ತುಮಕೂರು : ತುಮಕೂರು ನಗರದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಹಿನ್ನೆಲೆ ನಗರ ಕೇಸರಿಮಯವಾಗಿ ಕಂಗೊಳಿಸಿದೆ.ಆದರೆ ಪಥ ಸಂಚಲನ ಕಾರ್ಯಕ್ರಮ ತಾರಕಕ್ಕೇರಿದ್ದು ಸರ್ಕಾರಿ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.

ತುಮಕೂರು ಜಿಲ್ಲಾಡಳಿತ ವರ್ಸಸ್ ಆರ್ ಎಸ್ ಎಸ್ ನಡುವೆ ಜಟಾಪಟಿ ನಡೆದಿದ್ದು ಕಾಲೇಜು ಮೈದಾನದಲ್ಲಿ ಈಗಾಗಲೇ ಪೊಲೀಸ್ ಪಹರೆ ಬಂದಿಳಿದಿದೆ. ಕಾರ್ಯಕ್ರಮದ ಅನುಮತಿ ಸಿಗದ ಹಿನ್ನೆಲೆ ಮೈದಾನದ ತುಂಬಾ ಪೋಲೀಸರ ಬಂದಿದ್ದು ಯಾವುದೇ ಕಾರ್ಯಕ್ರಮ ನಡೆಯದಂತೆ ಪೊಲೀಸರು ತಡೆಯಲಿರುವ ಸಾಧ್ಯತೆವಿದೆ.
ಇತ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಜಿಲ್ಲಾಧಿಕಾರಿ ಶುಭಾಕಲ್ಯಾಣ್, ಎಸ್ಪಿ ಅಶೋಕ್ ಕುಮಾರ್ರುವ ಯವರು ಬೀಡು ಬಿಟ್ಟದ್ದು ನಿರಂತರ ಸಭೆ ನಡೆಯುತ್ತಿದೆಂದು ಮಾಹಿತಿ ದೊರತಿದೆ. ಇತ್ತ ಅನುಮತಿಗಾಗಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್. ಮತ್ತೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದು ಸಾವಿರಾರು ಆರ್ಎಸ್ ಎಸ್ ಕಾರ್ಯಕರ್ತರು ಪಾಲ್ಗೊಳ್ಳುವ ಸಮಾವೇಶಕ್ಕೆ ಅನುಮತಿಗಾಗಿ ಪರಿತಪಿಸುತ್ತಿದ್ದಾರೆ.