Saturday, March 14, 2026
Flats for sale
Homeಕ್ರೈಂತುಮಕೂರು : ಬಾಯ್‌ಫ್ರೆಂಡ್‌ನೊಂದಿಗೆ ಸಿದ್ದಗಂಗಾ ಮಠದ ಜಾತ್ರೆಗೆ ಬಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ,ಮೂವರು ಕಾಮುಕರ...

ತುಮಕೂರು : ಬಾಯ್‌ಫ್ರೆಂಡ್‌ನೊಂದಿಗೆ ಸಿದ್ದಗಂಗಾ ಮಠದ ಜಾತ್ರೆಗೆ ಬಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ,ಮೂವರು ಕಾಮುಕರ ಬಂಧನ.

ತುಮಕೂರು : ಸಿದ್ದಂಗಾ ಮಠದ ಜಾತ್ರೆಯ ಸಮಯದಲ್ಲಿ ಸಾವಿರಾರು ಜನರು ಆಗಮಿಸುತ್ತಾರೆ,ಯುವತಿಯರು ಹಾಗೂ ಬಾಲಕಿಯರಿಗೆ ಬೆಟ್ಟದ ಕಡೆಗೆ ಹೋಗದಂತೆ ಪೊಲೀಸು ನಿಗಾವಹಿಸಿ ಹೆಚ್ಚರಿಕೆಯ ಸಂದೇಶವನ್ನು ನೀಡುತ್ತಾರೆ ಆದರೂ ಪೊಲೀಸರ ಕಣ್ಣು ತಪ್ಪಿಸಿ ತನ್ನ ಬಾಯ್‌ಫ್ರೆಂಡ್‌ನೊಂದಿಗೆ ಜಾತ್ರೆಗೆ ಬಂದ ಬಾಲಕಿಯೂ ಕೂಡ ಬೆಟ್ಟದ ಬಳಿ ಮಾತನಾಡಲು ಹೋಗಿದ್ದಾಳೆ ಇವರನ್ನು ಹಿಂಬಾಲಿಸಿಕೊಂಡು ಹೋದ ಕಿಡಿಗೇಡಿಗಳು ಅವರು ಕುಳಿತಿದ್ದ ವಿಡಿಯೋವನ್ನು ಮಾಡಿ ತೋರಿಸಿ ಬೆದರಿಸಿದ್ದಾರೆ. ನಂತರ, ಬಾಲಕಿಯನ್ನು ಎಳೆದೊಯ್ದು ಮನೆಯೊಂದರಲ್ಲಿ ಕೂಡಿಹಾಕಿ ಅತ್ಯಾಚಾರ ಮಾಡಿದ ಘಟನೆ ವರದಿಯಾಗಿದೆ

ಕಾಮುಕರು ಸಮೂಹಿಕ ಅತ್ಯಾಚಾರ ಮಾಡುವ ವಿಡಿಯೋವನ್ನು ಕೂಡ ಮೊಬೈಲ್‌ನಲ್ಲಿ ರೆಕಾರ್ಟ್‌ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಂತರ, ಯುವತಿಗೆ ನಿನ್ನ ವಿಡಿಯೋ ಬಿಡುಗಡೆ ಮಾಡುವುದಾಗಿ ಹಾಗೂ ಹಲ್ಲೆ ಮಾಡುವುದಾಗಿ ಬೆದರಿಸಿ ಅಲ್ಲಿಂದ ಕಳಿಸಿದ್ದಾರೆ. ತೀವ್ರ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಪೋಷಕರು ವಿಚಾರಣೆ ಮಾಡಿದಾದ ಸಾಮೂಹಿಕ ಅತ್ಯಾಚಾರ ಆಗಿರುವುದನ್ನು ಹೇಳಿದ್ದಾಳೆ. ವಿಷಯ ಹರಿತ ಪೋಷಕರು ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಎಚ್ಚೆತ್ತ ಪೊಲೀಸರು ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಮೂವರನ್ನು ಬಂಧಿಸಿದ್ದಾರೆ. ಬಂಧಿತ ಕಾಮುಕರು ಬಂಡೆಪಾಳ್ಯ ನಿವಾಸಿಗಳಾದ ಅಮೋಘ, ಹನುಮಂತ, ಪ್ರತಾಪ್ ಎಂದು ತಿಳಿದುಬಂದಿದೆ.ಎಂಬಾತನನ್ನ ಪೊಲೀಸರು ಬಂಧಿಸಿ ಜೈಲಿಹಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular