ತುಮಕೂರು : ಮಾಜಿ ಸಂಸದ ಅನಂತಕುಮಾರ್ ಹೆಗ್ಗಡೆ ಬೆಂಗಾವಲು ಸಿಬ್ಬಂದಿಯಿಂದ ಹಲ್ಲೆಗೊಳಗಾದ ಘಟನೆ ನೆಲಮಂಗಲ ತಾಲ್ಲೂಕಿನ ದಾಬಸ್ ಪೇಟೆ ಬಳಿ ಕಳೆದ ರಾತ್ರಿ ಘಟನೆ ನಡೆದಿದೆ.
ಗಾಯಾಳುಗಳಿಗೆ ದಾಬಸ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಲ್ಮಾನ್ (27), ಸೈಫ್ (28), ಗುಲ್ಸುರು ಉನ್ನಿಸ್ಸಾ(45) ಇಲಿಯಾಸ್ ಖಾನ್ (59) ಹಲ್ಲೆಗೊಳಗಾದವರು.
ಪ್ರಾಥಮಿಕ ಮಾಹಿತಿಯ ಪ್ರಕಾರ ಓವರ್ಟೇಕ್ ವಿಚಾರದಲ್ಲಿ ಗಲಭೆ ಸುರುವಾಗಿದೆಂದು ಮಾಹಿತಿ ದೊರೆತಿದೆ.ಈ ಬಗ್ಗೆ ಏಕಾಏಕಿ ಬಂದು ಮನಬಂದಂತೆ ತಳಿಸಿರುವ ಆರೋಪಮಾಡಲಾಗಿದೆ. ಗಾಯಳುಗಳಿಗೆ ಮೂರು ಹಲ್ಲು ಮುರಿತ, ತುಟಿ ಹಾಗೂ ದವಡೆಗೆ ಗಾಯಗಳಾಗಿವೆ.ಗಾಯಾಳುಗಳು ದಾಬಸ್ ಪೇಟೆ ಬಳಿಯ ಹಾಲೇನಹಳ್ಳಿ ನಿವಾಸಿಗಳು ಎಂದು ತಿಳಿದಿದೆ.
ತುಮಕೂರು ನಗರದ ಇಸ್ರಾ ಶಾದಿ ಮಹಲ್ ನಲ್ಲಿ ಸಂಬಂಧಿಕರ ಮದುವೆ ಮುಗಿಸಿಕೊಂಡು ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ 7 ಜನ ಪ್ರಯಾಣ ಮಾಡುತ್ತಿದ್ದು . ಈ ಪೈಕಿ ಮೂವರು ಪುರುಷರು – ನಾಲ್ವರು ಮಹಿಳೆಯರಿದ್ದರು. ಅನಂತ್ ಕುಮಾರ್ ಹೆಗ್ಡೆ ಗನ್ ಮ್ಯಾನ್ ಗಳಿಂದ ಏಕಾಏಕಿ ಕಾರು ತಡೆದು ಹಲ್ಲೆ ಮಾಡಿರೋ ಆರೋಪಿಸಿದ್ದು ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಪ್ರಕರಣದ ತನಿಖೆ ನಡೆಯುತ್ತಿದೆ.