ತುಮಕೂರು : ಜಿಲ್ಲೆಯ ತಿಪಟೂರು ತಾಲೂಕಿನ ಹಟ್ನಾ ಗ್ರಾಮದಲ್ಲಿ ಕಿರಾತಕರು ದೇವರಿಗೆ ವಾಮಾಚಾರ ಮಾಡಿ, ದೇವಸ್ಥಾನದ ಬಾಗಿಲಿಗೆ ಬೆಂಕಿ ಇಟ್ಟ ಘಟನೆ ನಡೆದಿದೆ. ಕಳೆದ ರಾತ್ರಿ ಕಿಡಿಗೇಡಿಗಳು ಹಟ್ನಾ ಗ್ರಾಮದ ಗ್ರಾಮ ದೇವತೆ ಕೆಂಪಮ್ಮ ದೇವಿಗೆ ವಾಮಾಚಾರ ಮಾಡಿದ್ದು ಇಂದು ಮುಂಜಾನೆ ಪೂಜೆ ಸಲ್ಲಿಸಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ವಾಮಾಚಾರಕ್ಕೆ ಬಳಸಿದ ಕೆಲ ವಸ್ತುಗಳು ಪತ್ತೆಯಾಗಿದ್ದು, ಇನ್ನೂ ಕೆಲ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನೆ ಕಂಡು ಔಹಾರಿದ ಭಕ್ತಾಧಿಗಳು, ಕಿರಾತಕರ ಬಂಧನಕ್ಕೆ ಆಗ್ರಹಿಸಿದ್ದಾರೆ. ತಿಪಟೂರಿನ ಕಿಬ್ಬನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಈ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.