ತುಮಕೂರು : ಬೀದಿ ದೀಪ ಕಳಚಿ ಬಿದ್ದು ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಗೌರಿಬಿದನೂರು ಮೂಲದ ಸಿಕಂದರ್( 45) ಮೃತ ವ್ಯಕ್ತಿ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಸಿಕಂದರ್ ಮೇಲೆ ಬೀದಿ ದೀಪ ಕಳಚಿ ಬಿದ್ದ ಘಟನೆ ನವೆಂಬರ್ 2 ರಂದು ನಡೆದಿತ್ತು.ಘಟನೆಯಲ್ಲಿ ಸಿಕಂದರ್‌ನ ಬೆನ್ನು ಮೂಳೆ ಮುರಿದಿತ್ತು.ಸರ್ವಿಕಲ್ ಬೋನ್ ಕ್ರಾಶ್ ಆಗಿ ಸ್ಪೈನಲ್ ಕಾರ್ಡ್ ಮುರಿದಿತ್ತು. ಸಿಕಂದರ್ ಗೆ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಸಿಕಂದರ್ ಮೃತಪಟ್ಟಿದ್ದಾರೆ .ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂಬ ಆರೋಪಕೇಳಿಬಂದಿದ್ದು ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


