಲೆಕ್ಸ್ ಕ್ಯಾರಿ ರನೌಟ್ 61, ಮ್ಯಾಕ್ಸ್ವೆಲ್ ಬಿ ಅಕ್ಷರ್ 07, ದ್ವಾರ್ಶುಯಿಸ್ ಸಿ ಅಯ್ಯರ್ ಬಿ ಚಕ್ರವರ್ತಿ 19, ಜಂಪಾ ಬಿ ಹಾರ್ದಿಕ್ ಪಾಂಡ್ಯ 07, ಎಲ್ಲಿಸ್ ಸಿ ಕೊಹ್ಲಿ ಬಿ ಶಮಿ 10, ತನ್ವೀರ್ ಅಜೇಯ 01, ಇತರೆ (ವೈಡ್ 6) 07.
ಬೌಲಿಂಗ್: ಶಮಿ 10-0-48-3, ಹಾರ್ದಿಕ್ 5.3-0-40-1, ಕುಲದೀಪ್ 8-0-44-0, ಚಕ್ರವರ್ತಿ 10-0-49-2 , ಅಕ್ಷರ್ 8-1-43-1, ರವೀಂದ್ರ ಜಡೇಜಾ 8-40-2.
ಭಾರತ : 48.1 ಓವರ್‌ಗಳಲ್ಲಿ 6 ವಿಕೆಟ್‌ಗೆ 267 ರೋಹಿತ್ ಎಲ್‌ಬಿಡಬ್ಲೂö್ಯ ಬಿ ಕೊನೊಲಿ 28, ಗಿಲ್ ಬಿ ದ್ವಾರ್ಶುಯಿಸ್ 8, ಕೊಹ್ಲಿ ಸಿ ದ್ವಾರ್ಶುಯಿಸ್ ಬಿ ಜಂಪಾ 84, ಶ್ರೇಯಸ್ ಬಿ ಜಂಪಾ 45, ಅಕ್ಷರ್ ಬಿ ಎಲ್ಲಿಸ್ 27, ರಾಹುಲ್ ಅಜೇಯ 42, ಹಾರ್ದಿಕ್ ಪಾಂಡ್ಯ ಸಿ ಮ್ಯಾಕ್ಸ್ವೆಲ್ ಬಿ ಎಲ್ಲಿಸ್ 28, ರವೀಂದ್ರ ಜಡೇಜಾ 2, ಇತರೆ (ವೈಡ್ 3) 3.