ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಗವಿರಂಗನಾಥ ಸ್ವಾಮಿ ಬೆಟ್ಟದ ಬಳಿ ಇರುವ ತೋಟದಲ್ಲಿ ಕರಡಿಯೊಂದು ತಂತಿ ಬೇಲಿಗೆ ಸಿಲುಕಿ ಒದ್ದಾಡಿದ ಘಟನೆ ನಡೆದಿದೆ.
ತೋಟವೊಂದಕ್ಕೆ ಬಂದಿದ್ದ ಕರಡಿ ತಂತಿ ಬೇಲಿಗೆ ಸಿಲುಕಿ ಹಾಕಿಕೊಂಡಿದ್ದು ಸಿಲುಕಿಕೊಂಡ ಕರಡಿ ಬಿಡಿಸಿಕೊಳ್ಳಲು ಮತ್ತೊಂದು ಕರಡಿ ಪರದಾಟ ನಡೆಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಮತ್ತೊಂದು ಕರಡಿ ಅದನ್ನು ಬಿಡಿಸಿಕೊಳ್ಳಲು ಒದ್ದಾಡಿದ್ದು ಬಳಿಕ ಜೆಸಿಬಿ ಬಳಸಿಕೊಂಡು ತಂತಿ ಬೀಳಿಸಿ ಸಿಲುಕಿದ್ದ ಕರಡಿಯನ್ನು ಗ್ರಾಮಸ್ಥರು ಬಿಡಿಸಿದ್ದಾರೆ.


