ತ್ರಿಶೂರ್ : ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಪ್ರಸಿದ್ಧ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ, ತ್ರಿಶೂರ್ ಜಿಲ್ಲೆಯ ತ್ರಿಪ್ರಯಾರ್ ಶ್ರೀರಾಮ ಸ್ವಾಮಿ ದೇವಾಲಯಕ್ಕೆ ಪ್ರಧಾನಿ ಭೇಟಿ ನೀಡಲಿದ್ದು, ನಂತರ ಕೊಚ್ಚಿಗೆ ಹಿಂತಿರುಗುವರು ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನೆಡುಂಬಸ್ಸೆರಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು.ಬಳಿಕ ಮೋದಿ ಮಹಾರಾಜ ಕಾಲೇಜು ಮೈದಾನದಿಂದ ಸರ್ಕಾರಿ ಅತಿಥಿ ಗೃಹದವರೆಗೆ ಅದ್ಧೂರಿ ರೋಡ್ ಶೋ ನಡೆಸಿದರು. 1.3 ಕಿಲೋಮೀಟರ್ ರೋಡ್ ಶೋ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಬಿಜೆಪಿ ಬೆಂಬಲಿಗರು ಸೇರಿದAತೆ ಸಾವಿರಾರು ಜನರು ಹೂ, ಹೂಮಾಲೆಗಳು ಮತ್ತು ಪಕ್ಷದ ಧ್ವಜಗಳೊಂದಿಗೆ ಸಾಲುಗಟ್ಟಿ ನಿಂತಿದ್ದರು.
ಕೇರಳ ಪ್ರವಾಸದಲ್ಲಿರುವ ಪ್ರದಾನಿ ನರೇಂದ್ರ ಮೋದಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ಹೊಸ ಡ್ರೆöÊ ಡಾಕ್ ಮತ್ತು 4000 ಕೋಟಿ ರೂ.ಗೂ ಹೆಚ್ಚು ವೆಚ್ಚದ ಮೂರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಕೇರಳದ ಜನಪ್ರಿಯ ಸಿನಿಮಾ ನಟ ಸುರೇಶ್ ಗೋಪಿ ಅವರ ಮಗಳ ಮದುವೆ ಸಮಾರಂಭದಲ್ಲೂ ಪ್ರಧಾನಿ ಪಾಲ್ಗೊಂಡು ನವ ವಧು ವರರಿಗೆ ಆಶೀರ್ವಾದಮಾಡಿದರು ಎಂದು ತಿಳಿದು ಬಂದಿದೆ.
ಕೊಚ್ಚಿಯ ಮರೈನ್ ಡ್ರೆವ್ ನಲ್ಲಿ ಸುಮಾರು ೬,೦೦೦ ‘ಶಕ್ತಿ ಕೇಂದ್ರ’ಗಳ ಉಸ್ತುವಾರಿಗಳ ಪಕ್ಷದ ಸಭೆ ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ನಂತರ ಸಂಜೆ ಮೋದಿ ದೆಹಲಿಗೆ ತೆರಳುವರು. ಮಂಗಳವಾರ ಪ್ರಧಾನಿ ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ರಾಮಾಯಣ ಮಹತ್ವದ ಸ್ಥಳ ಇದಾಗಿದೆ.
ಎರಡು ವಾರಗಳ ಅವಧಿಯಲ್ಲಿ ಕೇರಳಕ್ಕಿದು ಪ್ರಧಾನಿಯವರ ೨ನೇ ಭೇಟಿಯಾಗಿದೆ. ಇತ್ತೀಚಿಗೆ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ೧,೧೫೦ ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದರು. ಆ ಬಳಿಕ ತ್ರಿಶೂರ್ ಜಿಲ್ಲೆಯಲ್ಲಿ ಬಿಜೆಪಿ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದರು.


