ದಾವಣಗೆರೆ : ಜಿಲ್ಲೆಯ ಹೊನ್ನಾಳಿ ತಾಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಮಧ್ಯ ಮಾರಾಟ ಮಳಿಗೆ ಇದ್ದು ಇದರಿಂದ ಗ್ರಾಮದಲ್ಲಿ ಮಹಿಳೆಯರು ಮಕ್ಕಳು ಊರಿನಲ್ಲಿ ಹಗಲು ಹೊತ್ತಿನಲ್ಲಿ ಓಡಾಡುವುದು ಸಮಸ್ಯೆಯಾಗಿತ್ತು.ಇಷ್ಟೇ ಅಲ್ಲದೆ ಸುತ್ತಮುತ್ತ ಗ್ರಾಮಗಳಿಂದ ಮಧ್ಯ ಸೇವನೆ ಮಾಡಲು ಬರುತ್ತಿದ್ದ ಯುವಕರ ದಾಂದಲೆಯಂತೆ ಅತಿ ಹೆಚ್ಚಾಗಿತ್ತು.
ಗ್ರಾಮದಲ್ಲಿ ದೇವಸ್ಥಾನದ ಆವರಣ ಹೊಲಗದ್ದೆಗಳು ಮನೆ ಎತ್ತಲಿನಲ್ಲಿ ಮಧ್ಯದ ಬಾಟಲಿಗಳು ರಾರಾಜಿಸುತ್ತಿದ್ದವು ಇದರಿಂದ ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ.ಇಂದು ಹಬ್ಬದ ದಿನವಾದ ಆದ್ದರಿಂದ ಸುತ್ತಮುತ್ತಲಿನ ಗ್ರಾಮ ಯುವಕರು ಮಧ್ಯ ಸೇವನೆ ಮಾಡಲು ಬಂದು ಅದೇ ಗ್ರಾಮದ ಯುವಕರ ಜೊತೆ ಮಾತಿನ ಚಕಮಕಿ ನಡೆದಿದ್ದರಿಂದ ಗ್ರಾಮಸ್ಥರು ಮತ್ತು ಮಹಿಳೆಯರು ಇಂದು ಎಂ ಎಸ್ ಐ ಎಲ್ ಗೆ ಬೀಗ ಹಾಕಿ ನಮ್ಮ ಗ್ರಾಮದಲ್ಲಿ ಮಧ್ಯ ಮಾರಾಟ ಮಳಿಗೆ ಬೇಡವೇ ಬೇಡ ಎಂದು ಘೇರಾವ್ ಹಾಕಿದರು.
ಈ ಸಮಯದಲ್ಲಿ ಸ್ಥಳೀಯ ಗ್ರಾಮದ ಎಲ್ಲಾ ಮಹಿಳೆಯರು ಮತ್ತು ಮುಖಂಡರು ಇದ್ದರು.