ತುಮಕೂರು : ಮಹಿಳೆಯ ಬರ್ಬರ ಕೊಲೆ ಮಾಡಿ ಹಲವೆಡೆ ಎಸೆದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಬಳಿ ನಡೆದಿದೆ. ಮಹಿಳೆಯ ಶವದ ತುಂಡುಗಳನ್ನ ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿ ಎಸೆದಿರುವ ದೃಶ್ಯ ಬೆಳಕಿಗೆ ಬಂದಿದೆ. ಕವರ್‌ನಲ್ಲಿ ಶವದ ತುಂಡುಗಳ ಜೊತೆ ಕಬ್ಬಿಣದ ಮೆಟಲ್‌ಗಳ ಪೀಸ್‌ಗಳು ಪತ್ತೆಯಾಗಿದೆ.
ಮೊದಲಿಗೆ ಚಿಂಪುಗಾನಹಳ್ಳಿಯ ಮುತ್ಯಾಲಮ್ಮ ದೇವಸ್ಥಾನದ ಬಳಿ ಪ್ರಕರಣ ಬೆಳಕಿಗೆ ಬೆಳಕಿಗೆ ಬಂದಿದ್ದು ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನಲ್ಲೂ ಶವದ ತುಂಡುಗಳು ಪತ್ತೆಯಾಗಿದೆ. ಬಳಿಕ ಕೊರಟಗೆರೆಯ ನಾಲ್ಕು ದಿಕ್ಕಿನಲ್ಲೂ 18 ಕಡೆಗಳಲ್ಲಿ ಕಿಡಿಗೇಡಿಗಳು ತುಂಡುಗಳನ್ನು ಎಸೆದಿದ್ದಾರೆ. ನಿನ್ನೆ ರಾತ್ರಿ ಸಿದ್ದರಬೆಟ್ಟದ ಸುತ್ತಮುತ್ತಲಿನಲ್ಲಿ 10 ಕಡೆಗಳಲ್ಲಿ ಶವದ ತುಂಡುಗಳು ಪತ್ತೆಯಾಗಿದ್ದು ಈ ಹಿಂದೆ ಕೈ-ಕಾಲು, ಕರಳು, ಹೊಟ್ಟೆಯ ವಿವಿಧ ಭಾಗಗಳು ಪತ್ತೆಯಾಗಿತ್ತು.
ಕಳೆದ ರಾತ್ರಿ ಮಲ್ಲೇಕಾವು, ನೇಗಲಾಲ, ಮರೇನಾಯಕನಹಳ್ಳಿ, ಜೋನಿಗರಹಳ್ಳಿ ಮತ್ತು ಸಿದ್ದರಬೆಟ್ಟದ ಸಮೀಪದ ಮಹಿಳೆಯ ದೇಹದ ವಿವಿಧ ಭಾಗಗಳು ಪತ್ತೆಯಾಗಿದ್ದು ನಿನ್ನೆ ರಾತ್ರಿ ಕ್ಷೇತ್ರದ ಪೂರ್ವ ದಿಕ್ಕಿನಲ್ಲಿ ಕೈ-ಕಾಲು ಪತ್ತೆಯಾದ್ರೆ ಪಶ್ಚಿಮದ ದಿಕ್ಕಿನಲ್ಲಿ ತಲೆ, ಎದೆಯ ಭಾಗ ಪತ್ತೆ ತಲೆ ಹಾಗೂ ದೇಹದ ವಿವಿಧ ಭಾಗಗಳು ಪತ್ತೆಯಾಗಿವೆ.
ಮನು ಕುಲವೇ ಬೆಚ್ಚಿಬೀಳಿಸುವ ಈ ಕೃತ್ಯದ ಲಕ್ಷಣ ವಾಮಾಚಾರದ ಶಂಕೆ ವ್ಯಕ್ತವಾಗಿದೆ. ಕೊರಟಗೆರೆ ಪೊಲೀಸರ ರಾತ್ರಿಯಿಡಿ ಕಾರ್ಯಚರಣೆ ನಡೆಸಿ, ಮಹಿಳೆಯ ಎಲ್ಲಾ ಭಾಗಗಳನ್ನು ಶೇಖರಣೆ ಮಾಡಿ ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದಾರೆ. ಕೊರಟಗೆರೆ ಹಾಗೂ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತುಮಕೂರು ಜಿಲ್ಲಾ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


