ತುಮಕೂರು : ನ್ಯಾಯ ಕೊಡಿಸಿ ಅಂತಾ ನ್ಯಾಯಾಧೀಶರಿಗೆ, ಎಸ್.ಪಿ, ಡಿಸಿಗೆ ಪತ್ರ ಬರೆದಿಟ್ಟು, ಕೆಎಸ್‌ಆರ್‌ಟಿಸಿ ಬಸ್ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ. ನಾರಾಯಣ್. ಆರ್. ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ಇಲಾಖೆ ಬಸ್ ಚಾಲಕ.
ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ತನ್ನ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದು ವಿಷ ಕುಡಿದಿರುವ ಬಗ್ಗೆ ಮಾಹಿತಿ ಗೊತ್ತಾದ ಕೂಡಲೇ ಕುಟುಂಬಸ್ಥರು ಕುಣಿಗಲ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸೂಕ್ತ ಚಿಕಿತ್ಸೆ ಕೊಡಿಸಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತುಮಕೂರು – ಮೈಸೂರು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕಳೆದ ಡಿ. 10ರಂದು ಕಾನೂನು ಪದವಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳಿಂದ ತುಮಕೂರಿನ ಎಸ್‌ಎಸ್‌ಐಟಿ ಕಾಲೇಜು ಎದುರು ನಾರಾಯಣ್ ಮೇಲೆ ಹಲ್ಲೆ ನಡೆದಿತ್ತು. ಚಾಲಕನ ಮೇಲೆ ಹಲ್ಲೆ ನಡೆದಿತ್ತು.
ಈ ಬಗ್ಗೆ ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ಆರೋಪಿಸಿ ನಾರಾಯಣ್ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತಪ್ಪಿತಸ್ಥರಿಗೆ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ತಿಳಿದಿದೆ. ನಿನ್ನೆ ಇಡೀ ದಿನ ನಾರಾಯಣರನ್ನು ಠಾಣೆಯಲ್ಲೇ ಪೊಲೀಸರು ಕಾಯಿಸಿ ಕಳುಹಿಸಿದ್ದು . ಹಲ್ಲೆ ನಡೆಸಿದವರನ್ನ ಕರೆಸಿ ವಿಚಾರಣೆ ಮಾಡದೆ, ನಾರಾಯಣ್‌ಗೆ ಧಮ್ಕಿ ಹಾಕಿ ಕಳುಹಿಸಿದ್ದಾರೆಂದು ಮನನೊಂದು ಮನೆಗೆ ತೆರಳಿದ ನಾರಾಯಣ್ ಇಂದು ಮುಂಜಾನೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇದೀಗ, ಸಾವು- ಬದುಕಿನ ಮಧ್ಯೆ ಚಾಲಕ ನಾರಾಯಣ್ ಹೋರಾಡುತ್ತಿದ್ದು ಈ ಮಧ್ಯೆ, ಚಾಲಕನ ವಿರುದ್ಧವೂ ಕಾನೂನು ಪದವಿ ಓದುತ್ತಿರುವ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಇದರಿಂದ ತಪ್ಪಿತಸ್ಥರೇ ಪ್ರತಿದೂರು ನೀಡಿದ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಮಾಹಿತಿ ದೊರೆತಿದೆ.ಇದೀಗ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ.