ದಾವಣಗೆರೆ : ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ಆಟಗಾರನಾಗಿದ್ದ ಶ್ರೇಯಸ್ ಮೋವಾ ಅವರು ಟಿ-20 ವಿಶ್ವಕಪ್-2024 ಕ್ಕೆ ಕೆನಾಡ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ದಾವಣಗೆರೆ ಕ್ರಿಕೆಟ್ ಅಕಾಡೆಮಿಯ ಕೋಚ್ ಗೋಪಾಲಕೃಷ್ಣ ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶ್ರೇಯಸ್ ಅವರು 2006 ರಿಂದ 2019 ರವರೆಗೆ ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ್ದರು.ನಗರದ ಬಿಐಇಟಿ ಕಾಲೇಜಿನಲ್ಲಿ ಇಂಜಿನಿಯರಿAಗ್ ವಿದ್ಯಾಭ್ಯಾಸ ಮಾಡಿ ಕೆಲಸದ ನಿಮಿತ್ತ ಕೆನಡಾಕ್ಕೆ ತೆರಳಿದ್ದರು.ನಂತರವೂ ತಮ್ಮ ಕ್ರಿಕೇಟ್ ಅಭ್ಯಾಸದಲ್ಲಿ ತೊಡಗಿದ್ದರು ಇದೀಗ ಕೆನಡಾ ತಂಡಕ್ಕೆ ಟಿ -20 ವಿಶ್ವಕಪ್ ಗೆ ಆಯ್ಕೆಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ನಾಗರಾಜ್ ಪಿ.ವಿ. ಎಂಬ ನುರಿತ ಕೆ.ಎಸ್.ಸಿ.ಎ. ಕೋಚ್ ಬಳಿ ತರಬೇತಿಯನ್ನು ಪಡೆದಿದ್ದರು.
ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ಅಂತರ್‌ರಾಜ್ಯದ ವಯೋಮಿತಿ ಒಳಗೊಂಡ 19 ವರ್ಷದೊಳಗಿನ,16 ವರ್ಷದೊಳಗಿನ ಪಂದ್ಯಾವಳಿಗಳಿಗೆ ಆಯ್ಕೆಯಾಗಿ. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು.
ತುಮಕೂರು ಕ್ರಿಕೆಟ್ ವಲಯದ ಸಂಚಾಲಕರಾದ ಕೆ. ಶಶಿಧರ್‌ರವರ ವೀನಸ್ ಕ್ರಿಕೆಟ್ ಕ್ಲಬ್ ತಂಡವನ್ನು ಸುಮಾರು ವರ್ಷಗಳ ಕಾಲ ಪ್ರತಿನಿಧಿಸಿದ್ದಾರೆ. ತದನಂತರದ ವರ್ಷಗಳಲ್ಲಿ ತಮ್ಮ ಕ್ರಿಕೆಟ್ ವೃತ್ತಿಯನ್ನು ಮುಂದುವರೆಸಲು ಕೆನಡಾ ದೇಶದ ಪೌರತ್ವವನ್ನು ಪಡೆದುಕೊಂಡು ಕ್ರಿಕೆಟ್ ವೃತ್ತಿಯನ್ನು ಮುಂದುವರೆಸಿದ್ದಾರೆ. ಹಲವು ವರ್ಷಗಳ ನಂತರ ಕೆನಡಾದ ರಾಷ್ಟಿçÃಯ ತಂಡಕ್ಕೆ ಆಯ್ಕೆಯಾಗಿ ಹಲವು ಅಂತರಾಷ್ಟಿçÃಯ ಪಂದ್ಯಗಳನ್ನು ಆಡಿದ್ದಾರೆ. ಜೂನ್-2024 ರಿಂದ ಆರAಭವಾಗುವ ಟಿ-20 ವಿಶ್ವಕಪ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆಂದರು. ಸುದ್ದಿಗೋಷ್ಠಿಯಲ್ಲಿ ಶ್ರೇಯಸ್ಮೋ ವಾ ಅವರ ಪೋಷಕರಾದ ಎಂ.ಜಿ. ವಾಸುದೇವರೆಡ್ಡಿ, ಎನ್.ಯಶೋಧ,ಕೋಚ್ ತಿಮ್ಮೇಶ್ ಉಪಸ್ಥಿತರಿದ್ದರು.